Mannagi Hutti Lyrics

in Madhuri

Video:

LYRIC

ಮಣ್ಣಾಗೆ ಹುಟ್ಟಿ ಮಣ್ಣಾಗೆ ಬೆಳೆದು
ಎಲ್ಲೆಲ್ಲೋ ನಡೆದು ಏನೇನೋ ಪಡೆದು
ಸಾಯ್ತೀವೋ ನಾವು ಎದ್ದು ಬಿದ್ದು..
ಸಾಯ್ತೀವೋ ನಾವು ಎದ್ದು ಬಿದ್ದು..
ಹೋಗ್ತೀವೋ ಕೊನೆಗೆ.. ಹೇಹೇಹೇಹೇ
ಎಲ್ಲಾನೂ ತೊರೆದು.. ಎಲ್ಲಾನೂ ತೊರೆದು

|| ಮಣ್ಣಾಗೆ ಹುಟ್ಟಿ ಮಣ್ಣಾಗೆ ಬೆಳೆದು
ಎಲ್ಲೆಲ್ಲೋ ನಡೆದು ಏನೇನೋ ಪಡೆದು…||
 
ಸ್ವಾರ್ಥಾನೇ ತುಂಬಿ ತುಳುಕೋ ಜಗದಲಿ 
ಆಟವ ಆಡ್ತಾನೆ ಮಾನವ
ಸ್ವಾರ್ಥಾನೇ ತುಂಬಿ ತುಳುಕೋ ಜಗದಲಿ
ಆಟವ ಆಡ್ತಾನೆ ಮಾನವ
ಯಾರನ್ನೋ ಸಾಕಿ.. ಯಾರನ್ನೋ ನೂಕಿ
ಬಲಿ ಕೊಡ್ತಾ ಬೆಳಿತಾನೆ ದಾನವ

|| ಮಣ್ಣಾಗೆ ಹುಟ್ಟಿ ಮಣ್ಣಾಗೆ ಬೆಳೆದು
ಎಲ್ಲೆಲ್ಲೋ ನಡೆದು ಏನೇನೋ ಪಡೆದು
ಸಾಯ್ತೀವೋ ನಾವು ಎದ್ದು ಬಿದ್ದು..
ಹೋಗ್ತೀವೋ ಕೊನೆಗೆ.. ಹೇಹೇಹೇಹೇ
ಎಲ್ಲಾನೂ ತೊರೆದು.. ಎಲ್ಲಾನೂ ತೊರೆದು…||

ಸಜ್ಜನರಾಗಿಯೂ ಸುಳ್ಳನ್ನು ಹೆಣೆದು
ನಾಟಕ ಆಡ್ತಾರೆ ಮಂದಿಯು
ಸಜ್ಜನರಾಗಿಯೂ ಸುಳ್ಳನ್ನು ಹೆಣೆದು
ನಾಟಕ ಆಡ್ತಾರೆ ಮಂದಿಯು
ದುಡ್ಡಿಗೆ ಮಣಿದು ಅಡ್ಡಡ್ಡ ಕುಣಿದು
ಲೋಕವ ಬಿಡುವಾಗ ಚಿಂದಿಯು

|| ಮಣ್ಣಾಗೆ ಹುಟ್ಟಿ ಮಣ್ಣಾಗೆ ಬೆಳೆದು
ಎಲ್ಲೆಲ್ಲೋ ನಡೆದು ಏನೇನೋ ಪಡೆದು
ಸಾಯ್ತೀವೋ ನಾವು ಎದ್ದು ಬಿದ್ದು..
ಹೋಗ್ತೀವೋ ಕೊನೆಗೆ.. ಹೇಹೇಹೇಹೇ
ಎಲ್ಲಾನೂ ತೊರೆದು.. ಎಲ್ಲಾನೂ ತೊರೆದು…||
 
ದಿಕ್ಕಿಲ್ಲದೋರು ಪರದೇಶಿಗಳಾಗಿ
ಅಲೆದಲೆದು ಕಾಣ್ತಾರೆ ನರಕವಾ...
ದಿಕ್ಕಿಲ್ಲದೋರು ಪರದೇಶಿಗಳಾಗಿ
ಅಲೆದಲೆದು ಕಾಣ್ತಾರೆ ನರಕವಾ...
ಯಾರಿಗೆ ಯಾರೋ ಕಾರಣರಾಗಿ
ಬಲವಂತ ನೂಕ್ತಾರೆ ಕಾಲವಾ ..

|| ಮಣ್ಣಾಗೆ ಹುಟ್ಟಿ ಮಣ್ಣಾಗೆ ಬೆಳೆದು
ಎಲ್ಲೆಲ್ಲೋ ನಡೆದು ಏನೇನೋ ಪಡೆದು
ಸಾಯ್ತೀವೋ ನಾವು ಎದ್ದು ಬಿದ್ದು..
ಹೋಗ್ತೀವೋ ಕೊನೆಗೆ.. ಹೇಹೇಹೇಹೇ
ಎಲ್ಲಾನೂ ತೊರೆದು.. ಎಲ್ಲಾನೂ ತೊರೆದು
ಎಲ್ಲಾನೂ ತೊರೆದು.. ಎಲ್ಲಾನೂ ತೊರೆದು
ಎಲ್ಲಾನೂ ತೊರೆದು.. ಎಲ್ಲಾನೂ ತೊರೆದು…||

Mannagi Hutti song lyrics from Kannada Movie Madhuri starring Geetha, Vinod Alva, Lokanath, Lyrics penned by Doddarange Gowda Sung by S P Balasubrahmanyam, Music Composed by Sangeetha Raja, film is Directed by K V Jayaram and film is released on 1989