ಚೆಲುವಮ್ಮ ಚೆಂದದಮ್ಮ
ನಿನ್ನ ಹೆಸರೇ ಅಂದವಾ
ಮನಸಮ್ಮ ಮಾಸದಮ್ಮ
ನಿನ್ನ ಹೆಸರೇ ಪ್ರೇಮವಾ
ಕೇಳೋ ಕಾತುರ ಹಾಡೋ ಆತುರ
ನಿನ್ನ ಪ್ರೇಮದೋಲೆ ಹೆಸರ ಮೇಘಮಾಲೆ..
|| ಚೆಲುವಮ್ಮ ಚೆಂದದಮ್ಮ
ನಿನ್ನ ಹೆಸರೇ ಅಂದವಾ
ಮನಸಮ್ಮ ಮಾಸದಮ್ಮ
ನಿನ್ನ ಹೆಸರೇ ಪ್ರೇಮವಾ
ಕೇಳೋ ಕಾತುರ ಹಾಡೋ ಆತುರ
ನಿನ್ನ ಪ್ರೇಮದೋಲೆ ಹೆಸರ ಮೇಘಮಾಲೆ....||
ಸೊಗಸೂ ಅನ್ನೋದೇ ಅಂದದ
ಪ್ರಣಯ ಸಿಂಧೂರವೋ
ಹೇಳಮ್ಮ ಸಿರಿ ಸಿಂಗಾರಿ ನೀ ಸಿಂಧೂರವೋ ..
ಹೃದಯ ಅನ್ನೋದೆ
ಪ್ರೀತಿಯ ಹೂವ ಶ್ರೀಗಂಧವೋ
ಹೇಳಮ್ಮ ಓ ಒಲವಮ್ಮ ನೀ ಶ್ರೀಗಂಧವೋ
ಯಾವ ರೂಪ ನಿನ್ನದು ಹೇಳು ನೀನೀಗ
ನಿನ್ನ ತವರುಎಲ್ಲಿದೆ ಹೇಳೇ ನೀ ಬೇಗ
ಹಸಿವು ನಿದಿರೆ ದೂರ ಮಾಡೋ
ಸವತಿ ಯಾರೇ ನೀ ಯಾರೇ..ಹೇ. . ಹೇಳು ಬಾರೇ ..
|| ಚೆಲುವಮ್ಮ ಚೆಂದದಮ್ಮ
ನಿನ್ನ ಹೆಸರೇ ಅಂದವಾ
ಮನಸಮ್ಮ ಮಾಸದಮ್ಮ
ನಿನ್ನ ಹೆಸರೇ ಪ್ರೇಮವಾ
ಕೇಳೋ ಕಾತುರ ಹಾಡೋ ಆತುರ
ನಿನ್ನ ಪ್ರೇಮದೋಲೆ ಹೆಸರ ಮೇಘಮಾಲೆ..||
ಲಾಲಾ ... ಲಾಲಾ ... ಲಾಲಾ ... ಲಾಲಾ ...
ಲಾಲಾ ... ಲಾಲಾ ... ಲಾಲಾ ... ಲಾಲಾ ...
ವಿರಹ ಅನ್ನೋದೇ ನಿನ್ನಯ
ಮಧುರ ಸಂಗೀತವೋ
ಹೇಳಮ್ಮ ಚೆಲು ಚೆಲುವಮ್ಮ ನೀ ಸಂಗೀತವೋ
ಹರೆಯ ಅನ್ನೋದೇ
ಪ್ರೇಮದಾ ಧರೆಗೇ ಹೂ ಚೈತ್ರವೋ
ಹೇಳಮ್ಮ ಓ ಮನಸಮ್ಮ ನೀ ಹೂ ಚೈತ್ರವೋ
ಕಾಳಿದಾಸ ಹಾಡಿದಾ ಪ್ರೀತಿ ನೀನೇನಾ
ಕುಂಚದಿಂದ ಮಿಂಚಿದ ಅಂದ ನೀನೇನಾ
ಚೆಂದಗಾತಿ ಪ್ರೇಮದೊಡತಿ
ಹೇಳೇ ಯಾರೇ... ನೀ ಯಾರೇ...ಬಾರೆ ನೀರೆ. .
|| ಚೆಲುವಮ್ಮ ಚೆಂದದಮ್ಮ
ನಿನ್ನ ಹೆಸರೇ ಅಂದವಾ
ಮನಸಮ್ಮ ಮಾಸದಮ್ಮ
ನಿನ್ನ ಹೆಸರೇ ಪ್ರೇಮವಾ
ಕೇಳೋ ಕಾತುರ ಹಾಡೋ ಆತುರ
ನಿನ್ನ ಪ್ರೇಮದೋಲೆ ಹೆಸರ ಮೇಘಮಾಲೆ....||