ಬೆಳದಿಂಗಳಂಗಳದೆ ಕಾಲ ಗೆಜ್ಜೆಯ ಸದ್ದು...
ಕಾರಿರುಳ ಮುಸಕಲ್ಲಿ ಕ್ಷಯ ರೋಗದ ಕೆಮ್ಮು..
ಮೇಲುಸಿರಿನೊಂದಿಗೆ ತಾಳ ಹಾಕುವ ದಮ್ಮು
ಅರಳುವ ಮೊದಲೇ ಕಸಕಿದಾ ಹೂ ಗೊಂಚಲು ...
ಈ ಹೆಣ್ಣು ಯಾರೆಂದು ಬಲ್ಲಿರಾ ನೀವು
ನಿಮ್ಮಕ್ಕ ತಂಗಿಯರು ತಾಯಿ ದೇವರು ಇವರೇ
ಈ ಹೆಣ್ಣು ಯಾರೆಂದು ಬಲ್ಲಿರಾ ನೀವು
ನಿಮ್ಮಕ್ಕ ತಂಗಿಯರು ತಾಯಿ ದೇವರು ಇವರೇ
ಆಸೆ ತೀರದ ಅಪ್ಪ ಮದವೇರಿದ ಮಗನು
ಒಂದೇ ಹೆಣ್ಣಿನ ಸಂಗ ಮಾಡುತಿಹರಿಲ್ಲಿ
ಮಾಡುತಿಹರಿಲ್ಲಿ……
ತಾಯಿ ನಾಡಿನ ಮಾನ ಕಾಯ್ವರಾರೋ ಕಾಣೇ
ಯಾರಿಹರು ಎಲ್ಲಿಹರು ಕಾಯರೇ ಬಂದಿಲ್ಲಿ...
ಕಾಯರೇ ಬಂದಿಲ್ಲಿ…..
ಅತಿ ಘೋರ ಯಾತನೆಯ ಸಹಿಸುತಲಿ ಈ ಓಡಲು
ತಿಳಿಬಾಳ ಕನಸಿನಲಿ ತೇಲುತಿದೆ ಈ ಮಡಿಲು
ಕಾರಿರುಳ ಕಳೆದೆಂದು ಆಗುವುದೋ ಹಗಲೆಂದು
ಕಾಯುತಿದೆ... ಕಾಯುತಿದೆ
ಬೇಡುತಿದೆ ನೂರಾರು ಯುಗದಿಂದಲೂ
ನೂರಾರು ಯುಗದಿಂದಲೂ
ತಾಯಿ ನಾಡಿನ ಮಾನ ಕಾಯ್ವರಾರೋ ಕಾಣೆ
ಯಾರಿಹರು ಎಲ್ಲಿಹರು ಕಾಯರೇ ಬಂದಿಲ್ಲಿ..
ಕಾಯರೇ ಬಂದಿಲ್ಲಿ……
ಬೆಳದಿಂಗಳಂಗಳದೆ ಕಾಲ ಗೆಜ್ಜೆಯ ಸದ್ದು...
ಕಾರಿರುಳ ಮುಸಕಲ್ಲಿ ಕ್ಷಯ ರೋಗದ ಕೆಮ್ಮು..
ಮೇಲುಸಿರಿನೊಂದಿಗೆ ತಾಳ ಹಾಕುವ ದಮ್ಮು
ಅರಳುವ ಮೊದಲೇ ಕಸಕಿದಾ ಹೂ ಗೊಂಚಲು ...
ಈ ಹೆಣ್ಣು ಯಾರೆಂದು ಬಲ್ಲಿರಾ ನೀವು
ನಿಮ್ಮಕ್ಕ ತಂಗಿಯರು ತಾಯಿ ದೇವರು ಇವರೇ
ಈ ಹೆಣ್ಣು ಯಾರೆಂದು ಬಲ್ಲಿರಾ ನೀವು
ನಿಮ್ಮಕ್ಕ ತಂಗಿಯರು ತಾಯಿ ದೇವರು ಇವರೇ
ಆಸೆ ತೀರದ ಅಪ್ಪ ಮದವೇರಿದ ಮಗನು
ಒಂದೇ ಹೆಣ್ಣಿನ ಸಂಗ ಮಾಡುತಿಹರಿಲ್ಲಿ
ಮಾಡುತಿಹರಿಲ್ಲಿ……
ತಾಯಿ ನಾಡಿನ ಮಾನ ಕಾಯ್ವರಾರೋ ಕಾಣೇ
ಯಾರಿಹರು ಎಲ್ಲಿಹರು ಕಾಯರೇ ಬಂದಿಲ್ಲಿ...
ಕಾಯರೇ ಬಂದಿಲ್ಲಿ…..
ಅತಿ ಘೋರ ಯಾತನೆಯ ಸಹಿಸುತಲಿ ಈ ಓಡಲು
ತಿಳಿಬಾಳ ಕನಸಿನಲಿ ತೇಲುತಿದೆ ಈ ಮಡಿಲು
ಕಾರಿರುಳ ಕಳೆದೆಂದು ಆಗುವುದೋ ಹಗಲೆಂದು
ಕಾಯುತಿದೆ... ಕಾಯುತಿದೆ
ಬೇಡುತಿದೆ ನೂರಾರು ಯುಗದಿಂದಲೂ
ನೂರಾರು ಯುಗದಿಂದಲೂ
ತಾಯಿ ನಾಡಿನ ಮಾನ ಕಾಯ್ವರಾರೋ ಕಾಣೆ
ಯಾರಿಹರು ಎಲ್ಲಿಹರು ಕಾಯರೇ ಬಂದಿಲ್ಲಿ..
ಕಾಯರೇ ಬಂದಿಲ್ಲಿ……
E Deepa E Roopa song lyrics from Kannada Movie Choukada Deepa starring Rajendrakumar (Gangadhar), Anantharam Maccheri, Niranjan, Lyrics penned by G V Iyer Sung by P B Srinivas, Music Composed by Upendra Kumar, film is Directed by G V Iyer and film is released on 1969