ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಮನಸಾರೆ ಕೊಂಡಾಡು ಈ ತಾಯ ಹಿರಿಮೆ
ಮನಸಾರೆ ಕೊಂಡಾಡು ಈ ತಾಯ ಹಿರಿಮೆ
ಶರಣೆಂದು ನೀ ಹಾಡು ಚಾಮುಂಡಿ ಮಹಿಮೆ
ಶರಣೆಂದು ನೀ ಹಾಡು ಚಾಮುಂಡಿ ಮಹಿಮೆ
|| ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕಣ್ಣಾರೆ ನೀ ನೋಡು ಕನ್ನಡ ಸೀಮೆ…..||
ಕವಿ ರನ್ನ ಪಂಪರ ಕಾವ್ಯದ ವಾಹಿನಿ
ಪುರಂದರ ಕನಕರ ಪದಗಳ ಈ ವಾಣಿ
ಶೃಂಗೇರಿ ಶಾರದೆ ವರದಿಂದ ಬಂದ
ಈ ನಾಡ ಸಂಗೀತ ಸಾಹಿತ್ಯ ಚೆಂದ
ಕಾಲದ ಕಡಲಲಿ ಕಾಣದೆ ಹೋಯಿತೆ
ವೈಭವ ಪೂರಿತ ಹಂಪೆಯ ಚರಿತೆ
ರತ್ನದ ರಾಶಿಯ ಹಿಂದಿನ ಆ ಕಥೆ
ಎಂದಿಗೂ ಸಾರಿದೆ ವೀರರ ಅಮರತೆ
|| ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕಣ್ಣಾರೆ ನೀ ನೋಡು ಕನ್ನಡ ಸೀಮೆ…..||
ಶಿಲ್ಪಿ ಜಕ್ಕಣನ ಹಳೆಬೀಡು ಬೇಲೂರು
ಜೀವಂತ ಕಲೆಗಿದು ನೀಡಿತು ಉಸಿರು
ಇಂದಿನ ಶಿಲ್ಪದ ವಿಶ್ವೇಶ್ವರಯ್ಯ
ಕಟ್ಟಿದ ಸುಂದರ ಕನ್ನಂಬಾಡಿಯ
ಶ್ರೀ ರಂಗನಾಥನ ಪಾದವ ತೊಳೆಯಲು
ಕಾವೇರಿ ದೇವಿಯೇ ಬಂದಿಹಳಿಲ್ಲಿ
ಹೈದರ ಟಿಪ್ಪು ಆಳಿದರಿಲ್ಲಿ
ಶ್ರೀರಂಗಪಟ್ಟಣಕೆ ಸಾಟಿ ಎಲ್ಲಿ
|| ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕಣ್ಣಾರೆ ನೀ ನೋಡು ಕನ್ನಡ ಸೀಮೆ…..||
ಮೈಸೂರ ಅರಸರ ರತ್ನ ಸಿಂಹಾಸನ
ರಾಜ ವೈಭವದ ಅಮರ ನಿದರ್ಶನ
ಬೆಳಗೋಳದಲ್ಲಿನ ಗೊಮ್ಮಟ ದರ್ಶನ
ಗುಹೆಗಳ ಗುಡಿಯಾ ಬಾದಾಮಿ ಚೆನ್ನ
ತುಂಗಭದ್ರೆ ಕಪಿಲೆ ಕಾವೇರಿ
ನಾಡನು ಪಾವನಗೊಳಿಸಿಹರು
ಜೋಗದಲ್ಲಿನ ಜಲಪಾತವಿದುವೇ
ನಾಡಿಗೆ ನೀಡಿದೆ ಬೆಳಕನ್ನು
|| ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕಣ್ಣಾರೆ ನೀ ನೋಡು ಕನ್ನಡ ಸೀಮೆ…..||
ಚಂದನದಿಂದ ಗಂಧವ ತಂದಿದೆ
ಗಿರಿ ಕಾನನದ ಮಲೆನಾಡು
ಅಂಚಲಿ ಮೆರೆದು ಶೋಭೆಯ ಚೆಲ್ಲಿದೆ
ಧೀರ ಶರಧಿಯಾ ತೀರವಿದು
ಮಣ್ಣಿನ ಕಣ ಕಣ ಹೊಂದಿದೆ ಚಿನ್ನ
ಹೊನ್ನಿನ ನೆಲೆಯೇ ಕೋಲಾರ
ಕೈಗಾರಿಕೆಗೆ ಭದ್ರಾವತಿಯೇ
ಕಬ್ಬಿಣ ಕಾಗದ ಭಂಡಾರ
|| ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕಣ್ಣಾರೆ ನೀ ನೋಡು ಕನ್ನಡ ಸೀಮೆ…..||
