ಒಹೊಹೊ ಒಹೊಹೊ...ಹ್ಮ ಹ್ಮ ಹ್ಮ
ಆಡುತಿರುವ ಮೋಡಗಳೇ…
ಹಾರುತಿರುವ ಹಕ್ಕಿಗಳೇ…
ಯಾರ ತಡೆಯೂ ನಿಮಗಿಲ್ಲ
ನಿಮ್ಮ ಭಾಗ್ಯ ನಮಗಿಲ್ಲ….
|| ಆಡುತಿರುವ ಮೋಡಗಳೇ….||
ಒಬ್ಬನು ತನ್ನಯ ಸಲುವಾಗಿ,
ಹಲವರ ದೋಚಿ ನಗುವಂಥ
ಒಬ್ಬನೆಲ್ಲೊ ನಗುತಿರಲು,
ಕೋಟಿ ಮಂದಿ ಅಳುವಂಥ
ಲೋಕವಿದುವಂತೆ….
ಹೊಯ್ ಪಾಪದ ಸಂತೆ,
ಲೋಕವಿದುವಂತೆ….
ಹೊಯ್ ಪಾಪದ ಸಂತೆ,
ಪ್ರೀತಿ ಎಲ್ಲಿ, ನೀತಿ ಎಲ್ಲಿ
ಶಾಂತಿಯು ಎಲ್ಲಿದೆ ಜಗದಲ್ಲಿ
|| ಆಡುತಿರುವ ಮೋಡಗಳೇ…
ಹಾರುತಿರುವ ಹಕ್ಕಿಗಳೇ…||
ಮನುಜರು ಮನುಜರ ದಾರಿಯಲಿ
ಮುಳ್ಳನು ಹಾಸಿ ಮೆರೆಯುವರು
ಆಸೆಯಿಂದ ಮನೆ ಕಟ್ಟಿ
ಕಡೆಗೆ ಮಣ್ಣಲಿ ಮಲಗುವರು
ಲೋಕದೀ ಆಟ….ಹೊಯ್
ಜೀವ ಜಂಜಾಟ,
ಲೋಕದೀ ಆಟ… ಹೊಯ್
ಜೀವ ಜಂಜಾಟ
ಭೇದಭಾವ ಆಳುತಿರುವ
ಲೋಕದಿ ನ್ಯಾಯದ ನೆರಳೆಲ್ಲಿ
|| ಆಡುತಿರುವ ಮೋಡಗಳೇ…
ಹಾರುತಿರುವ ಹಕ್ಕಿಗಳೇ…
ಯಾರ ತಡೆಯೂ ನಿಮಗಿಲ್ಲ
ನಿಮ್ಮ ಭಾಗ್ಯ ನಮಗಿಲ್ಲ….
ಒಹೊಹೊ ಒಹೊಹೊ..
ಹ್ಮ ಹ್ಮ ಹ್ಮ…..||
ಒಹೊಹೊ ಒಹೊಹೊ...ಹ್ಮ ಹ್ಮ ಹ್ಮ
ಆಡುತಿರುವ ಮೋಡಗಳೇ…
ಹಾರುತಿರುವ ಹಕ್ಕಿಗಳೇ…
ಯಾರ ತಡೆಯೂ ನಿಮಗಿಲ್ಲ
ನಿಮ್ಮ ಭಾಗ್ಯ ನಮಗಿಲ್ಲ….
|| ಆಡುತಿರುವ ಮೋಡಗಳೇ….||
ಒಬ್ಬನು ತನ್ನಯ ಸಲುವಾಗಿ,
ಹಲವರ ದೋಚಿ ನಗುವಂಥ
ಒಬ್ಬನೆಲ್ಲೊ ನಗುತಿರಲು,
ಕೋಟಿ ಮಂದಿ ಅಳುವಂಥ
ಲೋಕವಿದುವಂತೆ….
ಹೊಯ್ ಪಾಪದ ಸಂತೆ,
ಲೋಕವಿದುವಂತೆ….
ಹೊಯ್ ಪಾಪದ ಸಂತೆ,
ಪ್ರೀತಿ ಎಲ್ಲಿ, ನೀತಿ ಎಲ್ಲಿ
ಶಾಂತಿಯು ಎಲ್ಲಿದೆ ಜಗದಲ್ಲಿ
|| ಆಡುತಿರುವ ಮೋಡಗಳೇ…
ಹಾರುತಿರುವ ಹಕ್ಕಿಗಳೇ…||
ಮನುಜರು ಮನುಜರ ದಾರಿಯಲಿ
ಮುಳ್ಳನು ಹಾಸಿ ಮೆರೆಯುವರು
ಆಸೆಯಿಂದ ಮನೆ ಕಟ್ಟಿ
ಕಡೆಗೆ ಮಣ್ಣಲಿ ಮಲಗುವರು
ಲೋಕದೀ ಆಟ….ಹೊಯ್
ಜೀವ ಜಂಜಾಟ,
ಲೋಕದೀ ಆಟ… ಹೊಯ್
ಜೀವ ಜಂಜಾಟ
ಭೇದಭಾವ ಆಳುತಿರುವ
ಲೋಕದಿ ನ್ಯಾಯದ ನೆರಳೆಲ್ಲಿ
|| ಆಡುತಿರುವ ಮೋಡಗಳೇ…
ಹಾರುತಿರುವ ಹಕ್ಕಿಗಳೇ…
ಯಾರ ತಡೆಯೂ ನಿಮಗಿಲ್ಲ
ನಿಮ್ಮ ಭಾಗ್ಯ ನಮಗಿಲ್ಲ….
ಒಹೊಹೊ ಒಹೊಹೊ..
ಹ್ಮ ಹ್ಮ ಹ್ಮ…..||
Aaduthiruva Modagale song lyrics from Kannada Movie Bettada Huli starring Dr Rajkumar, Udayakumar, Jayanthi, Lyrics penned by Geethapriya Sung by P B Srinivas, Music Composed by T G Lingappa, film is Directed by A V Sheshagiri Rao and film is released on 1965