Baana Kolminchu Lyrics

ಬಾನ ಕೋಲ್ಮಿಂಚು Lyrics

in Hoo Anthiya Uhoo Anthiya

in ಹೂಂ ಅಂತೀಯಾ ಊಹೂಂ ಅಂತೀಯಾ

LYRIC

ಬಾನ ಕೋಲ್ಮಿಂಚು ನೀಡ ಬಂದ ಬಂಗಾರಿ
ಯಾವ ರೂವಾರಿ ಕಡಿದ ನಿನ್ನ ಸಿಂಗಾರಿ
ಮುಗ್ಧ ಮನದಲ್ಲಿ ಬಂದೆ ವಧುವಾಗಿ
ಪ್ರೀತಿ ಬಾಳಲ್ಲಿ ಬೆರೆತೆ ಮಧುವಾಗಿ
ಬಾನ ಕೋಲ್ಮಿಂಚು ನೀಡ ಬಂದ ಬಂಗಾರಿ
ಯಾವ ರೂವಾರಿ ಕಡಿದ ನಿನ್ನ ಸಿಂಗಾರಿ
 
ಸಂಗಾತಿ ಎಂದು ಬಳಿಗೆ ನೀ ಬಂದು ಒಂದಾದೆ
ಸಂಪ್ರೀತಿ ತಂದು ಸಿರಿಯ ನೀ ಕಂಡು ಮುಂದಾದೆ
ನಲ್ಮೆ ತೇರಿನಲ್ಲಿ ಹೂವ ಹಾದಿನಡೆದೆ
ರಾಗ ರಂಗಿನಲಿ ಜೀವ ಭಾವ ಮಿಡಿದೆ
ಹೂವು ಕಾಯಿಯಾಗಿ ಕಾಯಿ ಹಣ್ಣಾಗಿದೆ
 
||ಬಾನ ಕೋಲ್ಮಿಂಚು ನೀಡ ಬಂದ ಬಂಗಾರಿ
ಯಾವ ರೂವಾರಿ ಕಡಿದ ನಿನ್ನ ಸಿಂಗಾರಿ||
 
ಮೈದುಂಬಿ ಪ್ರೀತಿ ಹೂವಾಗಿ ಬಿರಿಯೆ ಮುಳ್ಳಾದೆ
ಚೆಂದಾಗಿ ಬಂಧ ಒಂದಾಗಿ ಬೆಳೆಯೆ ಕಲ್ಲಾದೆ
ಹೂವೆ ಹಾವಾಗಿ ನೋವ ತಂದೆ ಏಕೆ
ಹಾಲು ವಿಷವಾಗಿ ಪ್ರೀತಿ ಕೊಂದೆ ಏಕೆ
ಚೆಲುವ ಚೆನ್ನಿಗನ ಚಿವುಟಿ ಚಿತೆ ಮಾಡಿದೆ
 
||ಬಾನ ಕೋಲ್ಮಿಂಚು ನೀಡ ಬಂದ ಬಂಗಾರಿ
ಮುಗ್ಧ ಚೆನ್ನಿಗ ಬಲಿಯಾದ ಸಿಂಗಾರಿ
ಜೇನ ಮನದಲ್ಲಿ ಬಂದೆ ಕಹಿಯಾಗಿ
ಪ್ರೀತಿ ಬಾಳಲ್ಲಿ ಬೆರೆತೆ ವಿಷವಾಗಿ||
 
||ಬಾನ ಕೋಲ್ಮಿಂಚು ನೀಡ ಬಂದ ಬಂಗಾರಿ
ಮುಗ್ಧ ಚೆನ್ನಿಗ ಬಲಿಯಾದ ಸಿಂಗಾರಿ||

ಬಾನ ಕೋಲ್ಮಿಂಚು ನೀಡ ಬಂದ ಬಂಗಾರಿ
ಯಾವ ರೂವಾರಿ ಕಡಿದ ನಿನ್ನ ಸಿಂಗಾರಿ
ಮುಗ್ಧ ಮನದಲ್ಲಿ ಬಂದೆ ವಧುವಾಗಿ
ಪ್ರೀತಿ ಬಾಳಲ್ಲಿ ಬೆರೆತೆ ಮಧುವಾಗಿ
ಬಾನ ಕೋಲ್ಮಿಂಚು ನೀಡ ಬಂದ ಬಂಗಾರಿ
ಯಾವ ರೂವಾರಿ ಕಡಿದ ನಿನ್ನ ಸಿಂಗಾರಿ
 
ಸಂಗಾತಿ ಎಂದು ಬಳಿಗೆ ನೀ ಬಂದು ಒಂದಾದೆ
ಸಂಪ್ರೀತಿ ತಂದು ಸಿರಿಯ ನೀ ಕಂಡು ಮುಂದಾದೆ
ನಲ್ಮೆ ತೇರಿನಲ್ಲಿ ಹೂವ ಹಾದಿನಡೆದೆ
ರಾಗ ರಂಗಿನಲಿ ಜೀವ ಭಾವ ಮಿಡಿದೆ
ಹೂವು ಕಾಯಿಯಾಗಿ ಕಾಯಿ ಹಣ್ಣಾಗಿದೆ
 
||ಬಾನ ಕೋಲ್ಮಿಂಚು ನೀಡ ಬಂದ ಬಂಗಾರಿ
ಯಾವ ರೂವಾರಿ ಕಡಿದ ನಿನ್ನ ಸಿಂಗಾರಿ||
 
ಮೈದುಂಬಿ ಪ್ರೀತಿ ಹೂವಾಗಿ ಬಿರಿಯೆ ಮುಳ್ಳಾದೆ
ಚೆಂದಾಗಿ ಬಂಧ ಒಂದಾಗಿ ಬೆಳೆಯೆ ಕಲ್ಲಾದೆ
ಹೂವೆ ಹಾವಾಗಿ ನೋವ ತಂದೆ ಏಕೆ
ಹಾಲು ವಿಷವಾಗಿ ಪ್ರೀತಿ ಕೊಂದೆ ಏಕೆ
ಚೆಲುವ ಚೆನ್ನಿಗನ ಚಿವುಟಿ ಚಿತೆ ಮಾಡಿದೆ
 
||ಬಾನ ಕೋಲ್ಮಿಂಚು ನೀಡ ಬಂದ ಬಂಗಾರಿ
ಮುಗ್ಧ ಚೆನ್ನಿಗ ಬಲಿಯಾದ ಸಿಂಗಾರಿ
ಜೇನ ಮನದಲ್ಲಿ ಬಂದೆ ಕಹಿಯಾಗಿ
ಪ್ರೀತಿ ಬಾಳಲ್ಲಿ ಬೆರೆತೆ ವಿಷವಾಗಿ||
 
||ಬಾನ ಕೋಲ್ಮಿಂಚು ನೀಡ ಬಂದ ಬಂಗಾರಿ
ಮುಗ್ಧ ಚೆನ್ನಿಗ ಬಲಿಯಾದ ಸಿಂಗಾರಿ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