Video:
VIDEO
ಸಂಗೀತ ವೀಡಿಯೊ:
VIDEO
LYRIC
-
ಒಂದು ಮಾತು ಹೇಳದೆ
ನನ್ನ ಪ್ರೀತಿ ಕಾಣದೆ
ಓ ಗೆಳತಿಯೆ ಹೋದೆಯಾ
ಮರಳಿಗೂಡಿಗೆ ಬಾರೆಯಾ
ಹಾ ಕೋಪವು ತೋರಿದ
ದಾರಿಯಾವುದೆಂದು ಹೇಳೆಯ
||ಒಂದು ಮಾತು ಹೇಳದೆ
ನನ್ನ ಪ್ರೀತಿ ಕಾಣದೆ
ಓ ಗೆಳತಿಯೆ ಹೋದೆಯ
ಮರಳಿಗೂಡಿಗೆ ಬಾರೆಯ||
ನನ್ನ ನಿನ್ನ ಪ್ರೀತಿಯ
ಕಣ್ಣಮುಚ್ಚಾಲೆಯ
ಆಟದೊಳಗೆ ಓಡಿ ನೀ
ಎಲ್ಲಿ ಅವಿತುಕೊಂಡೆಯೆ
ನನ್ನ ಅಳೆದು ನೋಡಲು
ನೂರು ದಾರಿ ಇಲ್ಲವೆ
ನಿನ್ನ ಹುಡುಕೊ ದಾರಿಯ
ಮುಚ್ಚಬಾರದಲ್ಲವೆ
ನಾನೋ ನೀನೋ ಸೋಲದೆ
ಚಿಂತೆ ಬೂದಿಯಾಗದು
ನಾನೋ ನೀನೋ ಸೋಲದೆ
ಚಿಂತೆ ಬೂದಿಯಾಗದು
ಪ್ರೀತಿ ಹಣ್ಣು ಮಾಗದು
ಆ… ಚಿಂತೆಯ ಬೂದಿಲಿ
ಅವಿತುಕೊಂಡ ಕೆಂಡ ಯಾವುದು
||ಒಂದು ಮಾತು ಹೇಳದೆ
ನನ್ನ ಪ್ರೀತಿ ಕಾಣದೆ
ಓ ಗೆಳತಿಯೆ ಹೋದೆಯ
ಮರಳಿಗೂಡಿಗೆ ಬಾರೆಯ||
ಅಮ್ಮನಂತೆ ಆಲಿಸಿ
ಕರುವಿನಂತೆ ಸಾಕಿದೆ
ಇರುವನೆಂದು ನಂಬಿಸಿ
ಎತ್ತ ಹೋಗಿ ಸೇರಿದೆ
ಚಂದ್ರನನ್ನು ತೋರಿಸಿ
ಬೇಕ ಎಂದು ಕೇಳಿದೆ
ಯಾರು ತರದ ಚಂದ್ರನ
ತರಲು ಏಕೆ ಓಡಿದೆ
ಹೇಗೆ ನಾನು ಬಾಳಲಿ
ದೀಪವಿರದ ಮಬ್ಬಲಿ
ಹೇಗೆ ನಾನು ಬಾಳಲಿ
ದೀಪವಿರದ ಮಬ್ಬಲಿ
ತಾಯಿ ಇರದ ತಬ್ಬಲಿ
ನೀ..ಹೋಗುವ ದಾರಿಲಿ
ಒಮ್ಮೆ ನನ್ನ ನೆನೆಯಲಿಲ್ಲವೆ
ಚಂದ್ರನನ್ನು ತಾರಲು
ನನ್ನ ಗೆಳತಿ ಹೋದಳು
ಆ ತಾರೆಯೆ ಆದಳು
ತಾಯಿ ಮಗುವನೆ ಮರೆತಳು
Please log in to see the full lyrics of this song.
