ಅರಮನೆಯಂತ ಈ ಮನೆಯೊಳಗೆ
ಬರವೇ ಇಲ್ಲ ಸಿರಿ ವೈಭವಕೆ..
ಕೊರತೆಯೇ ಕಾಣದು ವಜ್ರ ವೈಡೂರ್ಯಕೆ
ಮೇರೆಯೇ ಇಲ್ಲ ಬೆಳ್ಳಿ ಬಂಗಾರಕೆ….
ಕಂಡ ಕಂಡದ್ದು ಕಣ್ಣೆದುರುಂಟು
ಶ್ರೀಮಂತಿಕೆಗೂ ಇದಕೂ ನಂಟು
ಇಂಥಹದಿಲ್ಲಾ ಅನ್ನೋ ಹಾಗಿಲ್ಲ
ಇರಬೇಕಾದ್ದು ಮಾತ್ರ ಮುಖ್ಯವಾಗಿಲ್ಲ
ನಮ್ಮ ಗುಲಾಬಿ ಬಳ್ಳಿಯಲ್ಲಿ
ಹೂವೇ ಬಿಟ್ಟಿಲ್ಲಾ…
ಈ ಮನೆಯಲ್ಲಿ ಹರುಷವ ಮೆರೆಯಲು
ನಗೆಯೇ ಚಿಮ್ಮಿಲ್ಲಾ…
ಅಮೃತ ಶಿಲೆಯ ಈ ನೆಲದಲ್ಲಿ
ಹೆಜ್ಜೆ ಕಂಡಿಲ್ಲಾ…
ಸೊಬಗನು ಬೆಳಗೋ ಮಲ್ಲಿಗೆಯಂತ
ಮೊಗ್ಗೆ ಮೂಡಿಲ್ಲಾ…
ಚಂದದ ಕನಸಿಗೆ ಕುಂದದ ಮನಸಿಗೆ
ಕಾಲ ಕೂಡಿಲ್ಲಾ…
ನಲ್ಮೆಯ ಬದುಕಿನ ಅಕ್ಕರೆ ಬಾನಲೆ
ತಾರೆ ಮಿಂಚಿಲ್ಲಾ….
ಹೊರ ನೋಟಕ್ಕೆ ಈ ಮನೆ
ಎಂದೂ ನಂದಾಗೋಕುಲಾ
ನಂದಾಗೋಕುಲಾ....
ಆದರೆ..ಒಳಗಿರೋರಿಗೆ ಮಾತ್ರ
ಗೊತ್ತಿದರ ಗುಟ್ಟು ಗ್ರಹಣ
ಇಲ್ಲಿನ ಮಂದಿಗೆ ತಪ್ಪದು
ಒಂದು ಭಾರಿ ವ್ಯಸನ…
ಏನಿದ್ರೇನು ಏನಾದ್ರೇನು
ಯಾರಿದ್ರೇನು ಯಾರ್ ಹೋದ್ರೇನು
ತನುವು ಮನವು ಅರಳ್ಕೊಂಡ್
ಉಕ್ಕೊಂಡ್ ಸೆಳೆಯುವಂತ ಹೂವಿಲ್ಲ
ಅಂತಸ್ತಿದ್ರು ಪದವಿ ಇದ್ರೂ
ಭೋಗದ ಕಡಲು ತುಂಬಿ ತುಳುಕಿದರೂ
ಹಗಲು ರಾತ್ರಿ ಮಿಂಚ ಹರಿಸಿ
ಕರೆಯುವಂತ ಚಿಕ್ಕೆ ಇಲ್ಲಾ…
ಹೌದು ಚುಕ್ಕೆ ಇಲ್ಲಾ…
ಅದಕೆ ಪುಟ್ಟ ನಾ ಹೇಳೋದು…
ಘಲ್ ಘಲ್ ಗೆಜ್ಜೆ ಸದ್ದನು ತಾನು ಮಾಡುತ
ಪುಟ್ ಪುಟ್ಟ ಹೆಜ್ಜೆ ಮೆಲ್ಲಗೆ ತಾನು ಹಾಕುತ
ಹೋಲಾಡುವಂತ ಓಡಾಡುವಂತ
ತೂಗಾಡುವಂತ ಕುಡಿ ಬೇಕು
ಆಹಾ..ಕುಣಿದಾಡುವಂತ ಸುಮ ಬೇಕು…
ಹೇಯ್…ಏನ್ ನೋಡ್ತಾ ಇದ್ದೀಯೋ
ಹಾಗಂದ್ರೆ…ಇಲ್ಲಿನ ಅಂದ ಚೆಂದಾನೆಲ್ಲಾ
ಚಿಂದಿ ಚಿಂದಿ ಮಾಡಬೇಕು…
ಅತ್ತಾ ಇತ್ತಾ ಓಡಾಡ್ಕೊಂಡು
ಎದ್ವಾ ತದ್ವಾ ಉರುಳುಬೇಕು…
ಅಹ್ಹಹ್ಹಹ್ಹಹ್ಹಾ…..
