ನೀ ಇರದ ನಾಳೆ ಬೇಕಿಲ್ಲ ನನಗೆ
ನೀ ಇರುವಾಗ ಆ ತಾರೆ ಕೂಡ ಮಸುಕಾಗಿದೆ
ನಾನೆ ಪ್ರಾಮಾಣಿಕ
ನಿನ್ನೊಲವಿನ ನೆರಳಾಚೆಗೂ ಅದರಾಚೆಗೂ
ನೀನೆ ಜೊತೆಯಿರಲು
ಈ ಇರುಳು ಕೂಡ ತುಸು ನಾಚಿದೆ
ಒಲವಿನ ನೆನಪಿನಲಿ ಇರುವ
ಈ ಜೀವದ ಜೊತೆಗೆ
ಯಾರೊ ನನಗೆ ನೀನೆ ಹೇಳು
ಈ ನೆನಪೆ ನನಗೆ ಸಾಕು
ನಾನೇ ಬಹುಭಾವುಕ
ನನ್ನೊಳಗಿನ ಅನುರಾಗಕ್ಕೂ ಅದರಾಳಕ್ಕೂ
ನೀನೆ ಜೊತೆಯಿರಲು
ಈ ಇರುಳು ಕೂಡ ತುಸು ನಾಚಿದೆ
ನೀ ಇರದ ನಾಳೆ ಬೇಕಿಲ್ಲ ನನಗೆ
ನೀ ಇರುವಾಗ ಆ ತಾರೆ ಕೂಡ ಮಸುಕಾಗಿದೆ
ಓ ಜೀವವೆ ನೀ ದೂರ ಇದ್ದರು ಈ ಜಗಕ್ಕೆ ನೀ ಹತ್ತಿರ
ಕೊನೆವರೆಗು ನಾ ಜೊತೆಸಾಗುವ ಈ ದಿನಗಳೇನೆ ಬೇಕಾಗಿದೆ
ನೀ ಇರದ ನಾಳೆ ಬೇಕಿಲ್ಲ ನನಗೆ
ನೀ ಇರುವಾಗ ಆ ತಾರೆ ಕೂಡ ಮಸುಕಾಗಿದೆ
ನಾನೆ ಪ್ರಾಮಾಣಿಕ
ನಿನ್ನೊಲವಿನ ನೆರಳಾಚೆಗೂ ಅದರಾಚೆಗೂ
ನೀನೆ ಜೊತೆಯಿರಲು
ಈ ಇರುಳು ಕೂಡ ತುಸು ನಾಚಿದೆ
ಒಲವಿನ ನೆನಪಿನಲಿ ಇರುವ
ಈ ಜೀವದ ಜೊತೆಗೆ
ಯಾರೊ ನನಗೆ ನೀನೆ ಹೇಳು
ಈ ನೆನಪೆ ನನಗೆ ಸಾಕು
ನಾನೇ ಬಹುಭಾವುಕ
ನನ್ನೊಳಗಿನ ಅನುರಾಗಕ್ಕೂ ಅದರಾಳಕ್ಕೂ
ನೀನೆ ಜೊತೆಯಿರಲು
ಈ ಇರುಳು ಕೂಡ ತುಸು ನಾಚಿದೆ
ನೀ ಇರದ ನಾಳೆ ಬೇಕಿಲ್ಲ ನನಗೆ
ನೀ ಇರುವಾಗ ಆ ತಾರೆ ಕೂಡ ಮಸುಕಾಗಿದೆ
ಓ ಜೀವವೆ ನೀ ದೂರ ಇದ್ದರು ಈ ಜಗಕ್ಕೆ ನೀ ಹತ್ತಿರ
ಕೊನೆವರೆಗು ನಾ ಜೊತೆಸಾಗುವ ಈ ದಿನಗಳೇನೆ ಬೇಕಾಗಿದೆ