Pancha Bhoothagalu Lyrics

ಪಂಚಭೂತಗಳೆ Lyrics

in Henne Ninagenu Bandhana

in ಹೆಣ್ಣೇ ನಿನಗೇನು ಬಂಧನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪಂಚಭೂತಗಳೆ
ಸಾಕ್ಷಿಯುಂಟು ನಿನಗೆ
ಹೇಳು ಬಾರೆ ತುಳಸಿ…
ಅಷ್ಟ ದಿಕ್ಕುಗಳೆ
ನ್ಯಾಯ ಕೊಡಲಿ ಎನಗೆ
ಮಾತನಾಡೆ ತುಳಸಿ
 
ನಿನ್ನ ನಂಬಿದರೆ ಪೂಜೆ ಮಾಡಿದರೆ
ಕಷ್ಟ ಕಳೆಯುವೆನು ಬಾ ಎಂದೆ
ಸುಖವ ನೀಡುವೆನು ಬಾ ಎಂದೆ
ರಕ್ಷಿಸುವೆನು ನೀ ಬಾ ಎಂದೆ…
 
ನನ್ನ ಪೂಜೆಯಲಿ ದೋಷವೇನು
ಕಂಡೆ ನಿಜವ ಹೇಳೆ ತುಳಸಿ…
ನನ್ನ ನಂಬಿಕೆಯ ಗಾಳಿ ಗೋಪುರವ
ಕೆಡವಿ ನುಚ್ಚು ನೂರಾಗಿಸಿದೆ
ನನ್ನ ಬೆಂಕಿಯಲಿ ಬೇಯಿಸಿದೆ
ಕಣ್ಣ ನೀರಿನಲಿ ಮುಳುಗಿಸಿದೆ
ನನ್ನ ಕಷ್ಟದಲೆ ಏನು ಸುಖವ ಕಂಡೆ
ನೀನೇ ಹೇಳೆ ತುಳಸಿ…
 
ಹೆಣ್ಣು ಕುಲಕೆ ನೀನು
ತಾಯಿ ಅಲ್ಲವೇನೆ…
ನಿನ್ನ ಮಕ್ಕಳ ಗುಂಪಿನಲ್ಲಿ
ನನ್ನನ್ನೆ ಮರೆತೆಯೇನೆ…
ಬೇರೆ ಏನೂ ನಿನ್ನ ಬೇಡಲಿಲ್ಲವಲ್ಲೆ
ನನ್ನ ಗಂಡನ ಬುದ್ಧಿಗೆಟ್ಟು
ದಯ ತೋರಲಿಲ್ಲವಲ್ಲೆ…
ಬದುಕಿ ಬಾಳುವ ಆಸೆ ಎಲ್ಲವೂ
ಬತ್ತಿ ಹೋದರೂ ದಾರಿದೀಪವ
ತೋರುವಂತ ಮನ ಬರದೇನೆ..
ನಿನಗೆ ಕಾಯುವ ಶಕ್ತಿಯಿಲ್ಲವೇ
ಬೇಡಿದ ವರವೇ ಭಕ್ತೆ ಬೇಡುವ
ನೂಕು ಹಾಕುವುದು ಸರಿಯೇನೆ
ನಿನ್ನ ನಂಬುವುದು
ಮೂರ್ಖತನವು ತಾನೆ
ಮಾಯಗಾತಿ ತುಳಸಿ….
 
ನನ್ನ ಮನೆಯ ನಾನುಳಿಸಿಕೊಳ್ಳಬಲ್ಲೆ
ಎಲ್ಲಾ ಕಷ್ಟ ಜಯಿಸಿ…
ಆಗಲೆ ನನ್ನ ಹೆಸರು ತುಳಸಿ..
ನೀ ಬರಿ ಮೋಸಗಾತಿ ತುಳಸಿ…
 
ಯಮನ ಎದುರಿಸಿ ಪತಿಯ ಪ್ರಾಣವನು
ಮರಳಿ ಪಡೆಯಲಿಲ್ಲವೇ ಸಾವಿತ್ರಿ
ಸಾವು ಜಯಿಸಲಿಲ್ಲವೇ…
ರಾಮಚಂದ್ರನ ಮಡದಿಯಾದರೂ
ಕಷ್ಟಕೋಟಲೆ ನೂರು ಬಂದರೂ
ಸೀತೆ ಜಯಿಸಲಿಲ್ಲವೇ…
ಪಂಚ ಪಾಂಡವರ ಪರಮ ಸಾಧ್ವಿಯು
ಹೆಣ್ಣು ಅಲ್ಲವೇನೆ…
ದ್ರೌಪದಿ ಧೈರ್ಯಗೆಟ್ಟಳೇನೆ…
ಜೂಜಿನಾಟದಲಿ ರಾಜ್ಯ ಬಿಟ್ಟರೂ
ತುಂಬು ಸಭೆಯಲಿ ಮಾನ ಕಳೆದರೂ
ಛಲವ ಮರೆತಳೇನೆ…
ನನ್ನ ಗಂಡನ ಒಲಿಸಿಕೊಳ್ಳಲೆನಗೆ…
ಸಾಧ್ಯವಿಲ್ಲವೇನೆ…
ನನ್ನ ಮನೆಯನು ಉಳಿಸಿಕೊಳ್ಳಲೆನಗೆ…
ಶಕ್ತಿಯಿಲ್ಲವೇನೆ…
ಈ ದಿನ ಜೂಜಿನ ಮೋಜಿನ ಬಂಧನ
ಬಡಿದು ಬಗೆದು ಸಿಗಿದು ಒಗಿದು ಬರುವನು
ಬಡಿದು ಬಗೆದು ಸಿಗಿದು ಒಗೆದು ಬರುವನು