ಸೋಫಾ ಕುರ್ಚಿ ಎಳೆದಾಡುತ್ತಾ
ಪರದೇನೆಲ್ಲಾ ಹರಿದಾಕುತ್ತಾ
ಕಿಟಕಿ ಗಾಜು ಹೊಡೆದಾಕುತ್ತಾ
ಬಾಗಿಲು ಚಿಲುಕ ಮುರಿದಾಕುತ್ತಾ
ಥೈ ಥೈ ತಕಥೈ ಕುಣಿಬೇಕು
ಏನಾದರೊಂದು ಹೊಡಿಬೇಕು…
ಕೇಕೆ ಹಾಕಿ ನಗಬೇಕು…
ಅಹ್ಹಹ್ಹಹ್ಹಹ್ಹಾ….
ಅಹ್ಹಹ್ಹಾ…ನಗ್ತಾ ನಗ್ತಾ ಓಡಬೇಕು
ಓಡ್ತ ಓಡ್ತಾ ಬೀಳಬೇಕು…
ಬಿದ್ದ ಮೇಲೆ ಜೋರಾಗಿ ಅಳಬೇಕು
ಆಗ ಒಳಗಿರೋ ತಾಯಿ ನನ್ ಸಂಗಾತಿ
ಓಡೋಡಿ ಬಂದು ಪ್ರೀತಿಯಿಂದ
ಬಾಚಿ ತಬ್ಬಿಕೊಂಡು …
ಮಗುನಾ ಕಂಕುಳಲ್ಲಿ ಎತ್ತಿಕೊಂಡು
ಅಯ್ಯೋ ನನ್ ಪುಟ್ಟ…
ಏನಾಯ್ತಪ್ಪಾ ಕಂದ
ಏನಾಯ್ತು ನನ್ ಚಿನ್ನ ಅನ್ಕೊಂಡು
ಅಪ್ಪೊಕಂಡು ಲೊಚ ಲೊಚ
ಮುತ್ತಾ ಕೊಡಬೇಕು…
ಜೋ ಜೋ ಅಂತ ಲಾಲಿ ಹಾಡ್ತಾ…
ಅಕ್ಕರೆಯಿಂದ ರಮಿಸಬೇಕು..
ದೂರದಲ್ಲಿ ನಿಂತ್ಕೊಂಡು ಅದನ್ನೆಲ್ಲಾ
ಮೌನವಾಗಿ ನೋಡಬೇಕು…
ನೋಡ್ತಾ ನೋಡ್ತಾ ನಗಬೇಕು…
ಹ್ಹಾ…ನಗಬೇಕು…ಅಹ್ಹಹ್ಹಹ್ಹಾ…
ಅಹ್ಹಹ್ಹಹ್ಹಹ್ಹಾ…. ಅಹ್ಹಹ್ಹಹ್ಹಹ್ಹಾ….
ಅರಮನೆಯಂತ ಈ ಮನೆಯೊಳಗೆ
ಬರವೇ ಇಲ್ಲ ಸಿರಿ ವೈಭವಕೆ..
