Elli Nodalalli Lyrics

in Banni Ondsala Nodi

Video:

LYRIC

ಎಲ್ಲಿ ನೋಡಲಲ್ಲಿ ನನಗೆ ನಿನ್ನ ರೂಪ ಕಾಣುತೈತೆ
ಕುಂತ್ರು ನಿಂತ್ರು ಮನದಲ್ಲೆಲ್ಲ ನಿನ್ನ ನೆನಪೆ ಕಾಡುತೈತೆ
ಎಲ್ಲಿ ನೋಡಲಲ್ಲಿ ನನಗೆ ನಿನ್ನ ರೂಪ ಕಾಣುತೈತೆ
ಕುಂತ್ರು ನಿಂತ್ರು ಮನದಲ್ಲೆಲ್ಲ ನಿನ್ನ ನೆನಪೆ ಕಾಡುತೈತೆ
ನಿನ್ನ ಸಂಗವ ಜೀವ ಬೇಡೈತೆ
ನಿನ್ನಿಂದಲೆ ಉಸಿರಾಡೈತೆ
ಎಲು ಎಲು ಎಲು ಎಲು ಎಲು ಎಲು
ಎಲು ಎಲು ಎಲು ಎಲು ಎಲು ಎಲು
 
ಚೆಲುವೆ ನೀನು ಮೈಸೂರ ಮಲ್ಲೆ ನೀನು
ಒಲವೆ ನೀನು ಕಬ್ಬಿನ ಜಲ್ಲೆ ನೀನು
ಚೆಲುವ ನೀನು ಮೋಡಿ ಮಾಡೊ ಚೋರ ನೀನು
ಚತುರ ನೀನು ನನ್ನ ಗೆದ್ದ ಹೀರೊ ನೀನು
ನನ್ನ ಎದೆಯಲ್ಲಿ ನಲ್ಲೆ ನಿನ್ನ ಹೃದಯ
ಡವ ಡವ ಗುಡುತೈತೆ ಕಣ ಕಣ ಮಿಸುಕೈತೆ
ಜೀವವು ನನ್ನ ಜೀವನವು ಎಂದು ಹೇಳೈತೆ
ಲೋಕ ಪರಲೋಕದಲು ಸೇರುವೆವು ಎಂದೈತೆ
 
||ಎಲ್ಲಿ ನೋಡಲಲ್ಲಿ ನನಗೆ ನಿನ್ನ ರೂಪ ಕಾಣುತೈತೆ
ಕುಂತ್ರು ನಿಂತ್ರು ಮನದಲ್ಲೆಲ್ಲ ನಿನ್ನ ನೆನಪೆ ಕಾಡುತೈತೆ||
 
ಚಂದ್ರ ನೀನು ಚಕೋರ ಪಕ್ಷಿಯಂತೆ ನಾನು
ಬ್ರಹ್ಮ ಬರೆದ ಸಿಂಧೂರ ಭಾಗ್ಯ ನೀನು
ಕೃಷ್ಣ ನಾನು ರೂಪರಾಣಿ ರಾಧೆ ನೀನು
ನನ್ನ ಕೊಳಲ ಉಸಿರು ಸಪ್ತಸ್ವರವು ನೀನು
ಬಾಳ ಹೊಲದಲ್ಲಿ ಮುತ್ತನ್ನು ಬೆಳೆಯಲು
ಜೋಡಿ ಎತ್ತಿನಂತೆ ನಮ್ಮ ಪ್ರೀತಿ ಪ್ರೇಮವು
ನಾನು ನೀನು ಉಳುಮೆಯ ನೊಗವು ನೇಗಿಲಾಗುವ
ಸುಖದ ಬಂಡೆ ಚಲಿಸಲು ಜೋಡಿ ಚಕ್ರವಾಗುವ
 
||ಎಲ್ಲಿ ನೋಡಲಲ್ಲಿ ನನಗೆ ನಿನ್ನ ರೂಪ ಕಾಣುತೈತೆ
ಕುಂತ್ರು ನಿಂತ್ರು ಮನದಲ್ಲೆಲ್ಲ ನಿನ್ನ ನೆನಪೆ ಕಾಡುತೈತೆ
ನಿನ್ನ ಸಂಗವ ಜೀವ ಬೇಡೈತೆ
ನಿನ್ನಿಂದಲೆ ಉಸಿರಾಡೈತೆ||
ಎಲು ಎಲು ಎಲು ಎಲು ಎಲು ಎಲು
ಎಲು ಎಲು ಎಲು ಎಲು ಎಲು ಎಲು
 

Elli Nodalalli song lyrics from Kannada Movie Banni Ondsala Nodi starring Vinod Raj, Dheerendra Gopal, Ramesh Bhat, Lyrics penned by M D Hasham Sung by S P Balasubrahmanyam, Manjula Gururaj, Music Composed by Upendra Kumar, film is Directed by S Umesh and film is released on 1992