ಕಣ್ಣ ನೀರು ಜಾರೋ ಮುನ್ನ
ಉಸಿರಾಟ ಹಾರೋ ಮುನ್ನ
ನೀ ಬಂದು ಏರಿಕೋ ನನ್ನ
ಕ್ಷಣ ಮರೆತು ನಿನ್ನ ನಾ ಹೇಗಿರಲಿ
ನನ್ನ ಬಿಟ್ಟು ಹೋಗೋ ಮುನ್ನ
ಒಂದು ಸಾರಿ ನೆನೆಯೋ ನನ್ನ
ಈ ಜೀವಕೆ ಒಲವ ಮಳೆ ನೀನು
ದಿನ ಮನದಿ ಮೂಡೋ ಹೊಂಗನಸಾಗಿ
ದಿನ ಮನದಿ ಮೂಡೋ ಹೊಂಗನಸಾಗಿ
ಕಣ್ಣ ಕೊಳದಲಿ ನಿನ್ನ ಬಿಂಬವ
ನಾ ಬಿಡೆನು ಅಲುಗಾಡಲೂ…
ನಾ ಬಿಡೆನು ಅಲುಗಾಡಲೂ…
ನಿನ್ನ ನೆರಳ ತುಳಿಯದಂತೆ
ನಾ ಬರುವೇ ಹಿಂಬಾಲಿಸಿ…
ನಿನ್ನೊಡನೆ ಸಂಬಾಲಿಸಿ..
ನಾ ನೀಡೆ ಸಮಜಯಿಸಿ
ಆಣೆ ಮೇಲೆ ಆಣೆ ಮಾಡಿ
ಒಂದೇ ಸಮನೇ ನನ್ನ ಕಾಡಿ
ಕಾಣದಾದೆ ಇರುಳ ಮರೆಮಾಡಿ
ನೆನಪಲ್ಲೇ ಮನದಿ ನೀ ಸುಳಿದಾಡಿ
ಕಣ್ಣ ನೀರು ಜಾರೋ ಮುನ್ನ
ಉಸಿರಾಟ ಹಾರೋ ಮುನ್ನ
ನೀ ಬಂದು ಏರಿಕೋ ನನ್ನ
ಕ್ಷಣ ಮರೆತು ನಿನ್ನ ನಾ ಹೇಗಿರಲಿ
ನನ್ನ ಬಿಟ್ಟು ಹೋಗೋ ಮುನ್ನ
ಒಂದು ಸಾರಿ ನೆನೆಯೋ ನನ್ನ
ಈ ಜೀವಕೆ ಒಲವ ಮಳೆ ನೀನು
ದಿನ ಮನದಿ ಮೂಡೋ ಹೊಂಗನಸಾಗಿ
ದಿನ ಮನದಿ ಮೂಡೋ ಹೊಂಗನಸಾಗಿ
ಕಣ್ಣ ಕೊಳದಲಿ ನಿನ್ನ ಬಿಂಬವ
ನಾ ಬಿಡೆನು ಅಲುಗಾಡಲೂ…
ನಾ ಬಿಡೆನು ಅಲುಗಾಡಲೂ…
ನಿನ್ನ ನೆರಳ ತುಳಿಯದಂತೆ
ನಾ ಬರುವೇ ಹಿಂಬಾಲಿಸಿ…
ನಿನ್ನೊಡನೆ ಸಂಬಾಲಿಸಿ..
ನಾ ನೀಡೆ ಸಮಜಯಿಸಿ
ಆಣೆ ಮೇಲೆ ಆಣೆ ಮಾಡಿ
ಒಂದೇ ಸಮನೇ ನನ್ನ ಕಾಡಿ
ಕಾಣದಾದೆ ಇರುಳ ಮರೆಮಾಡಿ
ನೆನಪಲ್ಲೇ ಮನದಿ ನೀ ಸುಳಿದಾಡಿ