Kelu Samsaradalli Rajakeeya Lyrics

ಕೇಳು ಸಂಸಾರದಲ್ಲಿ ರಾಜಕೀಯ Lyrics

in Mathrudevobhava

in ಮಾತೃದೇವೋಭವ

LYRIC

Song Details Page after Lyrice

-
ಕೇಳು ಸಂಸಾರದಲ್ಲಿ ರಾಜಕೀಯ
ತಾನು ತನ್ನ ಮನೆಯಲ್ಲಿ ಪರಕೀಯ
ಇಲ್ಲಿ ಹತ್ತಿಯ ಹಣ್ಣು ಬಿಚ್ಚಿ ನೋಡಿದರೇ
ಬರೀ ಹುಳುಕು ತುಂಬಿಹುದು ಕೇಳೋ ದೊರೆ
 
||ಕೇಳು ಸಂಸಾರದಲ್ಲಿ ರಾಜಕೀಯ
ತಾನು ತನ್ನ ಮನೆಯಲ್ಲಿ ಪರಕೀಯ||
 
ಎಲ್ಲರೂ ಒಪ್ಪಿ ಓಟನು ನೀಡಿ
ಕೊಡುವರು ನಾಯಕ ಪಟ್ಟ
ನಂತರ ಅವನದ ಕಿತ್ತು ತಿನ್ನುತಾ
ಹಿಡಿವರು ಆತನ ಜುಟ್ಟ
ನಾನೊಂದು ಲೆಕ್ಕದ ಬುಕ್ಕು
ನೂರೊಂದು ವೆಚ್ಚದ ಚೆಕ್ಕು
ಸೋಮಾರಿ ಮಕ್ಕಳ ಕುಕ್ಕು
ನನಗೀಗ ದೇವರೇ ದಿಕ್ಕು
 
ಇಲ್ಲಿ  ಹತ್ತಿಯ ಹಣ್ಣು ಬಿಚ್ಚಿ ನೋಡಿದರೇ
ಬರಿ ಹುಳುಕು ತುಂಬಿಹುದು ಕೇಳೋ ದೊರೆ
 
||ಕೇಳು ಸಂಸಾರದಲ್ಲಿ ರಾಜಕೀಯ
ತಾನು ತನ್ನ ಮನೆಯಲ್ಲಿ ಪರಕೀಯ ||
 
ಹಾಸಿಗೆಯನ್ನು ಪಡೆದವರೆಲ್ಲ
ಕೊಟ್ಟರು ಮುಳ್ಳಿನ ಚಾಪೆ
ಮಕ್ಕಳ ಪಡೆದ ಒಂದೇ ತಪ್ಪಿಗೆ
ಜೀವನ ಚಿಂದಿಯ ತೇಪೆ
ಬಾಷಣವು  ಮಾಡುವರೆಲ್ಲ
ನನಗಂತೂ ಬಾಯೇ ಇಲ್ಲ
ಆದರೂ ನಾ ಯಜಮಾನ
ಹೇಗಿದೆ ನನ್ನಯ ಮಾನಾ
 
ಇಲ್ಲಿ  ಹತ್ತಿಯ ಹಣ್ಣು ಬಿಚ್ಚಿ ನೋಡಿದರೇ
ಬರಿ ಹುಳುಕು ತುಂಬಿಹುದು ಕೇಳೋ ದೊರೆ
 
||ಕೇಳು ಸಂಸಾರದಲ್ಲಿ ರಾಜಕೀಯ
ತಾನು ತನ್ನ ಮನೆಯಲ್ಲಿ ಪರಕೀಯ ||
 
ಮಮತೆಯ ತುಂಬಿದ ನೀರು ಉಣಿಸಿದ
ಬೆಳೆಸಿದೆ ಹೂವಿನ ತೋಟ
ಅರಳಿದ ಸುಂದರ ಹೂವುಗಳೆಲ್ಲಾ
ಗಾಳಿಗೆ ತೂಗುವಾ ಆಟ
ನೋಡುತ ಸಂತಸಗೊಂಡೆ
ಜೀವನವು ಸ್ವಾರ್ಥಕವೆಂದೇ
ಹೂವೂಗಳೇ ಮುಳ್ಳುಗಳಾಗಿ
ಚುಚ್ಚಿದರೇ ನೋವನು ತಿಂದೇ
 
ಇಲ್ಲಿ  ಹತ್ತಿಯ ಹಣ್ಣು ಬಿಚ್ಚಿ ನೋಡಿದರೇ
ಬರಿ ಹುಳುಕು ತುಂಬಿಹುದು ಕೇಳೋ ದೊರೆ
 
||ಕೇಳು ಸಂಸಾರದಲ್ಲಿ ರಾಜಕೀಯ
ತಾನು ತನ್ನ ಮನೆಯಲ್ಲಿ ಪರಕೀಯ
ಇಲ್ಲಿ ಅತ್ತಿಯ ಹಣ್ಣು ಬಿಚ್ಚಿ ನೋಡಿದರೇ
ಬರಿ ಹುಳುಕು ತುಂಬಿಹುದು ಕೇಳೋ ದೊರೆ
 
