LYRIC

Song Details Page after Lyrice

-
ಹಾಲುಂಡ ನಮ್ಮ ತವರಿನ ಐಸಿರಿ ನೀನವ್ವ
ಮನಸ್ಸಿನ್ನು ಮೊಗ್ಗವ್ವ
ಗಲ್ಲದ ಮ್ಯಾಲೆ ನಗು ಚೆಲ್ಲಿ ಕಣ್ಣೀರು ಒರೆಸವ್ವ
ಮೆಲ್ಲನೆ ನಡೆಯವ್ವ
ಅಂಬೆಗಾಲನು ಇಡುತ ಗೆಜ್ಜೆ ಸದ್ದನು ಮಾಡುತ
ಗಂಡನ ಜೊತೆಯಲಿ ಪಯಣ ಹೊರಡವ್ವ
ಮುದ್ದಿನ ಕಂದವ್ವ ಓ ಬಾರವ್ವ
ಹಾಲುಂಡ ನಮ್ಮ ತವರಿನ ಐಸಿರಿ ನೀನವ್ವ
ಮನಸ್ಸಿನ್ನು ಮೊಗ್ಗವ್ವ
 
ಮೂರು ಗಂಟಾಕ್ಸಿ ಧಾರೆ ಎರೆದ್‌ ಮ್ಯಾಲೆ
ಕೊಟ್ಟ ಹೆಣ್ಣೆಂದು ಕುಲಕ್ಕೆ ಹೊರಗೆ ಕೇಳವ್ವ
ಹೋದ ಮನೆಯಲ್ಲಿ ದಿನವೂ ಬೆಳಕಾಗಿ
ತುಪ್ಪದ ದೀಪವ ಹಚ್ಚಿ ಕಡ್ಡಿ ಬೆಳಗವ್ವ
ಅತ್ತೆ ಮಾವನನ್ನು ನೀ ಅವ್ವ ಅಪ್ಪ ಎನ್ನು
ಬಂಧು ಬಳಗವನ್ನು ನನ್ನವರೆ ನೀನೆನ್ನು
ಕೇಳವ್ವ ನನ್ನವ್ವ ಹೆಣ್ತನಕೆ ಮಾದರಿ ನೀನಾಗವ್ವ
 
||ಹಾಲುಂಡ ನಮ್ಮ ತವರಿನ ಐಸಿರಿ ನೀನವ್ವ
ಮನಸ್ಸಿನ್ನು ಮೊಗ್ಗವ್ವ||
 
ಅಳಿಯ ಈ ಗಿಳಿಯ ನಿನ್ನ ಕೈಗಿಟ್ಟೀವಿ
ಜೋಪಾನ ಮಾಡಪ್ಪ ಜನುಮದ ಗೆಳತಿಯ
ಮಗಳೇ ಕೇಳವ್ವ ಮುನಿಸು ಬ್ಯಾಡವ್ವ
ಕಾಲಿಟ್ಟ ಮನೆಯ ನಂದಾದೀಪವಾಗವ್ವ
ಎರಡೆ ಕೂಸನೆತ್ತು ಕಣ್ಣೆರಡೆ ಎಂದು ಹೇಳು
ಹೆತ್ತಮಕ್ಕಳನ್ನು ಮುತ್ತಂತೆ ನೀ ಕಾಣು
ವರುಷದಲೆ ತಾಯಾಗಿ ಬಸಿರೊದ್ದು ಬಾ ನಿನ್‌ ತವರಿಗೆ ನನ್ನವ್ವ
 
|| ಹಾಲುಂಡ ನಮ್ಮ ತವರಿನ ಐಸಿರಿ ನೀನವ್ವ
ಮನಸ್ಸಿನ್ನು ಮೊಗ್ಗವ್ವ
ಗಲ್ಲದ ಮ್ಯಾಲೆ ನಗು ಚೆಲ್ಲಿ ಕಣ್ಣೀರು ಒರೆಸವ್ವ
ಮೆಲ್ಲನೆ ನಡೆಯವ್ವ
ಅಂಬೆಗಾಲನು ಇಡುತ ಗೆಜ್ಜೆ ಸದ್ದನು ಮಾಡುತ
ಗಂಡನ ಜೊತೆಯಲಿ ಪಯಣ ಹೊರಡವ್ವ
ಮುದ್ದಿನ ಕಂದವ್ವ ಓ ಬಾರವ್ವ||

