ಪ್ರೇಮದ ಹೂಗಾರ ..ಪ್ರೇಮದ ಹೂಗಾರ
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ..
ಬೆಲ್ಲದ ಬಣಗಾರ ಈ ಹಾಡುಗಾರ
ಸಿಹಿ ನೀಡುತ್ತಾನೆ ಕಹಿ ಕೇಳುತ್ತಾನೆ
ಮಣ್ಣಿನ ಮಮಕಾರ ತಂಪಿರುವ,
ಮಾನದ ಮಣಿಹಾರ ಹೊಂದಿರುವ ಈ ಭಾವ ಜೀವ...
|| ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ..||
ಗಂಧದ ಕೊರಳಾಗಿ ಸ್ವಂತಕೆ ಬರಡಾಗಿ
ನೋವಿನಲೂ ತೇಯುವುದು ಈ ಒಡಲು
ಗಂಗೆಯು ತಾನಾಗಿ ನೀರಿಗೆ ಎರವಾಗಿ
ಸೇರುತಿದೆ ಕಂಬನಿಯ ಆ ಕಡಲು....
ಕರುಣೆಯ ಕುಂಬಾರ
ಕರುಣೆಯ ಕುಂಬಾರ ಈ ಹಾಡುಗಾರ
ಮಣ್ಣು ಬೇಡುತ್ತಾನೆ ಕೊಡ ನೀಡುತ್ತಾನೆ
ಮಮತೆಯ ಕಲೆಗಾರ ಈ ಹಾಡುಗಾರ
ಮನೆ ಮಾಡುತ್ತಾನೆ ಹೊರ ಹೋಗುತ್ತಾನೆ..
ಗೋವಿನ ಹಾಲಂಥ ಮನಸಿರುವ
ಕೂಸಿನ ಜೇನಂತ ಮಾತಿರುವ ಈ ಭಾವ ಜೀವಾ...
|| ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ..||
ನಿತ್ಯವೂ ತಾನುರಿದು ಲೋಕಕೆ ದಿನಗರೆದು
ಹೆಚ್ಚರಿಸೋ ಸೂರ್ಯನಿಗೆ ನಿದ್ದೆ ಇಲ್ಲ
ರಾತ್ರಿಗೆ ತಾನುಳಿದು ತಾಪಕೆ ತಂಪೆರೆದು
ಸಂಚರಿಸೋ ಚಂದ್ರನಿಗೆ ಸ್ವಂತವಿಲ್ಲ
ಊರಿನ ಗೆಣೆಕಾರ….
ಊರಿನ ಗೆಣೆಕಾರ ಈ ಹಾಡುಗಾರ
ಕಾಪಾಡುತ್ತಾನೆ ಕಡೆಯಾಗುತ್ತಾನೆ
ಸತ್ಯದ ಹರಿಕಾರ ಈ ಹಾಡುಗಾರ
ಹೋರಡುತ್ತಾನೆ ಒಂಟಿಯಾಗುತ್ತಾನೆ
ಮಣ್ಣಿನ ಮಮಕಾರ ಕಂಪಿರುವ
ಮಾನದ ಮಣಿ ಹಾರ ಹೊಂದಿರುವಾ
ಈ ಭಾವ ಜೀವ….
|| ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ ||
ಪ್ರೇಮದ ಹೂಗಾರ ..ಪ್ರೇಮದ ಹೂಗಾರ
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ..
ಬೆಲ್ಲದ ಬಣಗಾರ ಈ ಹಾಡುಗಾರ
ಸಿಹಿ ನೀಡುತ್ತಾನೆ ಕಹಿ ಕೇಳುತ್ತಾನೆ
ಮಣ್ಣಿನ ಮಮಕಾರ ತಂಪಿರುವ,
ಮಾನದ ಮಣಿಹಾರ ಹೊಂದಿರುವ ಈ ಭಾವ ಜೀವ...
|| ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ..||
ಗಂಧದ ಕೊರಳಾಗಿ ಸ್ವಂತಕೆ ಬರಡಾಗಿ
ನೋವಿನಲೂ ತೇಯುವುದು ಈ ಒಡಲು
ಗಂಗೆಯು ತಾನಾಗಿ ನೀರಿಗೆ ಎರವಾಗಿ
ಸೇರುತಿದೆ ಕಂಬನಿಯ ಆ ಕಡಲು....
ಕರುಣೆಯ ಕುಂಬಾರ
ಕರುಣೆಯ ಕುಂಬಾರ ಈ ಹಾಡುಗಾರ
ಮಣ್ಣು ಬೇಡುತ್ತಾನೆ ಕೊಡ ನೀಡುತ್ತಾನೆ
ಮಮತೆಯ ಕಲೆಗಾರ ಈ ಹಾಡುಗಾರ
ಮನೆ ಮಾಡುತ್ತಾನೆ ಹೊರ ಹೋಗುತ್ತಾನೆ..
ಗೋವಿನ ಹಾಲಂಥ ಮನಸಿರುವ
ಕೂಸಿನ ಜೇನಂತ ಮಾತಿರುವ ಈ ಭಾವ ಜೀವಾ...
|| ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ..||
ನಿತ್ಯವೂ ತಾನುರಿದು ಲೋಕಕೆ ದಿನಗರೆದು
ಹೆಚ್ಚರಿಸೋ ಸೂರ್ಯನಿಗೆ ನಿದ್ದೆ ಇಲ್ಲ
ರಾತ್ರಿಗೆ ತಾನುಳಿದು ತಾಪಕೆ ತಂಪೆರೆದು
ಸಂಚರಿಸೋ ಚಂದ್ರನಿಗೆ ಸ್ವಂತವಿಲ್ಲ
ಊರಿನ ಗೆಣೆಕಾರ….
ಊರಿನ ಗೆಣೆಕಾರ ಈ ಹಾಡುಗಾರ
ಕಾಪಾಡುತ್ತಾನೆ ಕಡೆಯಾಗುತ್ತಾನೆ
ಸತ್ಯದ ಹರಿಕಾರ ಈ ಹಾಡುಗಾರ
ಹೋರಡುತ್ತಾನೆ ಒಂಟಿಯಾಗುತ್ತಾನೆ
ಮಣ್ಣಿನ ಮಮಕಾರ ಕಂಪಿರುವ
ಮಾನದ ಮಣಿ ಹಾರ ಹೊಂದಿರುವಾ
ಈ ಭಾವ ಜೀವ….
|| ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ ||
Premada Hoogara song lyrics from Kannada Movie Chikkejamanru starring Ravichandran, Gowthami, Jai Jagadish, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Om Saiprakash and film is released on 1992