Aa Chigurina Ee Preethige Lyrics

in Charminar

Video:

LYRIC

-
ಆ ಚಿಗುರಿನ ಈ ಪ್ರೀತಿಗೆ
ಹನಿ ತುಂತುರು ನೀನಾದರೆ
ಮರವಾಗಿ ನಾ ನೆರಳಾಗುವೆ ನಿನಗೆ
ನಾ ಬಿತ್ತಿರೊ ಈ ಪ್ರೇಮಕೆ
ನೀರೆರೆಯದೆ ಬತ್ತೋಗಿದೆ
ಮುಂದೊಂದಿನ ಮಳೆಯಾಗುವೆ ನಾನೆ
ಗುರಿ ಕಡೆಗೆ ನನ್ನನು ಕಳಿಸಿರುವೆ
ಗುರಿ ತಲುಪಿ ನಾ ಬರುವೆ
ನಿನ್‌ ಮನಸ್ಸಿಗೆ ಬರೆಯನು ಎಳೆದಿರುವೆ
ಮನ್ನಿಸು ಓ ಮನವೆ
 
ನಂಬಿಕೆ ಮನದಲಿ ನಿನಗಿದ್ದು
ಕಾದರೆ ನೀನು ನನಗೆಂದು
ದೇವರು ಬರೆದ ಕಥೆಯಲ್ಲಿ
ಎಂದು ರಾಧಾ ಮೋಹನ
 
ನಿನ್‌ ಬಯಸಿ ಬಂದಿರೊ ಹೃದಯವಿದು
ಇಂದೇಕೊ ನಡುಗುತಿದೆ
ಅನುರಾಗದ ಮಾತನು ಮಂಡಿಸಲು
ನಾಲಿಗೆ ತೊದಲುತಿದೆ
ಸವಿಸ್ನೇಹದ ನುಡಿಯನು ಕೇಳಿಸಲು
ನನ್‌ ಮನಸ್ಸು ಹೆದರುತಿದೆ
ನನ್‌ ಜೊತೆಗೆ ಕರೆಯಲು ನಿನ್ನನು
ಗುರಿಯು ತಡೆಯುತಿದೆ
 
ಸಂತೇಗ್‌ ಹೋದರು ಚಿಂತಿಸದೆ
ನಂಬು ನೀ ಅನುಮಾನಿಸದೆ
ಸತ್ತು ಮಣ್ಣು ಸೇರಿದರು
ಅಲ್ಲೂ ನಾನು ನಿನ್ನವನೇ

Aa Chigurina Ee Preethige song lyrics from Kannada Movie Charminar starring Prem Kumar, Meghana Gaonkar, Kumuda, Lyrics penned by Mahesh Jeeva Sung by Kunal Ganjawala, Music Composed by Hari, film is Directed by R Chandru and film is released on 2013