-
ಹಾಲುಂಡ ನಮ್ಮ ತವರಿನ ಐಸಿರಿ ನೀನವ್ವ
ಮನಸ್ಸಿನ್ನು ಮೊಗ್ಗವ್ವ
ಗಲ್ಲದ ಮ್ಯಾಲೆ ನಗು ಚೆಲ್ಲಿ ಕಣ್ಣೀರು ಒರೆಸವ್ವ
ಮೆಲ್ಲನೆ ನಡೆಯವ್ವ
ಅಂಬೆಗಾಲನು ಇಡುತ ಗೆಜ್ಜೆ ಸದ್ದನು ಮಾಡುತ
ಗಂಡನ ಜೊತೆಯಲಿ ಪಯಣ ಹೊರಡವ್ವ
ಮುದ್ದಿನ ಕಂದವ್ವ ಓ ಬಾರವ್ವ
ಹಾಲುಂಡ ನಮ್ಮ ತವರಿನ ಐಸಿರಿ ನೀನವ್ವ
ಮನಸ್ಸಿನ್ನು ಮೊಗ್ಗವ್ವ
 
ಮೂರು ಗಂಟಾಕ್ಸಿ ಧಾರೆ ಎರೆದ್‌ ಮ್ಯಾಲೆ
ಕೊಟ್ಟ ಹೆಣ್ಣೆಂದು ಕುಲಕ್ಕೆ ಹೊರಗೆ ಕೇಳವ್ವ
ಹೋದ ಮನೆಯಲ್ಲಿ ದಿನವೂ ಬೆಳಕಾಗಿ
ತುಪ್ಪದ ದೀಪವ ಹಚ್ಚಿ ಕಡ್ಡಿ ಬೆಳಗವ್ವ
ಅತ್ತೆ ಮಾವನನ್ನು ನೀ ಅವ್ವ ಅಪ್ಪ ಎನ್ನು
ಬಂಧು ಬಳಗವನ್ನು ನನ್ನವರೆ ನೀನೆನ್ನು
ಕೇಳವ್ವ ನನ್ನವ್ವ ಹೆಣ್ತನಕೆ ಮಾದರಿ ನೀನಾಗವ್ವ
 
||ಹಾಲುಂಡ ನಮ್ಮ ತವರಿನ ಐಸಿರಿ ನೀನವ್ವ
ಮನಸ್ಸಿನ್ನು ಮೊಗ್ಗವ್ವ||
 
ಅಳಿಯ ಈ ಗಿಳಿಯ ನಿನ್ನ ಕೈಗಿಟ್ಟೀವಿ
ಜೋಪಾನ ಮಾಡಪ್ಪ ಜನುಮದ ಗೆಳತಿಯ
ಮಗಳೇ ಕೇಳವ್ವ ಮುನಿಸು ಬ್ಯಾಡವ್ವ
ಕಾಲಿಟ್ಟ ಮನೆಯ ನಂದಾದೀಪವಾಗವ್ವ
ಎರಡೆ ಕೂಸನೆತ್ತು ಕಣ್ಣೆರಡೆ ಎಂದು ಹೇಳು
ಹೆತ್ತಮಕ್ಕಳನ್ನು ಮುತ್ತಂತೆ ನೀ ಕಾಣು
ವರುಷದಲೆ ತಾಯಾಗಿ ಬಸಿರೊದ್ದು ಬಾ ನಿನ್‌ ತವರಿಗೆ ನನ್ನವ್ವ
 
|| ಹಾಲುಂಡ ನಮ್ಮ ತವರಿನ ಐಸಿರಿ ನೀನವ್ವ
ಮನಸ್ಸಿನ್ನು ಮೊಗ್ಗವ್ವ
ಗಲ್ಲದ ಮ್ಯಾಲೆ ನಗು ಚೆಲ್ಲಿ ಕಣ್ಣೀರು ಒರೆಸವ್ವ
ಮೆಲ್ಲನೆ ನಡೆಯವ್ವ
ಅಂಬೆಗಾಲನು ಇಡುತ ಗೆಜ್ಜೆ ಸದ್ದನು ಮಾಡುತ
ಗಂಡನ ಜೊತೆಯಲಿ ಪಯಣ ಹೊರಡವ್ವ
ಮುದ್ದಿನ ಕಂದವ್ವ ಓ ಬಾರವ್ವ||

Halunda song lyrics from Kannada Movie Maduve Dibbana starring Abhishek, Sonal Monteiro,, Lyrics penned by S Umesh Sung by Rajesh Krishnan, Anuradha Bhat, Music Composed by A T Raveesh, film is Directed by S Umesh and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