ಭಾಗ್ಯದ ಬಾಗಿಲು ತೆರೆದಿದೆ ಇಲ್ಲಿ
ಮಂಗಳೂರಿನ ನವನಿಧಿ ಬಂದರು
ಘೋಷಿಸಿ ಹೇಳಿದೆ ಚರಿತೆಯ ಸಾರ
ಪಿಸುಮಾತಿನಲೇ ಗೋಳ ಗುಂಬಜ
ಸಿರಿಗನ್ನಡದ ಚರಿತೆಯ ನಾವು
ಸ್ವರ್ಣಾಕ್ಷರದಲ್ಲಿ ಬರೆಯೋಣ
ಭುವನೇಶ್ವರಿಯ ಹರಕೆಯ ಹೊತ್ತು
ರಚಿಸುವ ನವಯುಗ ನಿರ್ಮಾಣ
|| ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕಣ್ಣಾರೆ ನೀ ನೋಡು ಕನ್ನಡ ಸೀಮೆ…..||
ಬೆಂಗಳೂರು ನಗರವ ಕಟ್ಟಿದ ವೀರ
ಕೆಂಪೇಗೌಡರ ನೆನೆಯೋಣ
ಈ ಧೀರ ಪುರುಷನ ಹಾದಿಯ ಹಿಡಿದು
ಕನ್ನಡ ಬಾವುಟ ಮೆರೆಸೋಣ
ರಾಜತಂತ್ರದ ಮಹಿಮೆಯ ನಿಲಯ
ಅತಿ ಭವ್ಯತೆಯ ವಿಧಾನಸೌಧ
ಪೀಳಿಗೆ ಪೀಳಿಗೆ ಏಳಿಗೆ ಹೊಂದಲು
ಕಾರಣ ನಮ್ಮೀ ಆಶಾ ಸೌಧ
|| ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕಣ್ಣಾರೆ ನೀ ನೋಡು ಕನ್ನಡ ಸೀಮೆ…||
ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಮನಸಾರೆ ಕೊಂಡಾಡು ಈ ತಾಯ ಹಿರಿಮೆ
ಮನಸಾರೆ ಕೊಂಡಾಡು ಈ ತಾಯ ಹಿರಿಮೆ
ಶರಣೆಂದು ನೀ ಹಾಡು ಚಾಮುಂಡಿ ಮಹಿಮೆ
ಶರಣೆಂದು ನೀ ಹಾಡು ಚಾಮುಂಡಿ ಮಹಿಮೆ
|| ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕಣ್ಣಾರೆ ನೀ ನೋಡು ಕನ್ನಡ ಸೀಮೆ…..||
ಕವಿ ರನ್ನ ಪಂಪರ ಕಾವ್ಯದ ವಾಹಿನಿ
ಪುರಂದರ ಕನಕರ ಪದಗಳ ಈ ವಾಣಿ
ಶೃಂಗೇರಿ ಶಾರದೆ ವರದಿಂದ ಬಂದ
ಈ ನಾಡ ಸಂಗೀತ ಸಾಹಿತ್ಯ ಚೆಂದ
ಕಾಲದ ಕಡಲಲಿ ಕಾಣದೆ ಹೋಯಿತೆ
ವೈಭವ ಪೂರಿತ ಹಂಪೆಯ ಚರಿತೆ
ರತ್ನದ ರಾಶಿಯ ಹಿಂದಿನ ಆ ಕಥೆ
ಎಂದಿಗೂ ಸಾರಿದೆ ವೀರರ ಅಮರತೆ
|| ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕಣ್ಣಾರೆ ನೀ ನೋಡು ಕನ್ನಡ ಸೀಮೆ…..||
ಶಿಲ್ಪಿ ಜಕ್ಕಣನ ಹಳೆಬೀಡು ಬೇಲೂರು
ಜೀವಂತ ಕಲೆಗಿದು ನೀಡಿತು ಉಸಿರು
ಇಂದಿನ ಶಿಲ್ಪದ ವಿಶ್ವೇಶ್ವರಯ್ಯ
ಕಟ್ಟಿದ ಸುಂದರ ಕನ್ನಂಬಾಡಿಯ
ಶ್ರೀ ರಂಗನಾಥನ ಪಾದವ ತೊಳೆಯಲು
ಕಾವೇರಿ ದೇವಿಯೇ ಬಂದಿಹಳಿಲ್ಲಿ
ಹೈದರ ಟಿಪ್ಪು ಆಳಿದರಿಲ್ಲಿ
ಶ್ರೀರಂಗಪಟ್ಟಣಕೆ ಸಾಟಿ ಎಲ್ಲಿ
|| ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕಣ್ಣಾರೆ ನೀ ನೋಡು ಕನ್ನಡ ಸೀಮೆ…..||
