Jeevakke Jeeva Lyrics

ಜೀವಕ್ಕೆ ಜೀವ Lyrics

in Bhavachitra

in ಭಾವಚಿತ್ರ

LYRIC

ಜೀವಕ್ಕೆ ಜೀವ ಕೊಡೋ
ದೋಸ್ತೀಯೆ ಇರಲೂ
ದೋಸ್ತೀನೇ ಇವರ ಆಸ್ತಿ
ಊರಿಗೆ ಊರೇ
ಎದುರಾಗಿ ನಿಂತರೂ
ಜಗ್ಗದು ಇವರ ದೋಸ್ತಿ…
ಎಲ್ಲಿಗೆ ಹೋದರೂ
ಜೊತೆಗೆ ಇಬ್ಬರೂ
ಇವ್ರು ಜೋಡಿ ಎತ್ತುಗಳು
ಊರ ಮುತ್ತುಗಳು
ಇವುರ್ದೆ ಬೇರೆ ಖದರೂ…
 
|| ಜೀವಕ್ಕೆ ಜೀವ ಕೊಡೋ
ದೋಸ್ತೀಯೆ ಇರಲೂ
ದೋಸ್ತೀನೇ ಇವರ ಆಸ್ತಿ…||
 
ಹುಟ್ಟಿದ ಊರಲ್ಲಿ ವರ್ಷದ ಜಾತ್ರೆಲಿ
ಜೋರು ಇವರ ದೋಸ್ತಿ ದರ್ಬಾರು
ಒಳ್ಳೆಯ ಮಾತಿಗೆ ನೀತಿ ನೀಯತ್ತಿಗೆ
ಯಾವತ್ತೂ ಇವರು ತಲೆ ಬಾಗೋರು
ದಂಡು ದಾಳಿಗೆ ಹೆದರೋರಲ್ಲಾ
ಮೀಸೆ ತಿರುವಿ ನಿಲ್ಲೋರು…
ಪ್ರೀತಿಯಿಂದ ಬಂದರೆ ಜೊತೆಗೆ
ನೋವಿಗೂ ನಲಿವಿಗೂ ಎದೆಗೆ
ಎದೆ ಕೊಟ್ಟು ಜೊತೆಗೆ ಸಾಗೋರು
 
|| ಜೀವಕ್ಕೆ ಜೀವ ಕೊಡೋ
ದೋಸ್ತೀಯೆ ಇರಲೂ
ದೋಸ್ತೀನೇ ಇವರ ಆಸ್ತಿ
ಊರಿಗೆ ಊರೇ
ಎದುರಾಗಿ ನಿಂತರೂ
ಜಗ್ಗದು ಇವರ ದೋಸ್ತಿ…||
 
ಮೆಟ್ಟಿದ ನಾಡಿಗೆ ಕಟ್ಟಿದ ದೋಸ್ತಿಗೆ
ಎಂದೆಂದೂ ಇವರು ತಲೆ ಬಾಗೋರು
ಕಷ್ಟದಲ್ಲಿ ಕರೆದರೆ ದೋಸ್ತರು
ಅರ್ಧ ರಾತ್ರಿಲಿ ಎದ್ದು ಬರೋರು
ಒಂದೇ ಗರ್ಭದಿ ಬೆಳೆಯದಿದ್ದರೂ
ಎಂದೂ ಅಗಲದ ಸೋದರರು
ಜಗವೇ ಇವರಿಗೆ ನಿಂತರು ಎದುರು
ಅಂಜದೆ ಅಳುಕದೆ ಒಬ್ಬರನೊಬ್ಬರು
ಬಿಟ್ಟು ಕೊಡದವರು…
 
|| ಜೀವಕ್ಕೆ ಜೀವ ಕೊಡೋ
ದೋಸ್ತೀಯೆ ಇರಲೂ
ದೋಸ್ತೀನೇ ಇವರ ಆಸ್ತಿ
ಊರಿಗೆ ಊರೇ
ಎದುರಾಗಿ ನಿಂತರೂ
ಜಗ್ಗದು ಇವರ ದೋಸ್ತಿ…
ಎಲ್ಲಿಗೆ ಹೋದರೂ
ಜೊತೆಗೆ ಇಬ್ಬರೂ
ಇವ್ರು ಜೋಡಿ ಎತ್ತುಗಳು
ಊರ ಮುತ್ತುಗಳು
ಇವುರ್ದೆ ಬೇರೆ ಖದರೂ…||

