Nannanu Thumba Preethisuva Lyrics

in Kadambari

LYRIC

ನನ್ನನ್ನು ತುಂಬಾ ಪ್ರೀತಿಸುವ
ಸ್ನೇಹಿತ ದೂರ ಹೋಗಿರುವಾ
ಬೇಗನೆ ಬರುವೆ ಎಂದಿರುವ
ಕಾದಿರು ಇಲ್ಲೇ ಅಂದಿರುವಾ

ನನ್ನನ್ನು ತುಂಬಾ ಪ್ರೀತಿಸುವಾ
ಸ್ನೇಹಿತ ದೂರ ಹೋಗಿರುವ
ಬೇಗನೆ ಬರುವೆ ಎಂದಿರುವ
ಕಾದಿರು ಇಲ್ಲೇ ಅಂದಿರುವಾ
ಕಾಯುವೇ ನಾನಿಲ್ಲಿ
ಕಾಯುವೇ ನಾನಿಲ್ಲಿ
ತೀರದ ಜೊತೆಯಲ್ಲಿ
 
|| ನನ್ನನ್ನು ತುಂಬಾ ಪ್ರೀತಿಸುವಾ
ಸ್ನೇಹಿತ ದೂರ ಹೋಗಿರುವ
ಬೇಗನೆ ಬರುವೆ ಎಂದಿರುವ
ಕಾದಿರು ಇಲ್ಲೇ ಅಂದಿರುವಾ ||
 
ಲಲ್ಲಲ ಲಾಲಾ ಲಾಲಾ ಲಲ್ಲಲ  

ನಲ್ಲನು ನಾನು ಪ್ರೀತಿಸಿದ
ಚಿತ್ರವ ಗಗನ ಚಿತ್ರಿಸಿದೆ
ಆಡಿದ ಮಾತು ಹಾಡುಗಳು
ತಂಬೆಲರಲ್ಲಿ ಮುದ್ರಿಸಿದೆ
ಕಣ್ಣಿಗೆ ಕಾಣದ ದೇವರಂತೆ
ಕೈಯ್ಯಿಗೆ ನಿಲುಕದ ನಾದದಂತೆ
ಎಲ್ಲೆಲ್ಲು ನಮ್ಮ ಪ್ರೇಮವಿದೆ
ಪ್ರೇಮಕೆ ನಮ್ಮ ಭಾಷೆಯಿದೆ
ಕಾಯುವೇ ನಾನಿಲ್ಲಿ
ಕಾಯುವೆ ನಾನಿಲ್ಲಿ
ಭಾಷೆಯ ಜೊತೆಯಲ್ಲಿ..

|| ನನ್ನನ್ನು ತುಂಬಾ ಪ್ರೀತಿಸುವಾ
ಸ್ನೇಹಿತ ದೂರ ಹೋಗಿರುವ
ಬೇಗನೆ ಬರುವೆ ಎಂದಿರುವ
ಕಾದಿರು ಇಲ್ಲೇ ಅಂದಿರುವಾ ||
 
ತೀರದ ಮೇಲೆ ನಮ್ಮಿಬ್ಬರ
ಹೆಜ್ಜೆಯ ಗುರುತ ಕಂಡಿಹಿರಾ
ನೀರಿನ ಅಲೆಯ ಓಲೆಯಲಿ
ನಮ್ಮಯ ಹೆಸರ ಓದಿಹಿರಾ
ಬಾಳಿನ ನೆನಪಿನ ತೋಟದಲ್ಲಿ
ಬೀಸುವ ಕಂಪಿನ ಗಾಳಿಯಲ್ಲಿ
ಜೇನಿನ ಮಾತು ಕೇಳಿಸದೇ
ಪ್ರೇಮದ ಲಾಲಿ ಆಲಿಸದೆ
ಕಾಯುವೆ ನಾನಿಲ್ಲಿ
ಕಾಯುವೆ ನಾನಿಲ್ಲಿ
ಗಾಳಿಯ ಜೊತೆಯಲ್ಲಿ

|| ನನ್ನನ್ನು ತುಂಬಾ ಪ್ರೀತಿಸುವಾ
ಸ್ನೇಹಿತ ದೂರ ಹೋಗಿರುವ
ಬೇಗನೆ ಬರುವೆ ಎಂದಿರುವ
ಕಾದಿರು ಇಲ್ಲೇ ಅಂದಿರುವಾ
ಕಾಯುವೆ ನಾನಿಲ್ಲಿ
ಕಾಯುವೆ ನಾನಿಲ್ಲಿ
ಅಲೆಗಳ ಜೊತೆಯಲ್ಲಿ 
 
ನನ್ನನ್ನು ತುಂಬಾ ಪ್ರೀತಿಸುವಾ
ಪ್ರೇಮಿಯು ದೂರ ಹೋಗಿರುವ || 
 

Nannanu Thumba Preethisuva song lyrics from Kannada Movie Kadambari starring Shruthi, Naveen Chandar, Ananthnag, Lyrics penned by Hamsalekha Sung by S Janaki, Music Composed by Hamsalekha, film is Directed by Kodlu Ramakrishna and film is released on 1993