ಕೊರತೆಯೇ ಕಾಣದು ವಜ್ರ ವೈಡೂರ್ಯಕೆ
ಮೇರೆಯೇ ಇಲ್ಲ ಬೆಳ್ಳಿ ಬಂಗಾರಕೆ….
ಕಂಡ ಕಂಡದ್ದು ಕಣ್ಣೆದುರುಂಟು
ಶ್ರೀಮಂತಿಕೆಗೂ ಇದಕೂ ನಂಟು
ಇಂಥಹದಿಲ್ಲಾ ಅನ್ನೋ ಹಾಗಿಲ್ಲ
ಇರಬೇಕಾದ್ದು ಮಾತ್ರ ಮುಖ್ಯವಾಗಿಲ್ಲ
ನಮ್ಮ ಗುಲಾಬಿ ಬಳ್ಳಿಯಲ್ಲಿ
ಹೂವೇ ಬಿಟ್ಟಿಲ್ಲಾ…
ಈ ಮನೆಯಲ್ಲಿ ಹರುಷವ ಮೆರೆಯಲು
ನಗೆಯೇ ಚಿಮ್ಮಿಲ್ಲಾ…
ಅಮೃತ ಶಿಲೆಯ ಈ ನೆಲದಲ್ಲಿ
ಹೆಜ್ಜೆ ಕಂಡಿಲ್ಲಾ…
ಸೊಬಗನು ಬೆಳಗೋ ಮಲ್ಲಿಗೆಯಂತ
ಮೊಗ್ಗೆ ಮೂಡಿಲ್ಲಾ…
ಚಂದದ ಕನಸಿಗೆ ಕುಂದದ ಮನಸಿಗೆ
ಕಾಲ ಕೂಡಿಲ್ಲಾ…
ನಲ್ಮೆಯ ಬದುಕಿನ ಅಕ್ಕರೆ ಬಾನಲೆ
ತಾರೆ ಮಿಂಚಿಲ್ಲಾ….
ಹೊರ ನೋಟಕ್ಕೆ ಈ ಮನೆ
ಎಂದೂ ನಂದಾಗೋಕುಲಾ
ನಂದಾಗೋಕುಲಾ....
ಆದರೆ..ಒಳಗಿರೋರಿಗೆ ಮಾತ್ರ
ಗೊತ್ತಿದರ ಗುಟ್ಟು ಗ್ರಹಣ
ಇಲ್ಲಿನ ಮಂದಿಗೆ ತಪ್ಪದು
ಒಂದು ಭಾರಿ ವ್ಯಸನ…
ಏನಿದ್ರೇನು ಏನಾದ್ರೇನು
ಯಾರಿದ್ರೇನು ಯಾರ್ ಹೋದ್ರೇನು
ತನುವು ಮನವು ಅರಳ್ಕೊಂಡ್
ಉಕ್ಕೊಂಡ್ ಸೆಳೆಯುವಂತ ಹೂವಿಲ್ಲ
ಅಂತಸ್ತಿದ್ರು ಪದವಿ ಇದ್ರೂ
ಭೋಗದ ಕಡಲು ತುಂಬಿ ತುಳುಕಿದರೂ
ಹಗಲು ರಾತ್ರಿ ಮಿಂಚ ಹರಿಸಿ
ಕರೆಯುವಂತ ಚಿಕ್ಕೆ ಇಲ್ಲಾ…
ಹೌದು ಚುಕ್ಕೆ ಇಲ್ಲಾ…
ಅದಕೆ ಪುಟ್ಟ ನಾ ಹೇಳೋದು…
ಘಲ್ ಘಲ್ ಗೆಜ್ಜೆ ಸದ್ದನು ತಾನು ಮಾಡುತ
ಪುಟ್ ಪುಟ್ಟ ಹೆಜ್ಜೆ ಮೆಲ್ಲಗೆ ತಾನು ಹಾಕುತ
ಹೋಲಾಡುವಂತ ಓಡಾಡುವಂತ
ತೂಗಾಡುವಂತ ಕುಡಿ ಬೇಕು
ಆಹಾ..ಕುಣಿದಾಡುವಂತ ಸುಮ ಬೇಕು…
ಹೇಯ್…ಏನ್ ನೋಡ್ತಾ ಇದ್ದೀಯೋ
ಹಾಗಂದ್ರೆ…ಇಲ್ಲಿನ ಅಂದ ಚೆಂದಾನೆಲ್ಲಾ
ಚಿಂದಿ ಚಿಂದಿ ಮಾಡಬೇಕು…
ಅತ್ತಾ ಇತ್ತಾ ಓಡಾಡ್ಕೊಂಡು
ಎದ್ವಾ ತದ್ವಾ ಉರುಳುಬೇಕು…
ಅಹ್ಹಹ್ಹಹ್ಹಹ್ಹಾ…..
