Moogutthi Mumbhara Lyrics

in Hosamane Aliya

Video:

LYRIC

-
ಮೂಗುತಿ ಮುಂಭಾರ  ಹೂದಂಡೆ ಹಿಂಭಾರ
ಬೆಳ್ಳಿಯ ವಡ್ಯಾಣ ಸೊಂಟಕ್ಕೆ ಅತಿಭಾರ
ನೀ ಕೊಟ್ಟ ಖಡ್ಗ ಕೈಭಾರ ಉಟ್ಟಂತ ಸೀರೆ ಮೈಭಾರ
ತಾವರೆಯ ಈ ಕಣ್ಣುಗಳು ಕಾಡಿಗೆಯ ಕರಿಗೆರೆಯು ಬಲು ಭಾರ
 
||ಮೂಗುತಿ ಮುಂಭಾರ  ಹೂದಂಡೆ ಹಿಂಭಾರ
ಬೆಳ್ಳಿಯ ವಡ್ಯಾಣ ಸೊಂಟಕ್ಕೆ ಅತಿಭಾರ
ನೀ ಕೊಟ್ಟ ಖಡ್ಗ ಕೈಭಾರ ಉಟ್ಟಂತ ಸೀರೆ ಮೈಭಾರ
ತಾವರೆಯ ಈ ಕಣ್ಣುಗಳು ಕಾಡಿಗೆಯ ಕರಿಗೆರೆಯು ಬಲು ಭಾರ||
 
ಮುತ್ತು ಮಳೆಯಾಗಿ ಹತ್ತಿರಕ್ಕೆ ಬಂದೆ ಜೀವ ತಂಪಾಗಿದೆ
ಸುತ್ತಸುಳಿದಾಡಿ ಮತ್ತೇರಿದಂತೆ ಗಾಳಿ ತೂರಾಡಿದೆ
ಬಂಧು ನೀನಾದೆ ಸಂಬಂಧವೆ ಆದೆ
ಬಂಧು ನೀನಾದೆ ಸಂಬಂಧವೆ ಆದೆ
ಗಂಧ ನಾನಾಗಿ ತೇಲಿದೆ…..
ಆಸೆ ದನಿಯಾಗಿದೆ ಮಾತೆಲ್ಲ ಇಂದು ಪ್ರೀತಿ ಹಾಡಾಗಿದೆ
 
||ಮೂಗುತಿ ಮುಂಭಾರ  ಹೂದಂಡೆ ಹಿಂಭಾರ
ಬೆಳ್ಳಿಯ ವಡ್ಯಾಣ ಸೊಂಟಕ್ಕೆ ಅತಿಭಾರ
ನೀ ಕೊಟ್ಟ ಖಡ್ಗ ಕೈಭಾರ ಉಟ್ಟಂತ ಸೀರೆ ಮೈಭಾರ
ತಾವರೆಯ ಈ ಕಣ್ಣುಗಳು ಕಾಡಿಗೆಯ ಕರಿಗೆರೆಯು ಬಲು ಭಾರ||
 
ಚೈತ್ರದುಯ್ಯಾಲೆ ಹೂತೇರನ್ನೇರಿ ಬಾಳು ತೂಗಾಡಿದೆ
ರಂಗು ರಂಗೋಲಿ ಚಿತ್ತಾರದಂತೆ ಲೋಕ ಚೆಲುವಾಗಿದೆ
ಹೊಂಗೆ ನೆರಳಲ್ಲಿ ಗಂಗೆ ನೀನಾದೆ
ಹೊಂಗೆ ನೆರಳಲ್ಲಿ ಗಂಗೆ ನೀನಾದೆ
ಸಂಗ ಸವಿಯಾಗಿ ಸೇರಿದೆ……
ಭಾವ ಹೊಸದಾಗಿದೆ ಗೊತ್ತಿಲ್ಲದಂತೆ ಪ್ರೇಮಫಲ ನೀಡಿದೆ
 
||ಮೂಗುತಿ ಮುಂಭಾರ  ಹೂದಂಡೆ ಹಿಂಭಾರ
ಬೆಳ್ಳಿಯ ವಡ್ಯಾಣ ಸೊಂಟಕ್ಕೆ ಅತಿಭಾರ
ನೀ ಕೊಟ್ಟ ಖಡ್ಗ ಕೈಭಾರ ಉಟ್ಟಂತ ಸೀರೆ ಮೈಭಾರ
ತಾವರೆಯ ಈ ಕಣ್ಣುಗಳು ಕಾಡಿಗೆಯ ಕರಿಗೆರೆಯು ಬಲು ಭಾರ||
 
||ಮೂಗುತಿ ಮುಂಭಾರ  ಹೂದಂಡೆ ಹಿಂಭಾರ
ಬೆಳ್ಳಿಯ ವಡ್ಯಾಣ ಸೊಂಟಕ್ಕೆ ಅತಿಭಾರ
ನೀ ಕೊಟ್ಟ ಖಡ್ಗ ಕೈಭಾರ ಉಟ್ಟಂತ ಸೀರೆ ಮೈಭಾರ
ತಾವರೆಯ ಈ ಕಣ್ಣುಗಳು ಕಾಡಿಗೆಯ ಕರಿಗೆರೆಯು ಬಲು ಭಾರ||

Moogutthi Mumbhara song lyrics from Kannada Movie Hosamane Aliya starring Ananthnag, Bhavya, Lokesh, Lyrics penned by Su Rudramurthy Shastry Sung by S P Balasubrahmanyam, Manjula Gururaj, Music Composed by Manoranjan Prabhakar, film is Directed by B Ramamurthy and film is released on 1991