Thuntukannali Eno Kalpane Lyrics

in Inspector Vikram

Video:

LYRIC

ತುಂಟು ಕಣ್ಣಲ್ಲಿ ಏನೋ ಕಲ್ಪನೆ
ತಿಳಿಯಲಾಗದ ನೂರು ಭಾವನೆ
ಯಾವ ರೀತಿಯ ಮೋಡಿ ಹಾಕಿದೆ
ನಿನ್ನ ರೂಪವೇ ನನ್ನ ಕಾಡಿದೆ
ಪ್ರೇಮ ಭಾವ ತಂದ
ನೋವ ತಾಳಲಾರೆ ಹೇಳಲಾರೆ

|| ತುಂಟು ಕಣ್ಣಲ್ಲಿ ಏನೋ ಕಲ್ಪನೆ
ತಿಳಿಯಲಾಗದ ನೂರು ಭಾವನೆ ||

ನುಡಿಸಿದೆ ನೀ ಹೊಸದೊಂದು ರಾಗವ
ಕಲಿಸಿದೆ ನೀ ಒಲವೆಂಬ ಪಾಠವ
ನುಡಿಸಿದೆ ನೀ ಹೊಸದೊಂದು ರಾಗವ
ಕಲಿಸಿದೆ ನೀ ಒಲವೆಂಬ ಪಾಠವ
ಮಧುರ ಭಾವನೆ ಮಿಡಿದಾಗ
ಮನದ ವೀಣೆಯು ನುಡಿದಾಗ     
ನನ್ನೇ ನಾನೇ ಮರೆತು ಹೋದೆ
ಪ್ರೇಮದಲ್ಲಿ ಬೆರೆತು ಹೋದೆ

|| ತುಂಟು ಕಣ್ಣಲ್ಲಿ ಏನೋ ಕಲ್ಪನೆ
ತಿಳಿಯಲಾಗದ ನೂರು ಭಾವನೆ
ಯಾವ ರೀತಿಯ ಮೋಡಿ ಹಾಕಿದೆ
ನಿನ್ನ ರೂಪವೇ ನನ್ನ ಕಾಡಿದೆ
ಪ್ರೇಮ ಭಾವ ತಂದ
ನೋವ ತಾಳಲಾರೆ ಹೇಳಲಾರೆ
 
ತುಂಟು ಕಣ್ಣಲ್ಲಿ ಏನೋ ಕಲ್ಪನೆ
ತಿಳಿಯಲಾಗದ ನೂರು ಭಾವನೆ..||

ಮೈಮನವ ಬೆಸೆದ ಸಮಾಗಮ
ಹೊಸ ಬಗೆಯ ರಸಭಾವ ಸಂಗಮ...
ಮೈಮನವ ಬೆಸೆದ ಸಮಾಗಮ
ಹೊಸ ಬಗೆಯ ರಸಭಾವ ಸಂಗಮ
ಒಲವೇ ಬಾಳಿನ ಸಿರಿಯಾಗಿ
ವರವ ನೀಡಿದೇ ನಮಗಾಗಿ
ಜೇನಿನಂಥ ನಿನ್ನ ಮಾತೆ
ಮೂಡಿ ಬಂದ ಪ್ರೇಮಗೀತೆ

|| ತುಂಟು ಕಣ್ಣಲ್ಲಿ ಏನೋ ಕಲ್ಪನೆ
ತಿಳಿಯಲಾಗದ ನೂರು ಭಾವನೆ
ಯಾವ ರೀತಿಯ ಮೋಡಿ ಹಾಕಿದೆ
ನಿನ್ನ ರೂಪವೇ ನನ್ನ ಕಾಡಿದೆ
ಪ್ರೇಮ ಭಾವ ತಂದ
ನೋವ ತಾಳಲಾರೆ ಹೇಳಲಾರೆ
 
ತುಂಟು ಕಣ್ಣಲ್ಲಿ ಏನೋ ಕಲ್ಪನೆ
ತಿಳಿಯಲಾಗದ ನೂರು ಭಾವನೆ…||

Thuntukannali Eno Kalpane song lyrics from Kannada Movie Inspector Vikram starring Shivarajkumar, Kavya, K S Ashwath, Lyrics penned by Sriranga Sung by S P Balasubrahmanyam, Manjula Gururaj, Music Composed by Vijayanand, film is Directed by Dinesh Babu and film is released on 1989