Gaandhari Lyrics

in Mangalya Bandhana

Video:

LYRIC

-
ಗಾಂಧಾರೆಯಾಗಬೇಡ ಶಬರಿಯಂತೆ ಕಾಯಬೇಡ
ಸೀತೆಯಂತೆ ಕೂರಬೇಡ ಕೃಷ್ಣೆಯಂತೆ ನೋಯಬೇಡ
ಕಣ್ಣು ತೆರೆದು ನೀ ನೋಡೆಯ ನ್ಯಾಯದೇವತೆ
ಬಾಯಿತೆರೆದು ಮಾತನಾಡೆಯ ಧರ್ಮದೇವತೆ
 
||ಗಾಂಧಾರೆಯಾಗಬೇಡ ಶಬರಿಯಂತೆ ಕಾಯಬೇಡ
ಸೀತೆಯಂತೆ ಕೂರಬೇಡ ಕೃಷ್ಣೆಯಂತೆ ನೋಯಬೇಡ||    
 
ಆತ್ಮ ಹೇಳೊ ಸಾಕ್ಷಿಯ ಲೋಕ ನಂಬದು
ವಾದ ಮಾಡಲು ಮಿಸ್ಟರಿಗೆ ಮಾತು ಸಾಲದು
ಗೀತೆಯ ಆಣೆಗಳ ಮೇಲೆಯೆ ಸುಳ್ಳಿನ ಸಾಕ್ಷ್ಯಗಳ ಮಾಲೆಯೆ
ಕೋಟಿ ಕೋಟಿ ಕಾಯ್ದೆ ಜೀವ ತಾರದು
ಶಾಂತಿ ಮಾರ್ಗಕ್ಕೆ ದ್ವೇಷಗಳು ದಾರಿ ನೀಡದು
ಶಿಕ್ಷೆಯೆ ಎಲ್ಲದಕ್ಕು ಶಿಕ್ಷೆಯೆ ಮೋಸಕ್ಕೆ ಕಟ್ಟಳೆಯ ರಕ್ಷೆಯೆ
 
||ಗಾಂಧಾರೆಯಾಗಬೇಡ ಶಬರಿಯಂತೆ ಕಾಯಬೇಡ
ಸೀತೆಯಂತೆ ಕೂರಬೇಡ ಕೃಷ್ಣೆಯಂತೆ ನೋಯಬೇಡ||    
 
ರಾಯಭಾರ ಮಾಡಲು ಕೃಷ್ಣ ಸೋತನು
ನೀತಿ ಹೇಳುತ ಧರ್ಮಜನು ದೂತವಾದನು
ದೇವರೆ ಸೋಲವುದು ಸತ್ಯವೇ ಮಾನವ  ದುಡುಕುವುದು ಮಿಥ್ಯವೆ
ತೀರ್ಪು ಎಂದು ಇಬ್ಬರ ಪಾಲು ಆಗದು
ತಾನು ಗೆದ್ದರೆ ಅನ್ಯರಿಗೆ ಪಾಲು ಆಗದು
ಪ್ರೇಮವೇ ಜೀವನದ ಹಾರವೋ ಕರುಣೆಯೆ ನ್ಯಾಯದೊಳ ಸಾರವೋ
 
||ಗಾಂಧಾರೆಯಾಗಬೇಡ ಶಬರಿಯಂತೆ ಕಾಯಬೇಡ
ಸೀತೆಯಂತೆ ಕೂರಬೇಡ ಕೃಷ್ಣೆಯಂತೆ ನೋಯಬೇಡ
ಕಣ್ಣು ತೆರೆದು ನೀ ನೋಡೆಯ ನ್ಯಾಯದೇವತೆ
ಬಾಯಿತೆರೆದು ಮಾತನಾಡೆಯ ಧರ್ಮದೇವತೆ||
 
||ಗಾಂಧಾರೆಯಾಗಬೇಡ ಶಬರಿಯಂತೆ ಕಾಯಬೇಡ
ಸೀತೆಯಂತೆ ಕೂರಬೇಡ ಕೃಷ್ಣೆಯಂತೆ ನೋಯಬೇಡ||    

Gaandhari song lyrics from Kannada Movie Mangalya Bandhana starring Ananthnag, Malashree, Moon Moon Sen, Lyrics penned by Hamsalekha Sung by Dr Rajkumar, Music Composed by Hamsalekha, film is Directed by S K Bhagavan and film is released on 1993