ಸೋಫಾ ಕುರ್ಚಿ ಎಳೆದಾಡುತ್ತಾ
ಪರದೇನೆಲ್ಲಾ ಹರಿದಾಕುತ್ತಾ
ಕಿಟಕಿ ಗಾಜು ಹೊಡೆದಾಕುತ್ತಾ
ಬಾಗಿಲು ಚಿಲುಕ ಮುರಿದಾಕುತ್ತಾ
ಥೈ ಥೈ ತಕಥೈ ಕುಣಿಬೇಕು
ಏನಾದರೊಂದು ಹೊಡಿಬೇಕು…
ಕೇಕೆ ಹಾಕಿ ನಗಬೇಕು…
ಅಹ್ಹಹ್ಹಹ್ಹಹ್ಹಾ….
ಅಹ್ಹಹ್ಹಾ…ನಗ್ತಾ ನಗ್ತಾ ಓಡಬೇಕು
ಓಡ್ತ ಓಡ್ತಾ ಬೀಳಬೇಕು…
ಬಿದ್ದ ಮೇಲೆ ಜೋರಾಗಿ ಅಳಬೇಕು
ಆಗ ಒಳಗಿರೋ ತಾಯಿ ನನ್ ಸಂಗಾತಿ
ಓಡೋಡಿ ಬಂದು ಪ್ರೀತಿಯಿಂದ
ಬಾಚಿ ತಬ್ಬಿಕೊಂಡು …
ಮಗುನಾ ಕಂಕುಳಲ್ಲಿ ಎತ್ತಿಕೊಂಡು
ಅಯ್ಯೋ ನನ್ ಪುಟ್ಟ…
ಏನಾಯ್ತಪ್ಪಾ ಕಂದ
ಏನಾಯ್ತು ನನ್ ಚಿನ್ನ ಅನ್ಕೊಂಡು
ಅಪ್ಪೊಕಂಡು ಲೊಚ ಲೊಚ
ಮುತ್ತಾ ಕೊಡಬೇಕು…
ಜೋ ಜೋ ಅಂತ ಲಾಲಿ ಹಾಡ್ತಾ…
ಅಕ್ಕರೆಯಿಂದ ರಮಿಸಬೇಕು..
ದೂರದಲ್ಲಿ ನಿಂತ್ಕೊಂಡು ಅದನ್ನೆಲ್ಲಾ
ಮೌನವಾಗಿ ನೋಡಬೇಕು…
ನೋಡ್ತಾ ನೋಡ್ತಾ ನಗಬೇಕು…
ಹ್ಹಾ…ನಗಬೇಕು…ಅಹ್ಹಹ್ಹಹ್ಹಾ…
ಅಹ್ಹಹ್ಹಹ್ಹಹ್ಹಾ…. ಅಹ್ಹಹ್ಹಹ್ಹಹ್ಹಾ….
Namma Gulabi Balliyalli Hoove Bittilla song lyrics from Kannada Movie Makkaliralavva Manethumba starring Ananthnag, Lakshmi, Shankarnag, Lyrics penned by Doddarange Gowda Sung by S P Balasubrahmanyam, Music Composed by G K Venkatesh, film is Directed by T S Nagabharana and film is released on 1984