ಕೇಳು ಸಂಸಾರದಲ್ಲಿ ರಾಜಕೀಯ
ತಾನು ತನ್ನ ಮನೆಯಲ್ಲಿ ಪರಕೀಯ ||

-
ಕೇಳು ಸಂಸಾರದಲ್ಲಿ ರಾಜಕೀಯ
ತಾನು ತನ್ನ ಮನೆಯಲ್ಲಿ ಪರಕೀಯ
ಇಲ್ಲಿ ಹತ್ತಿಯ ಹಣ್ಣು ಬಿಚ್ಚಿ ನೋಡಿದರೇ
ಬರೀ ಹುಳುಕು ತುಂಬಿಹುದು ಕೇಳೋ ದೊರೆ
 
||ಕೇಳು ಸಂಸಾರದಲ್ಲಿ ರಾಜಕೀಯ
ತಾನು ತನ್ನ ಮನೆಯಲ್ಲಿ ಪರಕೀಯ||
 
ಎಲ್ಲರೂ ಒಪ್ಪಿ ಓಟನು ನೀಡಿ
ಕೊಡುವರು ನಾಯಕ ಪಟ್ಟ
ನಂತರ ಅವನದ ಕಿತ್ತು ತಿನ್ನುತಾ
ಹಿಡಿವರು ಆತನ ಜುಟ್ಟ
ನಾನೊಂದು ಲೆಕ್ಕದ ಬುಕ್ಕು
ನೂರೊಂದು ವೆಚ್ಚದ ಚೆಕ್ಕು
ಸೋಮಾರಿ ಮಕ್ಕಳ ಕುಕ್ಕು
ನನಗೀಗ ದೇವರೇ ದಿಕ್ಕು
 
ಇಲ್ಲಿ  ಹತ್ತಿಯ ಹಣ್ಣು ಬಿಚ್ಚಿ ನೋಡಿದರೇ
ಬರಿ ಹುಳುಕು ತುಂಬಿಹುದು ಕೇಳೋ ದೊರೆ
 
||ಕೇಳು ಸಂಸಾರದಲ್ಲಿ ರಾಜಕೀಯ
ತಾನು ತನ್ನ ಮನೆಯಲ್ಲಿ ಪರಕೀಯ ||
 
ಹಾಸಿಗೆಯನ್ನು ಪಡೆದವರೆಲ್ಲ
ಕೊಟ್ಟರು ಮುಳ್ಳಿನ ಚಾಪೆ
ಮಕ್ಕಳ ಪಡೆದ ಒಂದೇ ತಪ್ಪಿಗೆ
ಜೀವನ ಚಿಂದಿಯ ತೇಪೆ
ಬಾಷಣವು  ಮಾಡುವರೆಲ್ಲ
ನನಗಂತೂ ಬಾಯೇ ಇಲ್ಲ
ಆದರೂ ನಾ ಯಜಮಾನ
ಹೇಗಿದೆ ನನ್ನಯ ಮಾನಾ
 
ಇಲ್ಲಿ  ಹತ್ತಿಯ ಹಣ್ಣು ಬಿಚ್ಚಿ ನೋಡಿದರೇ
ಬರಿ ಹುಳುಕು ತುಂಬಿಹುದು ಕೇಳೋ ದೊರೆ
 
||ಕೇಳು ಸಂಸಾರದಲ್ಲಿ ರಾಜಕೀಯ
ತಾನು ತನ್ನ ಮನೆಯಲ್ಲಿ ಪರಕೀಯ ||
 
ಮಮತೆಯ ತುಂಬಿದ ನೀರು ಉಣಿಸಿದ
ಬೆಳೆಸಿದೆ ಹೂವಿನ ತೋಟ
ಅರಳಿದ ಸುಂದರ ಹೂವುಗಳೆಲ್ಲಾ
ಗಾಳಿಗೆ ತೂಗುವಾ ಆಟ
ನೋಡುತ ಸಂತಸಗೊಂಡೆ
ಜೀವನವು ಸ್ವಾರ್ಥಕವೆಂದೇ
ಹೂವೂಗಳೇ ಮುಳ್ಳುಗಳಾಗಿ
ಚುಚ್ಚಿದರೇ ನೋವನು ತಿಂದೇ
 
ಇಲ್ಲಿ  ಹತ್ತಿಯ ಹಣ್ಣು ಬಿಚ್ಚಿ ನೋಡಿದರೇ
ಬರಿ ಹುಳುಕು ತುಂಬಿಹುದು ಕೇಳೋ ದೊರೆ
 
||ಕೇಳು ಸಂಸಾರದಲ್ಲಿ ರಾಜಕೀಯ
ತಾನು ತನ್ನ ಮನೆಯಲ್ಲಿ ಪರಕೀಯ
ಇಲ್ಲಿ ಅತ್ತಿಯ ಹಣ್ಣು ಬಿಚ್ಚಿ ನೋಡಿದರೇ
ಬರಿ ಹುಳುಕು ತುಂಬಿಹುದು ಕೇಳೋ ದೊರೆ
 
ಕೇಳು ಸಂಸಾರದಲ್ಲಿ ರಾಜಕೀಯ
ತಾನು ತನ್ನ ಮನೆಯಲ್ಲಿ ಪರಕೀಯ ||

Kelu Samsaradalli Rajakeeya song lyrics from Kannada Movie Mathrudevobhava starring Srinivasamurthy, Jayanthi, Jai Jagadish, Lyrics penned by Su Rudramurthy Shastry Sung by C Ashwath, Music Composed by Hamsalekha, film is Directed by N S Dhananjaya (Datthu) and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