-
ಭೂಮಿ ಆಕಾಶ ವಧುವರರಾಗಿ ನಲಿದಾಡೊ ಸಮಯ
ಉಡುಗೊರೆಯಾಗಿ ಕೊಡುವೆ ಈ ಹೃದಯ
ಪ್ರೇಮಾಭಿಷೇಕ ಪ್ರಣಯಾಭಿಷೇಕ
ಮಾನಸ ಮಂದಿರದಲ್ಲಿ
||ಭೂಮಿ ಆಕಾಶ ವಧುವರರಾಗಿ ನಲಿದಾಡೊ ಸಮಯ
ಉಡುಗೊರೆಯಾಗಿ ಕೊಡುವೆ ಈ ಹೃದಯ
ಪ್ರೇಮಾಭಿಷೇಕ ಪ್ರಣಯಾಭಿಷೇಕ
ಮಾನಸ ಮಂದಿರದಲ್ಲಿ||
ಎದೆಯಾಳದಲ್ಲಿ ಬಯಕೆಯ ಸುಳಿಯಲ್ಲಿ
ಮನ ತಾನು ಜಿಗಿದಾಡೊ ಸಮಯ
ಸುಮವಾಗಿ ತರುವೆ ಈ ಹರೆಯ
ಕಣ್ಣೋಟದಲ್ಲಿ ಪ್ರಣಯದ ಭಯದಲ್ಲಿ
ತನು ತಾನು ಸೆರೆಯಾಗೊ ಸಮಯ
ಒಲವಾಗಿ ತರುವೆ ಈ ಅಭಯ
ಸ್ವೀಕರಿಸು ತೋಳಿನಲಿ ಸತ್ಕರಿಸು ಪ್ರೇಮದಲಿ
ಆದರಿಸು ಹಾಡಿನಲಿ ನೀ ನೆಲೆಸು ಬಾಳಿನಲಿ
ಪ್ರೇಮಾಭಿಷೇಕ ಪ್ರಣಯಾಭಿಷೇಕ
ಮಾನಸ ಮಂದಿರದಲ್ಲಿ
||ಭೂಮಿ ಆಕಾಶ ವಧುವರರಾಗಿ ನಲಿದಾಡೊ ಸಮಯ
ಉಡುಗೊರೆಯಾಗಿ ಕೊಡುವೆ ಈ ಹೃದಯ||
ಅರವಿಂದ ಮಹಲು ಕೆಂದುಟಿಗಳ ಬಾಗಿಲು
ಅದ ಕಾಯೊ ಸಿರಿದಂತ ಸೈನ್ಯ
ಕರೆದಾಗ ಮಹಾರಾಜ ಧನ್ಯ
ಕಣ್ಣೊಂದು ಅಸ್ತ್ರ ಮನ ಮದನನ ಬಿಲ್ಲು
ನಿನ್ನದೀಗ ಶೃಂಗಾರ ಬೇಟೆ ತನುವೀಗ ವಶವಾಗೊ ಕೋಟೆ
ವೀಳ್ಯವಿಡು ವೀರನಿಗೆ ಮಾಲೆಯಿಡು ಮಾರನಿಗೆ
ಸ್ವಾಗತವೆ ಅರಮನೆಗೆ ಔತಣವೆ ಎದೆಯೊಳಗೆ
ಪ್ರೇಮಾಭಿಷೇಕ ಪ್ರಣಯಾಭಿಷೇಕ
ಮಾನಸ ಮಂದಿರದಲ್ಲಿ
||ಭೂಮಿ ಆಕಾಶ ವಧುವರರಾಗಿ ನಲಿದಾಡೊ ಸಮಯ
ಉಡುಗೊರೆಯಾಗಿ ಕೊಡುವೆ ಈ ಹೃದಯ
ಪ್ರೇಮಾಭಿಷೇಕ ಪ್ರಣಯಾಭಿಷೇಕ
ಮಾನಸ ಮಂದಿರದಲ್ಲಿ||
-
ಭೂಮಿ ಆಕಾಶ ವಧುವರರಾಗಿ ನಲಿದಾಡೊ ಸಮಯ
ಉಡುಗೊರೆಯಾಗಿ ಕೊಡುವೆ ಈ ಹೃದಯ
ಪ್ರೇಮಾಭಿಷೇಕ ಪ್ರಣಯಾಭಿಷೇಕ
ಮಾನಸ ಮಂದಿರದಲ್ಲಿ
