Hey Jaadugara Banda Lyrics

in Hosamane Aliya

Video:

LYRIC

-
ಹೇ ಜಾದೂಗಾರ ಬಂದ ಮೋಜುಗಾರ ಬಂದ
ಮೋಡಿಗಾರ ನಾನೆ ಮಾಯಗಾರ
ನಾನು ಮಾಡಿದರೆ ಮ್ಯಾಜಿಕ್ಕು ನೋಡೊ ಜನಕ್ಕೆ ಗುಡ್‌ ಲಕ್ಕು
ಮೋಸಮಾಡುವ ಧಗಕೋರರಿಗೆ ವೆರಿ ವೆರಿ ಬ್ಯಾಡ್‌ ಲಕ್ಕು
 
||ಹೇ ಜಾದೂಗಾರ ಬಂದ ಮೋಜುಗಾರ ಬಂದ
ಮೋಡಿಗಾರ ನಾನೆ ಮಾಯಗಾರ
ನಾನು ಮಾಡಿದರೆ ಮ್ಯಾಜಿಕ್ಕು ನೋಡೊ ಜನಕ್ಕೆ ಗುಡ್‌ ಲಕ್ಕು
ಮೋಸಮಾಡುವ ಧಗಕೋರರಿಗೆ ವೆರಿ ವೆರಿ ಬ್ಯಾಡ್‌ ಲಕ್ಕು||
 
ಉಟ್ಟಬಟ್ಟೆಗಳೆ ಮಂಗಮಾಯ ಹ್ಯಾಟು ಬೂಟು ಮಾಯ
ಸೊಟ್ಟ ಮೂತಿಯ ರಂಗರಾಯ ಗಡ್‌ ಮೀಸೆ ಮಾಯ
ಉಟ್ಟಬಟ್ಟೆಗಳೆ ಮಂಗಮಾಯ ಹ್ಯಾಟು ಬೂಟು ಮಾಯ
ಸೊಟ್ಟ ಮೂತಿಯ ರಂಗರಾಯ ಗಡ್‌ ಮೀಸೆ ಮಾಯ
ಉದ್ದ ಜುಟ್ಟು ಮಾಯ ದೊಡ್ಡ ಹೊಟ್ಟೆ ಮಾಯ
ಹಲ್ಲು ಸೆಟ್ಟು ಮಾಯ ತಟ್ಟೆ ಲೋಟ ಮಾಯ
ದಂಡ ಹಿಟಿದು ನಾ ಮಂತ್ರ ಹೇಳಿದರೆ ಈ ಜಗವೆಲ್ಲ ಮಾಯ
 
ಚೆಲುವಾದ ಹುಡುಗಿ ಕಂಡು ಬಾಯ್‌ ಬಾಯ್‌ ಬಿಡ್ತೀಯ
ಹುಡುಗಿನೆ ಮುದುಕಿ ಆದ್ರೆ ಆಗೇನ್‌ ಮಾಡ್ತೀಯ
ಚೆಲುವಾದ ಹುಡುಗಿ ಕಂಡು ಬಾಯ್‌ ಬಾಯ್‌ ಬಿಡ್ತೀಯ
ಹುಡುಗಿನೆ ಮುದುಕಿ ಆದ್ರೆ ಆಗೇನ್‌ ಮಾಡ್ತೀಯ
 
||ಹೇ ಜಾದೂಗಾರ ಬಂದ ಮೋಜುಗಾರ ಬಂದ
ಮೋಡಿಗಾರ ನಾನೆ ಮಾಯಗಾರ
ನಾನು ಮಾಡಿದರೆ ಮ್ಯಾಜಿಕ್ಕು ನೋಡೊ ಜನಕ್ಕೆ ಗುಡ್‌ ಲಕ್ಕು
ಮೋಸಮಾಡುವ ಧಗಕೋರರಿಗೆ ವೆರಿ ವೆರಿ ಬ್ಯಾಡ್‌ ಲಕ್ಕು||
 
ಕದ್ದು ನೋಡುವ ಕಳ್ಳ ಖದೀಮ ಕಣ್ಣ ತುಂಬ ಸಂಚು
ಮುದ್ದುಹುಡುಗಿಯ ತಬ್ಬಿಕೊಳ್ಳಲು ಹಾಕುತ್ತಾನೆ ಹೊಂಚು
ಕದ್ದು ನೋಡುವ ಕಳ್ಳ ಖದೀಮ ಕಣ್ಣ ತುಂಬ ಸಂಚು
ಮುದ್ದುಹುಡುಗಿಯ ತಬ್ಬಿಕೊಳ್ಳಲು ಹಾಕುತ್ತಾನೆ ಹೊಂಚು
ಎದ್ದು ಬಿದ್ದು ಬಂದ ಗೆದ್ದರೇನೆ ಚೆಂದ
ಸದ್ದು ಮಾಡ್ದೆ ಸುಮ್ನೆ ಇದ್ದರೇನೆ ಚೆಂದ
ಪುಂಡ ಜನರಿಗೆ ಬೆಂಡು ತೆಗೆವ ಕೋದಂಡಪಾಣಿ ಬಂದ
ಚಿಕ್ಕಯ್ಯ ಯೋಚ್ನೆ ಮಾಡು ಇನ್ನೇನ್‌ ಗತಿ
ದೊಡ್ಡಯ್ಯ ಈಗ ನಿಂಗೆ ದೇವ್ರೆ ಗತಿ
ಚಿಕ್ಕಯ್ಯ ಯೋಚ್ನೆ ಮಾಡು ಇನ್ನೇನ್‌ ಗತಿ
ದೊಡ್ಡಯ್ಯ ಈಗ ನಿಂಗೆ ದೇವ್ರೆ ಗತಿ
 
||ಹೇ ಜಾದೂಗಾರ ಬಂದ ಮೋಜುಗಾರ ಬಂದ
ಮೋಡಿಗಾರ ನಾನೆ ಮಾಯಗಾರ
ನಾನು ಮಾಡಿದರೆ ಮ್ಯಾಜಿಕ್ಕು ನೋಡೊ ಜನಕ್ಕೆ ಗುಡ್‌ ಲಕ್ಕು
ಮೋಸಮಾಡುವ ಧಗಕೋರರಿಗೆ ವೆರಿ ವೆರಿ ಬ್ಯಾಡ್‌ ಲಕ್ಕು||

Hey Jaadugara Banda song lyrics from Kannada Movie Hosamane Aliya starring Ananthnag, Bhavya, Lokesh, Lyrics penned by Su Rudramurthy Shastry Sung by S P Balasubrahmanyam, Music Composed by Manoranjan Prabhakar, film is Directed by B Ramamurthy and film is released on 1991