Bhale Brahmachari Lyrics

in Kappu Bilupu

Video:

LYRIC

ಭಲೇ ಬ್ರಹ್ಮಚಾರಿ ನೋಡು ಒಂದು ಬಾರಿ
ಭಲೇ ಬ್ರಹ್ಮಚಾರಿ ನೋಡು ಒಂದು ಬಾರಿ
ನನ್ನನ್ನು ಕಂಡರೆ,ಯೋಜನಾ ಹಾರಿ
ಓಡುವೇ ಏತಕೆ ಭೀತಿಯ ತೋರಿ
ಬಿಳುವೇ ಜಾರಿ ಓಡಾಡೋ ದಾರಿ
ಅಯ್ಯೋ ಪಾಪಾ ರೀ,
 
|| ಭಲೇ ಬ್ರಹ್ಮಚಾರಿ
ನೋಡು ಒಂದು ಬಾರಿ..
ಭಲೇ ಬ್ರಹ್ಮಚಾರಿ…||
 
ರುದ್ರಾಕ್ಷಿ ಏಕೆ, ಈ ದ್ರಾಕ್ಷಿ ಬೇಕೆ
ಸನ್ಯಾಸ ದೀಕ್ಷೆ, ನೀ ಹಿಡಿಯಲೇಕೆ
ಸಂಕೋಚದ ಸಂಕಲೆ
ಎಸೆದು ನಗಬಾರದೇ ... ಆಆಆ... 
ಸಂಗಾತಿಯು ಕರೆದಿರೆ ಬಳಿಗೆ ಬರಬಾರದೆ
ಹಿಡಿದಾಗ ನಾರಿಯ ಪಟ್ಟು 
ಹಿಡಿಯಲ್ಲೇ ಗಂಡಿನ ಜುಟ್ಟು
ಹಿಡಿದಾಗ ನಾರಿಯ ಪಟ್ಟು 
ಹಿಡಿಯಲ್ಲೇ ಗಂಡಿನ ಜುಟ್ಟು
ಇದೆ ನೋಡು ಬಾಳಿನ ಗುಟ್ಟು
ಮುಟ್ಟದ ಮುನಿಯೇ ಏತಕೆ ಸಿಟ್ಟು
 
|| ಭಲೇ ಬ್ರಹ್ಮಚಾರಿ
ನೋಡು ಒಂದು ಬಾರಿ..
ಭಲೇ ಬ್ರಹ್ಮಚಾರಿ…||
 
ನೀನೋದಲೇಕೆ ನಿರ್ಜಿವ ಚರಿತೆ ,
ನಿಂದಿರುವೆ ನೋಡಾ ಜೀವಂತ ಕವಿತೆ,
ಇತಿಹಾಸ ಕಾಣದ ಜೋಡಿ
ಆಗೋಣ ಬಾ ಆಆಆ...
ಚಿರ ನೂತನ ಪ್ರೇಮದ ಕಥೆಯ
ಬರೆಯೋಣ ಬಾ..
ಎದುರಿನಲಿ ನಿಂದಿರೆ ಹೆಣ್ಣು
ನೆಲದಲ್ಲಿ ಏತಕೆ ಕಣ್ಣು
ಎದುರಿನಲಿ ನಿಂದಿರೆ ಹೆಣ್ಣು
ನೆಲದಲ್ಲಿ ಏತಕೆ ಕಣ್ಣು
ತಲೆ ಎತ್ತಿ ನೋಡೊಲೆ ಗಂಡೇ
ನಾಚುವುದೇಕೋ ಮುತ್ತಿನ ಚೆಂಡೆ
 
|| ಭಲೇ ಬ್ರಹ್ಮಚಾರಿ ನೋಡು ಒಂದು ಬಾರಿ
ನನ್ನನ್ನು ಕಂಡರೆ,ಯೋಜನಾ ಹಾರಿ
ಓಡುವೇ ಏತಕೆ ಭೀತಿಯ ತೋರಿ
ಬಿಳುವೇ ಜಾರಿ ಓಡಾಡೋ ದಾರಿ
ಅಯ್ಯೋ ಪಾಪಾ ರೀ,
 
ಭಲೇ ಬ್ರಹ್ಮಚಾರಿ
ನೋಡು ಒಂದು ಬಾರಿ..
ಭಲೇ ಬ್ರಹ್ಮಚಾರಿ…||

Bhale Brahmachari song lyrics from Kannada Movie Kappu Bilupu starring Kalpana, T N Balakrishna, Rajesh, Lyrics penned by R N Jayagopal Sung by L R Eswari, Music Composed by R Rathna, film is Directed by S R Puttanna Kanagal and film is released on 1969