ಮುದ್ದಾಡೆಂದಿದೆ ಮಲ್ಲಿಗೆ ಹೂ..
ಮನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯಾ..ಮೊದಲು ಸಂಪಿಗೆಯ
ಸಂಪಿಗೆಯಾ..ಮೊದಲು ಮಲ್ಲಿಗೆಯ
ಮುದ್ದಾಡೆಂದಿದೆ ಮಲ್ಲಿಗೆ ಹೂ..
ಮನಸಿ ಎಂದಿದೆ ಸಂಪಿಗೆ ಹೂ
ಇಡಬೇಕೋ..ಮನಸು ಕೊಡಬೇಕೋ
ಕೊಡಬೇಕೋ..ಮನಸು ಇಡಬೇಕೋ
ಆ ಆ ಆ ...... ಆ ಆ ಆ ...... ಆ ಆ ಆ ......
ಆ ಆ ಆ ...... ಆ ಆ ಆ ...... ಆ ಆ ಆ ......
ಆ ಆ ಆ ...... ಆ ಆ ಆ ...... ಆ ಆ ಆ ......
ಮುಡಿಯಲಿ ಮಲ್ಲಿಗೆಯ ಮುಡಿದವಳ
ಮೊದಲು ಮುಡಿಯಬೇಕು
ಮಡದಿಗೆ ಪ್ರತಿದಿನವೂ ಮೊದಲಿರುಳಿರಬೇಕು
ಮನಸಿನ ಮಧುವಿನ ಮಹಲೊಳಗೆ
ಮದನ ಮಣಿಯಬೇಕು
ಸುರತಿಯ ಪರಮಾನ್ನ ಹಿತಮಿತವಿರಬೇಕು
ವಿರಹಬಾಧೆ ದಹಿಸುವಾಗ..ಬಾಲಬೋಧೆ ಏಕೆ
ಪ್ರಣಯ ನದಿಯೆ ತುಳುಕುವಾಗ..
ಮದನ ಮಳೆಯು ಬೇಕೆ
ಹಿಡುದುಕೊ..ಮೆಲ್ಲಗೆ
ತಡೆದುಕೊ..ಮಲ್ಲಿಗೆ
ಹರೆಯ..ನೆರೆಯ..ತಡೆಯೊ..ಇನಿಯ
|| ಮುದ್ದಾಡೆಂದಿದೆ ಮಲ್ಲಿಗೆ ಹೂ..
ಮನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯಾ..ಮೊದಲು ಸಂಪಿಗೆಯ
ಸಂಪಿಗೆಯಾ..ಮೊದಲು ಮಲ್ಲಿಗೆಯ
ಮುದ್ದಾಡೆಂದಿದೆ ಮಲ್ಲಿಗೆ ಹೂ..
ಮನಸಿ ಎಂದಿದೆ ಸಂಪಿಗೆ ಹೂ
ಇಡಬೇಕೋ..ಮನಸು ಕೊಡಬೇಕೋ
ಕೊಡಬೇಕೋ..ಮನಸು ಇಡಬೇಕೋ ||
ಆ ಆ ಆ ...... ಆ ಆ ಆ ...... ಆ ಆ ಆ ......
ಆ ಆ ಆ ...... ಆ ಆ ಆ ...... ಆ ಆ ಆ ......
ಆ ಆ ಆ ...... ಆ ಆ ಆ ...... ಆ ಆ ಆ ......
ಘಮ ಘಮ ಸಂಪಿಗೆಯ ಸುಮತಿಯನು
ಕೆಣಕಿ ಕಾಯಿಸದಿರು
ಕುಸುಮದ ಎದೆಯೊಳಗೆ
ಪ್ರಳಯವ ತಾರದಿರು
ಹಿಡಿಯಲಿ ಹಿಡಿಯುವ ನಡುವಿನಲಿ
ಬಳುಕಿ ಬೇಯಿಸದಿರು
ತುಂಬಿದ ನಿಶೆಯೊಳಗೆ
ಚಂದ್ರನ ಕೂಗದಿರು
ಎದೆಯ ಸೆರಗ ಮೋಡದಲ್ಲಿ..
ನೀನೆ ಚಂದ್ರನೀಗ
ಹೃದಯ ಮೇರು ಗಿರಿಗಳಲ್ಲಿ..
ಕರಗಬೇಕೆ ಈಗ
ಬಳಸಿಕೊ..ಕಂಪಿಗೆ
ಸಹಿಸಿಕೊ..ಸಂಪಿಗೆ
ಹರೆಯ..ಹೊರೆಯ..ಇಳಿಸೊ..ಇನಿಯ
|| ಮುದ್ದಾಡೆಂದಿದೆ ಮಲ್ಲಿಗೆ ಹೂ..
ಮನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯ..ಮೊದಲು ಸಂಪಿಗೆಯ
ಸಂಪಿಗೆಯ..ಮೊದಲು ಮಲ್ಲಿಗೆಯ
ಮುದ್ದಾಡೆಂದಿದೆ ಮಲ್ಲಿಗೆ ಹೂ..
ಮನಸಿ ಎಂದಿದೆ ಸಂಪಿಗೆ ಹೂ
ಇಡಬೇಕೋ..ಮನಸು ಕೊಡಬೇಕೋ
ಕೊಡಬೇಕೋ..ಮನಸು ಇಡಬೇಕೋ ||