-
ಒಂದು ಮಾತು ಹೇಳದೆ
ನನ್ನ ಪ್ರೀತಿ ಕಾಣದೆ
ಓ ಗೆಳತಿಯೆ ಹೋದೆಯಾ
ಮರಳಿಗೂಡಿಗೆ ಬಾರೆಯಾ
ಹಾ ಕೋಪವು ತೋರಿದ
ದಾರಿಯಾವುದೆಂದು ಹೇಳೆಯ
||ಒಂದು ಮಾತು ಹೇಳದೆ
ನನ್ನ ಪ್ರೀತಿ ಕಾಣದೆ
ಓ ಗೆಳತಿಯೆ ಹೋದೆಯ
ಮರಳಿಗೂಡಿಗೆ ಬಾರೆಯ||
ನನ್ನ ನಿನ್ನ ಪ್ರೀತಿಯ
ಕಣ್ಣಮುಚ್ಚಾಲೆಯ
ಆಟದೊಳಗೆ ಓಡಿ ನೀ
ಎಲ್ಲಿ ಅವಿತುಕೊಂಡೆಯೆ
ನನ್ನ ಅಳೆದು ನೋಡಲು
ನೂರು ದಾರಿ ಇಲ್ಲವೆ
ನಿನ್ನ ಹುಡುಕೊ ದಾರಿಯ
ಮುಚ್ಚಬಾರದಲ್ಲವೆ
ನಾನೋ ನೀನೋ ಸೋಲದೆ
ಚಿಂತೆ ಬೂದಿಯಾಗದು
ನಾನೋ ನೀನೋ ಸೋಲದೆ
ಚಿಂತೆ ಬೂದಿಯಾಗದು
ಪ್ರೀತಿ ಹಣ್ಣು ಮಾಗದು
ಆ… ಚಿಂತೆಯ ಬೂದಿಲಿ
ಅವಿತುಕೊಂಡ ಕೆಂಡ ಯಾವುದು
||ಒಂದು ಮಾತು ಹೇಳದೆ
ನನ್ನ ಪ್ರೀತಿ ಕಾಣದೆ
ಓ ಗೆಳತಿಯೆ ಹೋದೆಯ
ಮರಳಿಗೂಡಿಗೆ ಬಾರೆಯ||
ಅಮ್ಮನಂತೆ ಆಲಿಸಿ
ಕರುವಿನಂತೆ ಸಾಕಿದೆ
ಇರುವನೆಂದು ನಂಬಿಸಿ
ಎತ್ತ ಹೋಗಿ ಸೇರಿದೆ
ಚಂದ್ರನನ್ನು ತೋರಿಸಿ
ಬೇಕ ಎಂದು ಕೇಳಿದೆ
ಯಾರು ತರದ ಚಂದ್ರನ
ತರಲು ಏಕೆ ಓಡಿದೆ
ಹೇಗೆ ನಾನು ಬಾಳಲಿ
ದೀಪವಿರದ ಮಬ್ಬಲಿ
ಹೇಗೆ ನಾನು ಬಾಳಲಿ
ದೀಪವಿರದ ಮಬ್ಬಲಿ
ತಾಯಿ ಇರದ ತಬ್ಬಲಿ
ನೀ..ಹೋಗುವ ದಾರಿಲಿ
ಒಮ್ಮೆ ನನ್ನ ನೆನೆಯಲಿಲ್ಲವೆ
ಚಂದ್ರನನ್ನು ತಾರಲು
ನನ್ನ ಗೆಳತಿ ಹೋದಳು
ಆ ತಾರೆಯೆ ಆದಳು
ತಾಯಿ ಮಗುವನೆ ಮರೆತಳು
Ondu Maathu song lyrics from Kannada Movie Gatti Mela starring S Mahendar, Shruthi, Abhishek, Lyrics penned by Hamsalekha Sung by Ramesh Chandra, Music Composed by Hamsalekha, film is Directed by S Mahendar and film is released on 2001