Nanna Muddina Giniye Lyrics

ನನ್ನ ಮುದ್ದಿನ ಗಿಣಿಯೆ Lyrics

in Mother India

in ಮದರ್ ಇಂಡಿಯಾ

LYRIC

Song Details Page after Lyrice

-
ನನ್ನ ಮುದ್ದಿನ ಗಿಣಿಯೆ
ನನ್ನ ಮುದ್ದಿನ ತೆನೆಯೆ
ಓ ತಣಿದ ಹಾಲಿನ ಕೆನೆಯೆ
ಮಲಗೊ ಕೊಳಲಿನ ದನಿಯೆ
ಬರಲಿ ಬಣ್ಣದ ಕನಸ್ಸು ತಾ ತರಲಿ ತರತರದ ತಿನಿಸು
ಕುಣಿದು ನಲಿದು ನೀ ನಗುತಿರು ಮಗುವೆ
ನನ್ನ ಮುದ್ದಿನ ಗಿಣಿಯೆ
ನೀ ನನ್ನ ಮುದ್ದಿನ ತೆನೆಯೆ
 
ಜೋ ಕಂದ ಗೋವಿಂದ ಜೋ ಜೋ ಓ ಕಂದ
ಜೋ ಕಂದ ಗೋವಿಂದ ಜೋ ಜೋ ಓ ಕಂದ
ಮಣ್ಣು ಮೆತ್ತಿದ ಚಿನ್ನವೆ ಎದೆಯ ಆಳದ ರನ್ನವೆ
ಮಲಗು ಮುಚ್ಚಿ ಕಣ್ಣೆಡೆ ನನ್ನ ಕಣ್ಣಿನ ಬಣ್ಣವೆ ಜೋ ಜೋ
ಜೋ ಕಂದ ಗೋವಿಂದ ಜೋ ಜೋ ಓ ಕಂದ
ಜೋ ಕಂದ ಗೋವಿಂದ ಜೋ ಜೋ ಓ ಕಂದ
 
ಏಕೊ ಇಲ್ಲಿ ಜನಿಸಿದೆ ನನ್ನ ಕಂದ ಎನಿಸಿದೆ
ಕೊಡಲು ನನ್ನಲ್ಲೇನಿದೆ ತುಟಿಯ ಮುತ್ತೊಂದಲ್ಲದೆ
ಏನೆ ಇದ್ದರು ಬಡತನ ಉಂಟು ಪ್ರೀತಿಯ ಒಡೆತನ
ಒಲವಿಗೆ ಇಲ್ಲ ಹರಕೆಯು ಇರಲು ತಾಯಿಯ ಹರಕೆಯು
ನಿನ್ನ ಕನಸ್ಸಿಗೆ ಇಳಿಯಲಿ ಚಂದ್ರ ಸುರಿಯುವ ಮಳೆಯಲಿ
ನಿನ್ನ ಕಣ್ಣಿನ ಸೆರೆಯಲಿ ತಾರೆ ಅಂಗಡಿ ತೆರೆಯಲಿ ಜೋ ಜೋ
ಜೋ ಕಂದ ಗೋವಿಂದ ಜೋ ಜೋ ಓ ಕಂದ
ಜೋ ಕಂದ ಗೋವಿಂದ ಜೋ ಜೋ ಓ ಕಂದ
 
ನನ್ನ ಕಂದ ಬೆಳೆಯಲಿ ಎಲ್ಲ ನೋವ ಕಳೆಯಲಿ
ಕಷ್ಟಕೋಟೆ ಹರಿಸಲಿ ಹಾಲಿನ ಮಳೆ ಸುರಿಸಲಿ
ಬಿದ್ದವರ ಕೈ ಹಿಡಿಯುತ ಆರ್ತರಿಗೆ ಮನಮಿಡಿಯುತ
ನೊಂದ ಮಂದಿಯ ಕಾಯಲಿ ಉಳಿದು ಎಲ್ಲರ ಬಾಯಲಿ
ನೆಟ್ಟ ಶಾಸನ ಕಲ್ಲಲಿ ನೆಟ್ಟ ಶಾಸನ ಕಲ್ಲಲಿ ಮಗನ ಕೀರತಿಯು ನಿಲ್ಲಲಿ
ತಾಯ ಹರಕೆಯು ಫಲಿಸಲಿ ಜೋ ಜೋ
ಜೋ ಕಂದ ಗೋವಿಂದ ಜೋ ಜೋ ಓ ಕಂದ
ಜೋ ಕಂದ ಗೋವಿಂದ ಜೋ ಜೋ ಓ ಕಂದ
 
||ಮಣ್ಣು ಮೆತ್ತಿದ ಚಿನ್ನವೆ ಎದೆಯ ಆಳದ ರನ್ನವೆ
ಮಲಗು ಮುಚ್ಚಿ ಕಣ್ಣೆಡೆ ನನ್ನ ಕಣ್ಣಿನ ಬಣ್ಣವೆ
ಜೋ ಕಂದ ಗೋವಿಂದ ಜೋ ಜೋ ಓ ಕಂದ
ಜೋ ಕಂದ ಗೋವಿಂದ ಜೋ ಜೋ ಓ ಕಂದ||

