ಕನ್ನಡ ಮಣ್ಣಿನ ಕಸ್ತೂರಿ ಕಂಪಿನ
ಮುದ್ದಾದ ಹೆಣ್ಣಿದೆ… ಮುದ್ದಾದ ಹೆಣ್ಣಿದೆ…
ಕನ್ನಡ ಮಣ್ಣಿನ ಕಸ್ತೂರಿ ಕಂಪಿನ
ಮುದ್ದಾದ ಹೆಣ್ಣಿದೆ… ಮುದ್ದಾದ ಹೆಣ್ಣಿದೆ…
ಕನ್ನಡ ಮಣ್ಣಿನ ಕಸ್ತೂರಿ ಕಂಪಿನ
ಮುದ್ದಾದ ಹೆಣ್ಣಿದೆ… ಮುದ್ದಾದ ಹೆಣ್ಣಿದೆ…
ಕಾವೇರಮ್ಮನ ಸಾಕುಮಗಳು
ತುಂಗಭದ್ರೆಯ ಜೀವ ಕರುಳು
ಚೆಲುವಿನ ಧಾರೆ ಈಕೆ ಒಡಲು
ಕನ್ನಡ ಮಣ್ಣಿನ ಕಸ್ತೂರಿ ಕಂಪಿನ
ಮುದ್ದಾದ ಹೆಣ್ಣಿದೆ… ಮುದ್ದಾದ ಹೆಣ್ಣಿದೆ….
ಕೋಟೆ ದುರ್ಗ ಕಿತ್ತೂರುಗಳೇ ಇವಳ ತವರೂರು
ಜಗದ ಕಲೆಗೆ ಮುಕುಟ ಇಟ್ಟನನ್ನ ಬೇಲೂರು
ಗೋಳಗುಮ್ಮಟ ವದನ ಪೂರ್ವ ಪಶ್ಚಿಮ ನಯನ
ಮಲೆನಾಡ ಮೈಯ ಬಣ್ಣ ಮೈಸೂರು ಮಲ್ಲಿಗೆ ಕವನ
ಭುವನೇಶ್ವರಿ ಹೃದಯೇಶ್ವರಿ ಜಲಪಾತದಲಿ ನಿಂತ ಚಲುವೆ
|| ಕನ್ನಡ ಮಣ್ಣಿನ ಕಸ್ತೂರಿ ಕಂಪಿನ
ಮುದ್ದಾದ ಹೆಣ್ಣಿದೆ… ಮುದ್ದಾದ ಹೆಣ್ಣಿದೆ…. ||
ಹೊಳೆವ ಮಿಂಚ ಬೆಳಕ ಹಿಡಿದು ತಿಲಕ ಇಟ್ಟೋಳು
ಹರಿವ ನದಿಯ ಎದೆಯ ಸೇರಿ ಲಾಲಿ ಹಾಡೋಳು
ನೂರು ನವಿಲಿನ ಸೀರೆ ಋತುವೆಲ್ಲ ಧರಿಸುವೆ ನೀರೆ
ಏಳು ಬಣ್ಣದ ಬಾಲೆ ಆ ಇಂದ್ರ ತಿದ್ದಿದ ಹಾಳೆ
ಪಂಚೇಂದ್ರಿಯ ಪಂಚಾಮೃತ ಪರಮಾತ್ಮ ಕೊಡಿಸಿದ ಇವಳಿಗೆನೆ
|| ಕನ್ನಡ ಮಣ್ಣಿನ ಕಸ್ತೂರಿ ಕಂಪಿನ
ಮುದ್ದಾದ ಹೆಣ್ಣಿದೆ… ಮುದ್ದಾದ ಹೆಣ್ಣಿದೆ…
ಕಾವೇರಮ್ಮನ ಸಾಕುಮಗಳು
ತುಂಗಭದ್ರೆಯ ಜೀವ ಕರುಳು
ಚೆಲುವಿನ ಧಾರೆ ಈಕೆ ಒಡಲು||
||ಕನ್ನಡ ಮಣ್ಣಿನ ಕಸ್ತೂರಿ ಕಂಪಿನ
ಮುದ್ದಾದ ಹೆಣ್ಣಿದೆ… ಮುದ್ದಾದ ಹೆಣ್ಣಿದೆ….
ಕಾವೇರಮ್ಮನ ಸಾಕುಮಗಳು
ತುಂಗಭದ್ರೆಯ ಜೀವ ಕರುಳು
ಚೆಲುವಿನ ಧಾರೆ .. ಈಕೆ ಒಡಲು ||
||ಕನ್ನಡ ಮಣ್ಣಿನ ಕಸ್ತೂರಿ ಕಂಪಿನ
ಮುದ್ದಾದ ಹೆಣ್ಣಿದೆ… ಮುದ್ದಾದ ಹೆಣ್ಣಿದೆ…. ||