ಜೀವಕ್ಕೆ ಜೀವ ಕೊಡೋ
ದೋಸ್ತೀಯೆ ಇರಲೂ
ದೋಸ್ತೀನೇ ಇವರ ಆಸ್ತಿ
ಊರಿಗೆ ಊರೇ
ಎದುರಾಗಿ ನಿಂತರೂ
ಜಗ್ಗದು ಇವರ ದೋಸ್ತಿ…
ಎಲ್ಲಿಗೆ ಹೋದರೂ
ಜೊತೆಗೆ ಇಬ್ಬರೂ
ಇವ್ರು ಜೋಡಿ ಎತ್ತುಗಳು
ಊರ ಮುತ್ತುಗಳು
ಇವುರ್ದೆ ಬೇರೆ ಖದರೂ…
 
|| ಜೀವಕ್ಕೆ ಜೀವ ಕೊಡೋ
ದೋಸ್ತೀಯೆ ಇರಲೂ
ದೋಸ್ತೀನೇ ಇವರ ಆಸ್ತಿ…||
 
ಹುಟ್ಟಿದ ಊರಲ್ಲಿ ವರ್ಷದ ಜಾತ್ರೆಲಿ
ಜೋರು ಇವರ ದೋಸ್ತಿ ದರ್ಬಾರು
ಒಳ್ಳೆಯ ಮಾತಿಗೆ ನೀತಿ ನೀಯತ್ತಿಗೆ
ಯಾವತ್ತೂ ಇವರು ತಲೆ ಬಾಗೋರು
ದಂಡು ದಾಳಿಗೆ ಹೆದರೋರಲ್ಲಾ
ಮೀಸೆ ತಿರುವಿ ನಿಲ್ಲೋರು…
ಪ್ರೀತಿಯಿಂದ ಬಂದರೆ ಜೊತೆಗೆ
ನೋವಿಗೂ ನಲಿವಿಗೂ ಎದೆಗೆ
ಎದೆ ಕೊಟ್ಟು ಜೊತೆಗೆ ಸಾಗೋರು
 
|| ಜೀವಕ್ಕೆ ಜೀವ ಕೊಡೋ
ದೋಸ್ತೀಯೆ ಇರಲೂ
ದೋಸ್ತೀನೇ ಇವರ ಆಸ್ತಿ
ಊರಿಗೆ ಊರೇ
ಎದುರಾಗಿ ನಿಂತರೂ
ಜಗ್ಗದು ಇವರ ದೋಸ್ತಿ…||
 
ಮೆಟ್ಟಿದ ನಾಡಿಗೆ ಕಟ್ಟಿದ ದೋಸ್ತಿಗೆ
ಎಂದೆಂದೂ ಇವರು ತಲೆ ಬಾಗೋರು
ಕಷ್ಟದಲ್ಲಿ ಕರೆದರೆ ದೋಸ್ತರು
ಅರ್ಧ ರಾತ್ರಿಲಿ ಎದ್ದು ಬರೋರು
ಒಂದೇ ಗರ್ಭದಿ ಬೆಳೆಯದಿದ್ದರೂ
ಎಂದೂ ಅಗಲದ ಸೋದರರು
ಜಗವೇ ಇವರಿಗೆ ನಿಂತರು ಎದುರು
ಅಂಜದೆ ಅಳುಕದೆ ಒಬ್ಬರನೊಬ್ಬರು
ಬಿಟ್ಟು ಕೊಡದವರು…
 
|| ಜೀವಕ್ಕೆ ಜೀವ ಕೊಡೋ
ದೋಸ್ತೀಯೆ ಇರಲೂ
ದೋಸ್ತೀನೇ ಇವರ ಆಸ್ತಿ
ಊರಿಗೆ ಊರೇ
ಎದುರಾಗಿ ನಿಂತರೂ
ಜಗ್ಗದು ಇವರ ದೋಸ್ತಿ…
ಎಲ್ಲಿಗೆ ಹೋದರೂ
ಜೊತೆಗೆ ಇಬ್ಬರೂ
ಇವ್ರು ಜೋಡಿ ಎತ್ತುಗಳು
ಊರ ಮುತ್ತುಗಳು
ಇವುರ್ದೆ ಬೇರೆ ಖದರೂ…||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