ಕೋಟೆ ಕಟ್ಟಿ ಮೆರೆದೊರೆಲ್ಲ ಹೊತ್ತುಕೊಂಡು ಹೋಗಲಿಲ್ಲ
ಕದ್ದುಮುಚ್ಚಿ ಕದಿಯೊರೆಲ್ಲ ನೂರು ಕಾಲ ಬಾಳೊದಿಲ್ಲ
ಕೋಟಿ ಕೋಟಿ ಇದ್ರೂನು ಹೊಟ್ಟೆಗ್ ತಿನ್ನೋದ್ ಚಿನ್ನ ಅಲ್ಲ
ಬಡವನಾದ್ರು ಧನಿಕನಾದ್ರು ಕೊನೆಗೆ ಸೇರೋದ್ ಮಣ್ಗೆ ಅಲ್ವ
ಇದ್ದಾಗ ಹಂಚಿಕೊಂಡು ತಿನ್ನಬೇಕು ರಿ
ಇಲ್ದಾಗ ಮೈಯ್ಯ ಬಗ್ಸಿ ದುಡಿಯಬೇಕು ರಿ
ಬಾಯಿಗೆ ಬಂದಂಗೆಲ್ಲ ಆಡಬಾರ್ದು ರಿ
ಕಂಡೋರ ತಲೆ ಹೊಡೆದು ಬದುಕಬಾರ್ದು ರಿ
ಏಸಿ ಕಾರು ಓಸಿ ಚೇರು ಜೊತೆಯಲ್ಲೆಂದು ಇರುವುದಿಲ್ಲ
ಫ್ಲ್ಯಾಟೆ ಇದ್ರು ಫ್ಲೈಟಲ್ಲೋದ್ರು ಭೂಮಿ ಬಿಟ್ಟು ಬಾಳಂಗಿಲ್ಲ
ಕೂಲು ಹಾಟು ಡ್ರಿಂಕ್ಸು ಇದ್ರು ದಾಹ ನೀಗೋದ್ ನೀರೆ ಅಲ್ವೆ
ಹುಟ್ಟು ಸಾವಿನೊಡನೆ ಕೂಡಿ ಬರುವುದೊಂದೆ ಪುಣ್ಯ ಅಲ್ವ
ನೀತಿಯ ಪಾಠವನ್ನು ಕೇಳಬೇಕು ರಿ ಪ್ರೀತಿಯ ಹಂಚಿಕೊಂಡು ಬಾಳಬೇಕು ರಿ
ಬಿದ್ದಾಗ ಜಗ್ಗಿ ಹಿಂದೆ ಹೋಗಬಾರ್ದು ರಿ
ಎದ್ದಾಗ ಹಿಗ್ಗಿ ಮೆರೆದು ಕುಣಿಯಬಾರ್ದು ರಿ
ಹಿಡಿಯಲೋದ್ರು ಕಟ್ಟಲೋದ್ರು ಕಾಲವೆಂದು ನಿಲ್ಲೋದಿಲ್ಲ
ಮೈ ಕೈ ಪರಚಿಕೊಂಡ್ರು ಗೆಲುವು ಸುಮ್ನೆ ಸಿಗುವುದಿಲ್ಲ
ಕುಡಿವ ಮನಸ್ಸಿನಿಂದೆ ಸೋಲು ಎಂದು ಬಳಿಗೆ ಸುಳಿಯೋದಿಲ್ಲ
ರಾತ್ರಿ ಹಗಲು ಇರುವ ಹಾಗೆ ಕಷ್ಟ ಸುಖವು ಬೇಕು ಅಲ್ವ
ಅಳೆದು ಸುರಿದು ನೋಡಿದ್ರೂನು ತೂಕ ಒಂದೇ ರಿ
ಹುಳುಕು ಪಳುಕು ಇರೊದ್ನೆಲ್ಲ ತಿನ್ನಬಾರ್ದು ರಿ
ಮನೆ ಮತಿ ಸುಳ್ಳರೆಂದು ಹೇಳಬಾರ್ದು ರಿ
ಮೋಸ ಮಾಡಿ ಪಾಶದೊಳಗೆ ಬೀಳಬಾರ್ದು ರಿ
||ಕೋಟೆ ಕಟ್ಟಿ ಮೆರೆದೊರೆಲ್ಲ ಹೊತ್ತುಕೊಂಡು ಹೋಗಲಿಲ್ಲ

ಕಂಡೋರ ತಲೆ ಹೊಡೆದು ಬದುಕಬಾರ್ದು ರಿ||