ಪಾರ್ವತಿ ದೇವಿಯಾ
ಮೈ ಬೆವರಿನಿಂದ
ಹುಟ್ಟಿ ಬಂದಾ
ಒಬ್ಬ ಪುಟ್ಟ ಕಂದಾ..
ತಾಯಿಯ ಮಾತಿನಂತೆ
ತಾನು ಬಾಗಿಲ ಕಾಯುತ್ತ ನಿಂತಾ
ಕೈಲಾಸ ಬಾಗಿಲ ಕಾಯುತ್ತ ನಿಂತಾ
ಬಂದನಲ್ಲಿ ಆಗ ಪರಮೇಶ್ವರಾ
ಕೈಲಾಸದೊಡೆಯಾ ಶಿವಶಂಕರ
ದಿಟ್ಟತನದಿಂದ ಪುಟ್ಟ ಬಾಲಕನು
ತಡೆದು ನಿಲ್ಲಿಸಿದಾ ಪರಮ ಶಿವನನ್ನು
ಮೂಲೋಕದೊಡೆಯಾ
ಪರಶಿವನು ನಾನು
ನನ್ನನ್ನು ತಡೆಯಲು
ಯಾರೂ ನೀನು….
ಯಾರಾದರೇನು
ಬಿಡಲಾರೆ ನಾನು
ತಾಯಿಯ ಅಪ್ಪಣೆ ಇದು ಎಂದನು
ಕೋಪಗೊಂಡನು ಆ ಶಿವನು
ಪ್ರಚಂಡ ತಾಂಡವ ಭೈರವನು
ಶಂಕರನು ತನ್ನ ತ್ರಿಶೂಲದಿಂದಾ
ಬಾಲಕನ ತಲೆಯನ್ನು ಕತ್ತರಿಸಿದಾ...
ಸ್ನಾನವ ಮುಗಿಸಿ ಬಂದಳು ಆಗ
ಮಂಗಳಾಂಗಿ ಶ್ರೀ ಗೌರಿ
ಅಯ್ಯೋ ಶಿವ ಶಿವ ಶಂಕರ
ಏಕೆ ಕೊಂದಿರಿ ಎನ್ನ ಕಂದನಾ
ಎಂದು ಕಂಬನಿ ಹರಿಸಿದಳು
ಬದುಕಿಸಿ ಎಂದು ಬೇಡಿದಳು
ಉತ್ತರಕೆ ತಲೆ ಹಾಕಿ ಮಲಗಿದಂಥ
ವ್ಯಕ್ತಿಯ ತಲೆಯನ್ನು ಕತ್ತರಿಸಿ
ತಾ ಎಂದ ಶಂಕರ…
ಶಂಕರನ ಕಿಂಕರನು
ಆನೆಯ ತಲೆಯೊಂದು
ಆಗಲೆ ಕತ್ತರಿಸಿ ತಂದಾ
ಸತ್ತ ಬಾಲಕನು ಮತ್ತೆ ಬದುಕಿದನು
ಈಶನ ಕರುಣೆಯಿಂದಾ..
ಈಶನಾ ಕರುಣೆಯಿಂದಾ…..
ಅಮ್ಮಾ ಎನಲು ಆ ಕಂದಾ
ಪಾರ್ವತಿಗಾಯಿತು ಆನಂದ..
ಗಜವದನ ತಾನಾದ ಲಂಬೋದರಾ
ಭಕ್ತ ಭಾಂದವ ದೇವ ವಿಘ್ನೇಶ್ವರಾ
ಪಾರ್ವತಿ ದೇವಿಯಾ
ಮೈ ಬೆವರಿನಿಂದ
ಹುಟ್ಟಿ ಬಂದಾ
ಒಬ್ಬ ಪುಟ್ಟ ಕಂದಾ..
ತಾಯಿಯ ಮಾತಿನಂತೆ
ತಾನು ಬಾಗಿಲ ಕಾಯುತ್ತ ನಿಂತಾ
ಕೈಲಾಸ ಬಾಗಿಲ ಕಾಯುತ್ತ ನಿಂತಾ
ಬಂದನಲ್ಲಿ ಆಗ ಪರಮೇಶ್ವರಾ
ಕೈಲಾಸದೊಡೆಯಾ ಶಿವಶಂಕರ
ದಿಟ್ಟತನದಿಂದ ಪುಟ್ಟ ಬಾಲಕನು
ತಡೆದು ನಿಲ್ಲಿಸಿದಾ ಪರಮ ಶಿವನನ್ನು
ಮೂಲೋಕದೊಡೆಯಾ
ಪರಶಿವನು ನಾನು
ನನ್ನನ್ನು ತಡೆಯಲು
ಯಾರೂ ನೀನು….
ಯಾರಾದರೇನು
ಬಿಡಲಾರೆ ನಾನು
ತಾಯಿಯ ಅಪ್ಪಣೆ ಇದು ಎಂದನು
ಕೋಪಗೊಂಡನು ಆ ಶಿವನು
ಪ್ರಚಂಡ ತಾಂಡವ ಭೈರವನು
ಶಂಕರನು ತನ್ನ ತ್ರಿಶೂಲದಿಂದಾ
ಬಾಲಕನ ತಲೆಯನ್ನು ಕತ್ತರಿಸಿದಾ...
ಸ್ನಾನವ ಮುಗಿಸಿ ಬಂದಳು ಆಗ
ಮಂಗಳಾಂಗಿ ಶ್ರೀ ಗೌರಿ
ಅಯ್ಯೋ ಶಿವ ಶಿವ ಶಂಕರ
ಏಕೆ ಕೊಂದಿರಿ ಎನ್ನ ಕಂದನಾ
ಎಂದು ಕಂಬನಿ ಹರಿಸಿದಳು
ಬದುಕಿಸಿ ಎಂದು ಬೇಡಿದಳು
ಉತ್ತರಕೆ ತಲೆ ಹಾಕಿ ಮಲಗಿದಂಥ
ವ್ಯಕ್ತಿಯ ತಲೆಯನ್ನು ಕತ್ತರಿಸಿ
ತಾ ಎಂದ ಶಂಕರ…
ಶಂಕರನ ಕಿಂಕರನು
ಆನೆಯ ತಲೆಯೊಂದು
ಆಗಲೆ ಕತ್ತರಿಸಿ ತಂದಾ
ಸತ್ತ ಬಾಲಕನು ಮತ್ತೆ ಬದುಕಿದನು
ಈಶನ ಕರುಣೆಯಿಂದಾ..
ಈಶನಾ ಕರುಣೆಯಿಂದಾ…..
ಅಮ್ಮಾ ಎನಲು ಆ ಕಂದಾ
ಪಾರ್ವತಿಗಾಯಿತು ಆನಂದ..
ಗಜವದನ ತಾನಾದ ಲಂಬೋದರಾ
ಭಕ್ತ ಭಾಂದವ ದೇವ ವಿಘ್ನೇಶ್ವರಾ
Paarvathi Deviya Ma song lyrics from Kannada Movie Ganesha Mahime starring Ashok, Aarathi, Sundar Krishna Urs, Lyrics penned by Bangi Ranga Sung by S P Balasubrahmanyam, Music Composed by M S Vishwanathan, film is Directed by Manimurugan and film is released on 1981