Taju Mahalige Belliya Banna Lyrics

in Gokula Krishna

Video:

LYRIC

ತಾಜುಮಹಲಿಗೆ ಬೆಳ್ಳಿಯ ಬಣ್ಣ
ನೀನೇನ ನೀಡಿದ್ದು ಓ ನನ್ನ ಚೆಲುವೆ
ತಾವರೆ ಹೂವಿಗೆ ಸೌರಭವನ್ನ
ನೀನೇನ ತುಂಬಿದ್ದು ಓ ನನ್ನ ಚೆಲುವೆ
ತಾಜುಮಹಲ್‌ ಮನ ತಾಜುಮಹಲ್
ನನ್ನ ಎದೆಯಾಳದಿ ಇನ್ನು ನಿಂದೆ ಗಝಲ್‌
ನಾನೆ ಮೊಹಲ್ ಇದು ನಮ್ಮ ಮಹಲ್‌
ಇಲ್ಲಿ ಪ್ರೀತಿ ಇದೆ ಇನ್ನು ಯಾಕೆ ದಿಗಿಲ್‌
ನಾ ಉಸಿರಾಡುವೆ ನಿನ್ನ ಒಲವಿಂದಲೇ
 
ಹೇಗೆ ಬಂದೆ ಏಕೆ ಬಂದೆ
ನೀ ಹೇಳದೇನೆ ನೀ ಕೇಳದೇನೆ ನನ್ನೊಳಗೆ
ಮೌನಿಯಾಗಿ ಧ್ಯಾನಿಯಾಗಿ
ಕೈಗೊಂಬೆಯಾದೆ ನಾನು ನಿನ್ನ ಕೈಯೊಳಗೆ
ಹೃದಯವ  ತೆರೆಯುವ ಕಲೆಯನು ಕಲಿಸಿದ ಎಜಾಣೆ
ಕವಿತೆಯ ಬರೆಯುವ ಹೊಸ ಹಂಬಲ ಏತಕೊ ಕಾಣೆ
ಹೊಸ ಚಿತ್ತಾರ ರಂಗವಲ್ಲಿ ಮನಸ್ಸೆಂಬ ಬಾಗಿಲಲ್ಲಿ
ನೀನೇನೆ ಬಿಡಿಸಿರುವೆ
 
||ತಾಜುಮಹಲಿಗೆ ಬೆಳ್ಳಿಯ ಬಣ್ಣ
ನೀನೇನ ನೀಡಿದ್ದು ಓ ನನ್ನ ಚೆಲುವೆ
ತಾವರೆ ಹೂವಿಗೆ ಸೌರಭವನ್ನ
ನೀನೇನ ತುಂಬಿದ್ದು ಓ ನನ್ನ ಚೆಲುವೆ||
 
ಬೇರೆ ಎಲ್ಲೂ ಕೇಳೆ ಇಲ್ಲ
ನೀನಾಡುವಂತ ಜೇನ ನುಡಿಯನು
ನಾನು ಎಲ್ಲೂ ನೋಡೆ ಇಲ್ಲ
ಹೂದೋಟವನ್ನೆ ಮೀರುವಂತ ಸೊಬಗನು
ಮಳೆಹನಿ ಬೆಸೆಯುತ ಹನಿ ಸರವನು ತೊಡಿಸುವ ಆಸೆ
ಅಲೆಗಳ ನೇಯುತ ಹೊಸ ಸೀರೆಯನು ಉಡಿಸುವ ಆಸೆ
ಅರೆ ನಿನ್ನಾಣೆ ನನ್ನ ಪ್ರಾಣ ನಿಂಗೇನೆ ಕೇಳು ಚಿನ್ನ
ಈ ಉಸಿರು ಇರೊವರೆಗೂ
 
|| ತಾಜುಮಹಲಿಗೆ ಬೆಳ್ಳಿಯ ಬಣ್ಣ
ನೀನೇನ ನೀಡಿದ್ದು ಓ ನನ್ನ ಚೆಲುವೆ
ತಾವರೆ ಹೂವಿಗೆ ಸೌರಭವನ್ನ
ನೀನೇನ ತುಂಬಿದ್ದು ಓ ನನ್ನ ಚೆಲುವೆ
ತಾಜುಮಹಲ್‌ ಮನ ತಾಜುಮಹಲ್
ನನ್ನ ಎದೆಯಾಳದಿ ಇನ್ನು ನಿಂದೆ ಗಝಲ್‌
ನಾನೆ ಮೊಹಲ್ ಇದು ನಮ್ಮ ಮಹಲ್‌
ಇಲ್ಲಿ ಪ್ರೀತಿ ಇದೆ ಇನ್ನು ಯಾಕೆ ದಿಗಿಲ್‌
ನಾ ಉಸಿರಾಡುವೆ ನಿನ್ನ ಒಲವಿಂದಲೇ||

Taju Mahalige Belliya Banna song lyrics from Kannada Movie Gokula Krishna starring Prajwal Devaraj, Ananya, Srinath, Lyrics penned by V Nagendra Prasad Sung by Karthik, Chithra, Music Composed by S A Rajkumar, film is Directed by Jaya Kannan and film is released on 2012