||ಭೂಮಿ ಆಕಾಶ ವಧುವರರಾಗಿ ನಲಿದಾಡೊ ಸಮಯ
ಉಡುಗೊರೆಯಾಗಿ ಕೊಡುವೆ ಈ ಹೃದಯ
ಪ್ರೇಮಾಭಿಷೇಕ ಪ್ರಣಯಾಭಿಷೇಕ
ಮಾನಸ ಮಂದಿರದಲ್ಲಿ||
ಎದೆಯಾಳದಲ್ಲಿ ಬಯಕೆಯ ಸುಳಿಯಲ್ಲಿ
ಮನ ತಾನು ಜಿಗಿದಾಡೊ ಸಮಯ
ಸುಮವಾಗಿ ತರುವೆ ಈ ಹರೆಯ
ಕಣ್ಣೋಟದಲ್ಲಿ ಪ್ರಣಯದ ಭಯದಲ್ಲಿ
ತನು ತಾನು ಸೆರೆಯಾಗೊ ಸಮಯ
ಒಲವಾಗಿ ತರುವೆ ಈ ಅಭಯ
ಸ್ವೀಕರಿಸು ತೋಳಿನಲಿ ಸತ್ಕರಿಸು ಪ್ರೇಮದಲಿ
ಆದರಿಸು ಹಾಡಿನಲಿ ನೀ ನೆಲೆಸು ಬಾಳಿನಲಿ
ಪ್ರೇಮಾಭಿಷೇಕ ಪ್ರಣಯಾಭಿಷೇಕ
ಮಾನಸ ಮಂದಿರದಲ್ಲಿ
||ಭೂಮಿ ಆಕಾಶ ವಧುವರರಾಗಿ ನಲಿದಾಡೊ ಸಮಯ
ಉಡುಗೊರೆಯಾಗಿ ಕೊಡುವೆ ಈ ಹೃದಯ||
ಅರವಿಂದ ಮಹಲು ಕೆಂದುಟಿಗಳ ಬಾಗಿಲು
ಅದ ಕಾಯೊ ಸಿರಿದಂತ ಸೈನ್ಯ
ಕರೆದಾಗ ಮಹಾರಾಜ ಧನ್ಯ
ಕಣ್ಣೊಂದು ಅಸ್ತ್ರ ಮನ ಮದನನ ಬಿಲ್ಲು
ನಿನ್ನದೀಗ ಶೃಂಗಾರ ಬೇಟೆ ತನುವೀಗ ವಶವಾಗೊ ಕೋಟೆ
ವೀಳ್ಯವಿಡು ವೀರನಿಗೆ ಮಾಲೆಯಿಡು ಮಾರನಿಗೆ
ಸ್ವಾಗತವೆ ಅರಮನೆಗೆ ಔತಣವೆ ಎದೆಯೊಳಗೆ
ಪ್ರೇಮಾಭಿಷೇಕ ಪ್ರಣಯಾಭಿಷೇಕ
ಮಾನಸ ಮಂದಿರದಲ್ಲಿ
||ಭೂಮಿ ಆಕಾಶ ವಧುವರರಾಗಿ ನಲಿದಾಡೊ ಸಮಯ
ಉಡುಗೊರೆಯಾಗಿ ಕೊಡುವೆ ಈ ಹೃದಯ
ಪ್ರೇಮಾಭಿಷೇಕ ಪ್ರಣಯಾಭಿಷೇಕ
ಮಾನಸ ಮಂದಿರದಲ್ಲಿ||
Bhoomi Aakasha song lyrics from Kannada Movie Marana Mrudanga starring Malashree, Sunil, Ramakrishna Hegde, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by B Ramamurthy and film is released on 1992