ಪಂಚಭೂತಗಳೆ
ಸಾಕ್ಷಿಯುಂಟು ನಿನಗೆ
ಹೇಳು ಬಾರೆ ತುಳಸಿ…
ಅಷ್ಟ ದಿಕ್ಕುಗಳೆ
ನ್ಯಾಯ ಕೊಡಲಿ ಎನಗೆ
ಮಾತನಾಡೆ ತುಳಸಿ
 
ನಿನ್ನ ನಂಬಿದರೆ ಪೂಜೆ ಮಾಡಿದರೆ
ಕಷ್ಟ ಕಳೆಯುವೆನು ಬಾ ಎಂದೆ
ಸುಖವ ನೀಡುವೆನು ಬಾ ಎಂದೆ
ರಕ್ಷಿಸುವೆನು ನೀ ಬಾ ಎಂದೆ…
 
ನನ್ನ ಪೂಜೆಯಲಿ ದೋಷವೇನು
ಕಂಡೆ ನಿಜವ ಹೇಳೆ ತುಳಸಿ…
ನನ್ನ ನಂಬಿಕೆಯ ಗಾಳಿ ಗೋಪುರವ
ಕೆಡವಿ ನುಚ್ಚು ನೂರಾಗಿಸಿದೆ
ನನ್ನ ಬೆಂಕಿಯಲಿ ಬೇಯಿಸಿದೆ
ಕಣ್ಣ ನೀರಿನಲಿ ಮುಳುಗಿಸಿದೆ
ನನ್ನ ಕಷ್ಟದಲೆ ಏನು ಸುಖವ ಕಂಡೆ
ನೀನೇ ಹೇಳೆ ತುಳಸಿ…
 
ಹೆಣ್ಣು ಕುಲಕೆ ನೀನು
ತಾಯಿ ಅಲ್ಲವೇನೆ…
ನಿನ್ನ ಮಕ್ಕಳ ಗುಂಪಿನಲ್ಲಿ
ನನ್ನನ್ನೆ ಮರೆತೆಯೇನೆ…
ಬೇರೆ ಏನೂ ನಿನ್ನ ಬೇಡಲಿಲ್ಲವಲ್ಲೆ
ನನ್ನ ಗಂಡನ ಬುದ್ಧಿಗೆಟ್ಟು
ದಯ ತೋರಲಿಲ್ಲವಲ್ಲೆ…
ಬದುಕಿ ಬಾಳುವ ಆಸೆ ಎಲ್ಲವೂ
ಬತ್ತಿ ಹೋದರೂ ದಾರಿದೀಪವ
ತೋರುವಂತ ಮನ ಬರದೇನೆ..
ನಿನಗೆ ಕಾಯುವ ಶಕ್ತಿಯಿಲ್ಲವೇ
ಬೇಡಿದ ವರವೇ ಭಕ್ತೆ ಬೇಡುವ
ನೂಕು ಹಾಕುವುದು ಸರಿಯೇನೆ
ನಿನ್ನ ನಂಬುವುದು
ಮೂರ್ಖತನವು ತಾನೆ
ಮಾಯಗಾತಿ ತುಳಸಿ….
 
ನನ್ನ ಮನೆಯ ನಾನುಳಿಸಿಕೊಳ್ಳಬಲ್ಲೆ
ಎಲ್ಲಾ ಕಷ್ಟ ಜಯಿಸಿ…
ಆಗಲೆ ನನ್ನ ಹೆಸರು ತುಳಸಿ..
ನೀ ಬರಿ ಮೋಸಗಾತಿ ತುಳಸಿ…
 
ಯಮನ ಎದುರಿಸಿ ಪತಿಯ ಪ್ರಾಣವನು
ಮರಳಿ ಪಡೆಯಲಿಲ್ಲವೇ ಸಾವಿತ್ರಿ
ಸಾವು ಜಯಿಸಲಿಲ್ಲವೇ…
ರಾಮಚಂದ್ರನ ಮಡದಿಯಾದರೂ
ಕಷ್ಟಕೋಟಲೆ ನೂರು ಬಂದರೂ
ಸೀತೆ ಜಯಿಸಲಿಲ್ಲವೇ…
ಪಂಚ ಪಾಂಡವರ ಪರಮ ಸಾಧ್ವಿಯು
ಹೆಣ್ಣು ಅಲ್ಲವೇನೆ…
ದ್ರೌಪದಿ ಧೈರ್ಯಗೆಟ್ಟಳೇನೆ…
ಜೂಜಿನಾಟದಲಿ ರಾಜ್ಯ ಬಿಟ್ಟರೂ
ತುಂಬು ಸಭೆಯಲಿ ಮಾನ ಕಳೆದರೂ
ಛಲವ ಮರೆತಳೇನೆ…
ನನ್ನ ಗಂಡನ ಒಲಿಸಿಕೊಳ್ಳಲೆನಗೆ…
ಸಾಧ್ಯವಿಲ್ಲವೇನೆ…
ನನ್ನ ಮನೆಯನು ಉಳಿಸಿಕೊಳ್ಳಲೆನಗೆ…
ಶಕ್ತಿಯಿಲ್ಲವೇನೆ…
ಈ ದಿನ ಜೂಜಿನ ಮೋಜಿನ ಬಂಧನ
ಬಡಿದು ಬಗೆದು ಸಿಗಿದು ಒಗಿದು ಬರುವನು
ಬಡಿದು ಬಗೆದು ಸಿಗಿದು ಒಗೆದು ಬರುವನು

Pancha Bhoothagalu song lyrics from Kannada Movie Henne Ninagenu Bandhana starring Charanraj, Thulasi, Mukyamanthri Chandru, Lyrics penned by Hamsalekha Sung by S Janaki, Music Composed by Hamsalekha, film is Directed by Ravindranath and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