ಜಗದೀಶ್ವರೀ... ಅಮ್ಮಾ...
ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ
ಮೇಲು ಕೀಳು ಎಂದು ಮನುಜ
ತಂದುಕೊಂಡ ದಳ್ಳುರಿ
|| ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ..||
ಗಾಳಿ ನೀರು ಬೆಳಕು ಭೂಮಿ ಗಗನಕೆಲ್ಲಿ ಜಾತಿ
ಈ ಐದರಿಂದ ಆದ ನಮಗೆ ಏಕೆ ಇಂತ ನೀತಿ
|| ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ..||
ಕಾಡ ಕಲ್ಲ ಶಿಲ್ಪಿ ಕೆತ್ತಲದುವೆ ದೇವರಾಯಿತೆ
ಬೇಡಿದೆಲ್ಲ ಬಯಕೆ ನೀಡುವಂತ ಶಕ್ತಿ ಬಂದಿತೆ
ಭಕ್ತಿ ಕೇಂದ್ರವೆನಿಸೆ ಗುಡಿಯು ಶಕ್ತಿ ಬಂದಿತು
ಭಾವದ ವೇಗ ತುಂಬಿ ದೈವ ನೆಲೆಸಿತು
|| ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ..||
ಹುಟ್ಟುವಾಗ ಒಂದೆ ರೀತಿ ಸತ್ತ ಮೇಲೆ ಇಲ್ಲ ಜಾತಿ
ಇರುವ ನಡುವೆ ಏಕೆ ನಮಗೆ ಭೇದಭಾವ ಭ್ರಾಂತಿ
ಅನ್ನದ ಗುಳಿನಲ್ಲಿಹುದೆ ಜಾತಿ ಎಂಬ ಮುದ್ರೆ
ಎಲ್ಲ ತನ್ನ ಮಕ್ಕಳೆಂದು ಮುದ್ದಿಸದೆ ನಿದ್ರೆ
|| ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ..||
ನೀನೆ ಪ್ರೇಮರೂಪವೆಂದು ಜಗವು ಸಾರಿದೆ
ಒಲಿದ ಮನಗಳೆರಡು ಕೂಡೆ ಹರಸಬಾರದೆ
ಹೆಣ್ಣು ನೋವ ಹೆಣ್ಣು ದೈವ ಅರಿಯಲಾರದೆ
ನನ್ನ ಬಾಳ ಇರುಳು ಹಗಲು ನಿನ್ನದಾಗಿದೆ
|| ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ..||
ಜಗದೀಶ್ವರೀ... ಅಮ್ಮಾ...
ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ
ಮೇಲು ಕೀಳು ಎಂದು ಮನುಜ
ತಂದುಕೊಂಡ ದಳ್ಳುರಿ
|| ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ..||
ಗಾಳಿ ನೀರು ಬೆಳಕು ಭೂಮಿ ಗಗನಕೆಲ್ಲಿ ಜಾತಿ
ಈ ಐದರಿಂದ ಆದ ನಮಗೆ ಏಕೆ ಇಂತ ನೀತಿ
|| ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ..||
ಕಾಡ ಕಲ್ಲ ಶಿಲ್ಪಿ ಕೆತ್ತಲದುವೆ ದೇವರಾಯಿತೆ
ಬೇಡಿದೆಲ್ಲ ಬಯಕೆ ನೀಡುವಂತ ಶಕ್ತಿ ಬಂದಿತೆ
ಭಕ್ತಿ ಕೇಂದ್ರವೆನಿಸೆ ಗುಡಿಯು ಶಕ್ತಿ ಬಂದಿತು
ಭಾವದ ವೇಗ ತುಂಬಿ ದೈವ ನೆಲೆಸಿತು
|| ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ..||
ಹುಟ್ಟುವಾಗ ಒಂದೆ ರೀತಿ ಸತ್ತ ಮೇಲೆ ಇಲ್ಲ ಜಾತಿ
ಇರುವ ನಡುವೆ ಏಕೆ ನಮಗೆ ಭೇದಭಾವ ಭ್ರಾಂತಿ
ಅನ್ನದ ಗುಳಿನಲ್ಲಿಹುದೆ ಜಾತಿ ಎಂಬ ಮುದ್ರೆ
ಎಲ್ಲ ತನ್ನ ಮಕ್ಕಳೆಂದು ಮುದ್ದಿಸದೆ ನಿದ್ರೆ
|| ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ..||
ನೀನೆ ಪ್ರೇಮರೂಪವೆಂದು ಜಗವು ಸಾರಿದೆ
ಒಲಿದ ಮನಗಳೆರಡು ಕೂಡೆ ಹರಸಬಾರದೆ
ಹೆಣ್ಣು ನೋವ ಹೆಣ್ಣು ದೈವ ಅರಿಯಲಾರದೆ
ನನ್ನ ಬಾಳ ಇರುಳು ಹಗಲು ನಿನ್ನದಾಗಿದೆ
|| ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ..||
Jyothi Yaava Jaathiyamma song lyrics from Kannada Movie Kaveri starring Bharathi, Rajesh, Pandari Bai, Lyrics penned by Vijaya Narasimha Sung by S Janaki, Music Composed by M Ranga Rao, film is Directed by H N Reddy and film is released on 1975