ಕನ್ನಡ ನಾಡಿನ ಸುಂದರ ಹಸಿರನು
ಎಂದಿಗು ಬೆಳೆಸುವ ನಾವು
ಶ್ರೀಗಂಧದ ನಾಡಿನ ಹೆಮ್ಮೆಯ ಹೆಸರನು
ಎಂದಿಗು ಉಳಿಸುವ ನಾವು
ಗಿಡಗಳ ಬೆಳೆದರೆ ಪರಿಸರ ಉಳಿದರೆ
ನಾಡಲ್ಲೊಂದು ನಲಿವು
(ಗಿಡವೇ ದೇವರ ಗುಡಿಯು
ಗಿಡವೇ ದೇವರ ನಿಧಿಯು
ಗಿಡವೇ ನಾಡಿನ ಸಂಪತ್ತು
ಗಿಡವನು ಕಡಿದರೆ ಆಪತ್ತು)
||ಕನ್ನಡ ನಾಡಿನ ಸುಂದರ ಹಸಿರನು
ಎಂದಿಗು ಬೆಳೆಸುವ ನಾವು
ಶ್ರೀಗಂಧದ ನಾಡಿನ ಹೆಮ್ಮೆಯ ಹೆಸರನು
ಎಂದಿಗು ಉಳಿಸುವ ನಾವು||
ಶಾಂತಲಕ್ಷ್ಮಿಯ ಗಿಡವನು ನೆಟ್ಟರೆ
ಮನೆಯಲಿ ಶಾಂತಿಯು ನೆಲೆಸುವುದು
ಕಲ್ಯಾಣಲಕ್ಷ್ಮಿಯ ಗಿಡ ಎರಡಿದ್ದರೆ
ಮಂಗಳಕಾರ್ಯವು ನೆಡೆಯುವುದು
ಧಾನ್ಯಲಕ್ಷ್ಮಿಯ ಗಿಡಗಳ ಬೆಳೆದರೆ
ಅನ್ನಕ್ಕೆ ಕೊರತೆಯು ಇಲ್ಲ
ಜ್ಞಾನಲಕ್ಷ್ಮಿಗೆ ನೀರನು ಹಾಕದೆ
ವಿದ್ಯೆಯು ದಕ್ಕುವುದಿಲ್ಲ
ಜಲಲಕ್ಷ್ಮಿಯ ಪೂಜೆಯ
ಮಾಡಲು ಒಲಿವಳು ಕಾವೇರಿ
ಧನಲಕ್ಷ್ಮಿಯ ಗಿಡವನು ನೆಟ್ಟರೆ
ಕೊಡುವಳು ಎಲ್ಲ ಸಿರಿ
(ಕಾಡಿದ್ದಾಗ ಮಳೆ ಇತ್ತು
ಹೊಲದಲ್ಲಿ ಹೊನ್ನಿನ ಬೆಳೆ ಇತ್ತು
ನದಿಗಳು ತುಂಬಿ ಹರಿದಿತ್ತು
ಕಣಜವು ತುಂಬಿ ತುಳುಕಿತ್ತು)
||ಕನ್ನಡ ನಾಡಿನ ಸುಂದರ ಹಸಿರನು
ಎಂದಿಗು ಬೆಳೆಸುವ ನಾವು
ಶ್ರೀಗಂಧದ ನಾಡಿನ ಹೆಮ್ಮೆಯ ಹೆಸರನು
ಎಂದಿಗು ಉಳಿಸುವ ನಾವು||
ಗಾಂಧಿತಾತನ ಗಿಡಗಳ ನೆಟ್ಟರೆ
ದೇಶಪ್ರೇಮವು ಹೆಚ್ಚುವುದು
ಕುವೆಂಪು ಕಾರಂತರ ಗಿಡ ಹಚ್ಚಿರಿ
ಕನ್ನಡ ಕೆಚ್ಚದು ಉಕ್ಕುವುದು
ರಾಜ್ ಕುಮಾರರ ವರನಟ ರಾಜ್ ಕುಮಾರರ
ಗಿಡವನ್ನು ನೆಟ್ಟರೆ ಎಂದಿಗು ನಂಬರ್ ಒಂದೇ
ಶ್ರೀದೇವಿಯ ಈ ಗಿಡವನ್ನು ಕೊಳ್ಳಿರಿ
ಸುಂದರಿ ಬರುವಳು ಹಿಂದೆ
ವಿಶ್ವೇಶ್ವರಯ್ಯ ಗಿಡವನ್ನು ನೆಟ್ಟರೆ
ಶತಾಯುಷಿ ನೀ ಆಗುವಿರಿ
ಅವರ ಹಾಗೆಯೇ ಸಾಧನೆ ಮಾಡುತ
ಶಾಶ್ವತ ಹೆಸರನು ಪಡೆಯುವಿರಿ
(ಹಚ್ಚ ಹಸಿರಿನ ಮರವು
ಹಕ್ಕಿಯ ಇಂಚರ ಸ್ವರವು
ಬೇಡಿಕೊಂಡಿವೆ ಹಾಡಿ
ಕಾಡನು ಕಡಿಯಲೆಬೇಡಿ)
||ಕನ್ನಡ ನಾಡಿನ ಸುಂದರ ಹಸಿರನು
ಎಂದಿಗು ಬೆಳೆಸುವ ನಾವು
ಶ್ರೀಗಂಧದ ನಾಡಿನ ಹೆಮ್ಮೆಯ ಹೆಸರನು
ಎಂದಿಗು ಉಳಿಸುವ ನಾವು
ಗಿಡಗಳ ಬೆಳೆದರೆ ಪರಿಸರ ಉಳಿದರೆ
ನಾಡಲ್ಲೊಂದು ನಲಿವು||
(ಗಿಡವೇ ದೇವರ ಗುಡಿಯು
ಗಿಡವೇ ದೇವರ ನಿಧಿಯು
ಗಿಡವೇ ನಾಡಿನ ಸಂಪತ್ತು
ಗಿಡವನು ಕಡಿದರೆ ಆಪತ್ತು)