Yaara Shaapa Sididanthe Lyrics

in Jana Mecchida Maga

LYRIC

-
ಯಾರ ಶಾಪ ಸಿಡಿಲಂತೆ ಬಡಿದು ಹೀಗಾಯಿತು
ಊರು ಕೇರಿ ನಗುವಂತೆ ಎಂತ ಪಾಡಾಯಿತು
ಹಾಲಂತ ಮನಸ್ಸು ವಿಷವಾಗಬೇಕೆ ಬಾಳು ಇನ್ನೇಕೆ
ಮುತ್ತಂತ ಮನೆಗೆ ಕಿಡಿ ಹಾರಬೇಕೆ ವಿಧಿಯೆ ಹೀಗೇಕೆ
ಮುತ್ತಂತ ಮನೆಗೆ ಕಿಡಿ ಹಾರಬೇಕೆ ವಿಧಿಯೆ ಹೀಗೇಕೆ
ಯಾರ ಶಾಪ ಸಿಡಿಲಂತೆ ಬಡಿದು ಹೀಗಾಯಿತು
 
ಅಂದು ಈ ತೋಳು ಉಯ್ಯಾಲೆಯಾಗಿರಲು ಜೀವ ತಂಪಾಯಿತು
ಪ್ರೀತಿ ಜೇನಾಗಿ ಮೈತುಂಬ ಸೂಸಿರಲು ಆಸೆ ಹೂವಾಯಿತು
ಹೇಳು ಏನಾಯಿತು ಆ ಪ್ರೀತಿ ಒಣಗಿ ಬರಡಾಯಿತೆ
ದುಂಬಿಗೆಲ್ಲುಂಟು ಈ ರೀತಿ ಬೇರೆ ಮಧು ಹೀರಿತೆ
ಬದುಕೇನಾಗಿದೆ ಬರಿ ಹುಡುಗಾಟವೆ ಪ್ರೀತಿ ಗಡಿದಾಟಿದೆ
ಮನೆ ಹೋಳಾಗಿದೆ ಮನ ಕುರುಡಾಗಿದೆ ದಾರಿ ಬರದಾಗಿದೆ
 
ಪ್ರೀತಿ ಈ ಮನೆಗೆ ಆಧಾರವಾಗಿರಲು ದುಃಖ ನೀ ನೀಡಿದೆ
ಬಾಳಸಂಗಾತಿ ನಿಟ್ಟುಸಿರು ಹಾಕಿರಲು ಹೋದೆ ನೀನೆಲ್ಲಿಗೆ
ಅಂದು ನಾ ಕಂಡ ನೂರಾಸೆ ಹಿರಿವ ಮುಳ್ಳಾಯಿತು
ನಿನ್ನ ಆ ದಾಹ ವ್ಯಾಮೋಹ ಇಂದು ಸುಳ್ಳಾಯಿತು
ನಗುವೇನಾಯಿತು ಸುಖ ಹೇಗಾಯಿತು ಯಾವ ಬಿರುಗಾಳಿಗೆ
ಬರಿ ಕೋಲಾಹಲ ಬರಿ ಹಾಲಾಹಲ ನಿನ್ನ ಈ ಬಾಳಿಗೆ
 

Yaara Shaapa Sididanthe song lyrics from Kannada Movie Jana Mecchida Maga starring Sridhar, Chandrika, Anjali, Lyrics penned bySung by S P Balasubrahmanyam, Music Composed by Manoranjan Prabhakar, film is Directed by B D Sheshu and film is released on 1993