-
ಪ್ರೇಮದೂರಲ್ಲಿ ಮಾವು ತೋರಣ ಬಳೆಗಳ ಸಂಗೀತ
ಲಾಲಿಹಾಡಿಗೆ ರಾಜನಾದರೆ ತವರಿಗೆ ಸಂತೋಷ
ಹಸಿರಿರಲಿ ಚಿಗುರಿನಲಿ ಚಿಗುರಿರಲಿ ಋತುವಿನಲಿ
ಇರಲಿ ಬೆಸುಗೆಯ ಉಸಿರಿದು ಋತುವಿನ ಬಸುರಲಿ
||ಪ್ರೇಮದೂರಲ್ಲಿ ಮಾವು ತೋರಣ ಬಳೆಗಳ ಸಂಗೀತ
ಲಾಲಿಹಾಡಿಗೆ ರಾಜನಾದರೆ ತವರಿಗೆ ಸಂತೋಷ
ಹಸಿರಿರಲಿ ಚಿಗುರಿನಲಿ ಚಿಗುರಿರಲಿ ಋತುವಿನಲಿ
ಇರಲಿ ಬೆಸುಗೆಯ ಉಸಿರಿದು ಋತುವಿನ ಬಸುರಲಿ||
ಸೃಷ್ಟಿಸೊಬಗಲ್ಲಿ ಸಿಕ್ಕ ಮಳೆಬಿಲ್ಲ ಸುಖದ ಹಾಡಾಗು ನೀ
ಅಷ್ಟದಿಕ್ಕುಗಳ ಆಳದೊರೆಯನ್ನ ತರುವ ತಾಯಾಗು ನೀ
ಏ ಕೆನ್ನೆಗುಳಿಯಲ್ಲಿ ಚಿಮ್ಮೊ ಚೆಲುವಲ್ಲಿ ಸಿಗುವೆ ಎಂದೆಂದು ನಾ
ಕಣ್ಣಬಿಂಬದಲಿ ರೆಪ್ಪೆ ಅಂಚಿನಲಿ ಹೊಳೆವ ನಕ್ಷತ್ರ ನಾ
ಕಪ್ಪಿನಮಣಿಯ ಕಟ್ಟುತ ಹಸೆಯ ಹತ್ತುವ ಹಾಡಿ ಸೋಬಾನ
ಸಂಜೆಯ ರವಿಯ ಮೆಚ್ಚುವ ಕವಿಯ ಕಾವ್ಯದ ದೀಪ ಹಚ್ಚೋಣ
ತಾರೆಗಳ ಬಾನಿನಲ್ಲಿ ನೀನು ತಾವರೆಯ ಜೀವ ಹನಿ ನೀನು
ಹೂವಿನಲ್ಲಿ ದುಂಬಿಗಳ ಗೂಡು ಕೂಡಿಕೊಂಡ ನೋಟಗಳ ಹಾಡು
ಇರಲಿ ಗೆಳೆತನ ಕಣ್ಣುಗಳ ರೆಪ್ಪೆಗಳ ಚಿಪ್ಪಿನಲಿ
||ಪ್ರೇಮದೂರಲ್ಲಿ ಮಾವು ತೋರಣ ಬಳೆಗಳ ಸಂಗೀತ
ಲಾಲಿಹಾಡಿಗೆ ರಾಜನಾದರೆ ತವರಿಗೆ ಸಂತೋಷ||
ಜನ್ಮಜನ್ಮದಲಿ ಧರ್ಮಕರ್ಮದಲಿ ನಿನಗೆ ಸಂಗಾತಿ ನಾ
ಬೆಳ್ಳಿ ಬೆಳಕಿಂದ ಬಂದು ಬೆರೆತಿಲ್ಲಿ ಇಡುವೆ ಸಿಂಧೂರ ನಾ
ಇಟ್ಟ ಬೆಳಕೆಲ್ಲ ಚೆಲ್ಲಿ ಜಗಕ್ಕೆಲ್ಲ ಬದುಕು ಹೊನ್ನಾಗಿದೆ
ಮುಗ್ಧ ಅಲೆಯಲ್ಲಿ ನಕ್ಕು ಕಡಲೆಲ್ಲ ಶುಭವ ಹಾರೈಸಿದೆ
ಕಾಲದ ಒಳಗೆ ಕಾಣುವ ನೆರಳೆ ನಿನ್ನಯ ಜಾಡೆ ರಂಗೋಲಿ
ಪ್ರೇಮದ ಒಳಗೆ ಆಡುವ ಮುಗಿಲೆ ನೀನಿರೊ ತೀರ ಸುವ್ವಾಲೆ
ಮೂಡುವಂತೆ ಬಾನಿನಲ್ಲಿ ಸೂರ್ಯ ಚೆಲ್ಲಿನಿಂತೆ ಬಾಳಿನಲಿ ಪ್ರಾಯ
ಸ್ವಾತಿಮಳೆ ನೀರ ಹನಿ ನೀನು ಸೇರಲೆಂದೆ ಜಾರಿ ಬಂದೆ ನಾನು
ಇರಲಿ ನಲಿಯುವ ನವಿಲಿನ ನಗುವಿನ ನವಋತು