ಮೈಸೂರ ಅರಸರ ರತ್ನ ಸಿಂಹಾಸನ
ರಾಜ ವೈಭವದ ಅಮರ ನಿದರ್ಶನ
ಬೆಳಗೋಳದಲ್ಲಿನ ಗೊಮ್ಮಟ ದರ್ಶನ
ಗುಹೆಗಳ ಗುಡಿಯಾ ಬಾದಾಮಿ ಚೆನ್ನ
ತುಂಗಭದ್ರೆ ಕಪಿಲೆ ಕಾವೇರಿ
ನಾಡನು ಪಾವನಗೊಳಿಸಿಹರು
ಜೋಗದಲ್ಲಿನ ಜಲಪಾತವಿದುವೇ
ನಾಡಿಗೆ ನೀಡಿದೆ ಬೆಳಕನ್ನು
|| ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕಣ್ಣಾರೆ ನೀ ನೋಡು ಕನ್ನಡ ಸೀಮೆ…..||
ಚಂದನದಿಂದ ಗಂಧವ ತಂದಿದೆ
ಗಿರಿ ಕಾನನದ ಮಲೆನಾಡು
ಅಂಚಲಿ ಮೆರೆದು ಶೋಭೆಯ ಚೆಲ್ಲಿದೆ
ಧೀರ ಶರಧಿಯಾ ತೀರವಿದು
ಮಣ್ಣಿನ ಕಣ ಕಣ ಹೊಂದಿದೆ ಚಿನ್ನ
ಹೊನ್ನಿನ ನೆಲೆಯೇ ಕೋಲಾರ
ಕೈಗಾರಿಕೆಗೆ ಭದ್ರಾವತಿಯೇ
ಕಬ್ಬಿಣ ಕಾಗದ ಭಂಡಾರ
|| ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕಣ್ಣಾರೆ ನೀ ನೋಡು ಕನ್ನಡ ಸೀಮೆ…..||
ಭಾಗ್ಯದ ಬಾಗಿಲು ತೆರೆದಿದೆ ಇಲ್ಲಿ
ಮಂಗಳೂರಿನ ನವನಿಧಿ ಬಂದರು
ಘೋಷಿಸಿ ಹೇಳಿದೆ ಚರಿತೆಯ ಸಾರ
ಪಿಸುಮಾತಿನಲೇ ಗೋಳ ಗುಂಬಜ
ಸಿರಿಗನ್ನಡದ ಚರಿತೆಯ ನಾವು
ಸ್ವರ್ಣಾಕ್ಷರದಲ್ಲಿ ಬರೆಯೋಣ
ಭುವನೇಶ್ವರಿಯ ಹರಕೆಯ ಹೊತ್ತು
ರಚಿಸುವ ನವಯುಗ ನಿರ್ಮಾಣ
|| ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕಣ್ಣಾರೆ ನೀ ನೋಡು ಕನ್ನಡ ಸೀಮೆ…..||
ಬೆಂಗಳೂರು ನಗರವ ಕಟ್ಟಿದ ವೀರ
ಕೆಂಪೇಗೌಡರ ನೆನೆಯೋಣ
ಈ ಧೀರ ಪುರುಷನ ಹಾದಿಯ ಹಿಡಿದು
ಕನ್ನಡ ಬಾವುಟ ಮೆರೆಸೋಣ
ರಾಜತಂತ್ರದ ಮಹಿಮೆಯ ನಿಲಯ
ಅತಿ ಭವ್ಯತೆಯ ವಿಧಾನಸೌಧ
ಪೀಳಿಗೆ ಪೀಳಿಗೆ ಏಳಿಗೆ ಹೊಂದಲು
ಕಾರಣ ನಮ್ಮೀ ಆಶಾ ಸೌಧ
|| ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕಣ್ಣಾರೆ ನೀ ನೋಡು ಕನ್ನಡ ಸೀಮೆ…||
Kannaare Nee Nodu Kannada Seeme song lyrics from Kannada Movie Chiranjeevi starring B Sarojadevi, Srinath, Manjula, Lyrics penned by Vijaya Narasimha Sung by P B Srinivas, L R Anjali, Music Composed by Vijaya Bhaskar, film is Directed by A Bheem Singh and film is released on 1976