-
ನನ್ನ ಮುದ್ದಿನ ಗಿಣಿಯೆ
ನನ್ನ ಮುದ್ದಿನ ತೆನೆಯೆ
ಓ ತಣಿದ ಹಾಲಿನ ಕೆನೆಯೆ
ಮಲಗೊ ಕೊಳಲಿನ ದನಿಯೆ
ಬರಲಿ ಬಣ್ಣದ ಕನಸ್ಸು ತಾ ತರಲಿ ತರತರದ ತಿನಿಸು
ಕುಣಿದು ನಲಿದು ನೀ ನಗುತಿರು ಮಗುವೆ
ನನ್ನ ಮುದ್ದಿನ ಗಿಣಿಯೆ
ನೀ ನನ್ನ ಮುದ್ದಿನ ತೆನೆಯೆ
 
ಜೋ ಕಂದ ಗೋವಿಂದ ಜೋ ಜೋ ಓ ಕಂದ
ಜೋ ಕಂದ ಗೋವಿಂದ ಜೋ ಜೋ ಓ ಕಂದ
ಮಣ್ಣು ಮೆತ್ತಿದ ಚಿನ್ನವೆ ಎದೆಯ ಆಳದ ರನ್ನವೆ
ಮಲಗು ಮುಚ್ಚಿ ಕಣ್ಣೆಡೆ ನನ್ನ ಕಣ್ಣಿನ ಬಣ್ಣವೆ ಜೋ ಜೋ
ಜೋ ಕಂದ ಗೋವಿಂದ ಜೋ ಜೋ ಓ ಕಂದ
ಜೋ ಕಂದ ಗೋವಿಂದ ಜೋ ಜೋ ಓ ಕಂದ
 
ಏಕೊ ಇಲ್ಲಿ ಜನಿಸಿದೆ ನನ್ನ ಕಂದ ಎನಿಸಿದೆ
ಕೊಡಲು ನನ್ನಲ್ಲೇನಿದೆ ತುಟಿಯ ಮುತ್ತೊಂದಲ್ಲದೆ
ಏನೆ ಇದ್ದರು ಬಡತನ ಉಂಟು ಪ್ರೀತಿಯ ಒಡೆತನ
ಒಲವಿಗೆ ಇಲ್ಲ ಹರಕೆಯು ಇರಲು ತಾಯಿಯ ಹರಕೆಯು
ನಿನ್ನ ಕನಸ್ಸಿಗೆ ಇಳಿಯಲಿ ಚಂದ್ರ ಸುರಿಯುವ ಮಳೆಯಲಿ
ನಿನ್ನ ಕಣ್ಣಿನ ಸೆರೆಯಲಿ ತಾರೆ ಅಂಗಡಿ ತೆರೆಯಲಿ ಜೋ ಜೋ
ಜೋ ಕಂದ ಗೋವಿಂದ ಜೋ ಜೋ ಓ ಕಂದ
ಜೋ ಕಂದ ಗೋವಿಂದ ಜೋ ಜೋ ಓ ಕಂದ
 
ನನ್ನ ಕಂದ ಬೆಳೆಯಲಿ ಎಲ್ಲ ನೋವ ಕಳೆಯಲಿ
ಕಷ್ಟಕೋಟೆ ಹರಿಸಲಿ ಹಾಲಿನ ಮಳೆ ಸುರಿಸಲಿ
ಬಿದ್ದವರ ಕೈ ಹಿಡಿಯುತ ಆರ್ತರಿಗೆ ಮನಮಿಡಿಯುತ
ನೊಂದ ಮಂದಿಯ ಕಾಯಲಿ ಉಳಿದು ಎಲ್ಲರ ಬಾಯಲಿ
ನೆಟ್ಟ ಶಾಸನ ಕಲ್ಲಲಿ ನೆಟ್ಟ ಶಾಸನ ಕಲ್ಲಲಿ ಮಗನ ಕೀರತಿಯು ನಿಲ್ಲಲಿ
ತಾಯ ಹರಕೆಯು ಫಲಿಸಲಿ ಜೋ ಜೋ
ಜೋ ಕಂದ ಗೋವಿಂದ ಜೋ ಜೋ ಓ ಕಂದ
ಜೋ ಕಂದ ಗೋವಿಂದ ಜೋ ಜೋ ಓ ಕಂದ
 
||ಮಣ್ಣು ಮೆತ್ತಿದ ಚಿನ್ನವೆ ಎದೆಯ ಆಳದ ರನ್ನವೆ
ಮಲಗು ಮುಚ್ಚಿ ಕಣ್ಣೆಡೆ ನನ್ನ ಕಣ್ಣಿನ ಬಣ್ಣವೆ
ಜೋ ಕಂದ ಗೋವಿಂದ ಜೋ ಜೋ ಓ ಕಂದ
ಜೋ ಕಂದ ಗೋವಿಂದ ಜೋ ಜೋ ಓ ಕಂದ||

Nanna Muddina Giniye song lyrics from Kannada Movie Mother India starring Devaraj, Nirosha, Thilakan, Lyrics penned by H S Venkatesh Murthy Sung by Surekha, Music Composed by Sadhu Kokila, film is Directed by Shivamani and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