Kaddu Noduve Eke Lyrics

in Bandhavya

Video:

LYRIC

ಜಗವೆಂಬ ಗುಡಿಯಲ್ಲಿ
ಬಾಳೆಂಬ ಮಂಟಪವೇ
ಕುಳಿತ ನವ ವಧು ವರರೇ
ಹೃದಯಗಳು ಬೆಸೆದಾಯ್ತು
ಭಯವೇಕೆ ಕಣ್ಣಿಗೆ...
ಕದ್ದು ನೋಡುವೇ ಏಕೆ...
ಕದ್ದು ನೋಡುವೇ ಏಕೆ
ಎಲೆ ಕಣ್ಣೆ ಕದಿಯುವುದೆಲ್ಲಾ 
ನಲುಮೆಯ ಲಕ್ಕಿರುವಾಗ\

|| ಕದ್ದು ನೋಡುವೇ ಏಕೆ...||

ರೂಪವ ನೋಡಿ ಆತುರವೇ
ದೃಷ್ಟಿ ತಾಕಿತೆಂಬ ಕಾತುರವೇ
ರೂಪವ ನೋಡಿ ಆತುರವೇ
ದೃಷ್ಟಿ ತಾಕಿತೆಂಬ ಕಾತುರವೇ
ಆರಂಭ ಈಗ ಬದುಕು ಕಾದಿರುವಾಗ
ಅವಸರವೇಕೀಗ ಎಲ್ಲವು
ನಿಮ್ಮದೆ ಆಗಿರುವಾಗ...

|| ಕದ್ದು ನೋಡುವೇ ಏಕೆ...||

ನೋಡುವ ಆಸೆಗೆ ತಡೆಯೇನು
ಮಮತೆಯ ಕಂಗಳು ಕುರುಡೇನು
ನೋಡುವ ಆಸೆಗೆ ತಡೆಯೇನು
ಮಮತೆಯ ಕಂಗಳು ಕುರುಡೇನು
ಸಂತಸದ ನೋಟ ತುಂಬಿ ನಿಂತಿರುವಾಗ
ಸವಿಯುವೇ ಏನನ್ನು
ಎಲ್ಲರ ಎದುರಲಿ ನೀನಿರುವಾಗ...
 
|| ಕದ್ದು ನೋಡುವೇ ಏಕೆ...
ಕದ್ದು ನೋಡುವೇ ಏಕೆ
ಎಲೆ ಕಣ್ಣೆ ಕದಿಯುವುದೆಲ್ಲಾ 
ನಲುಮೆಯ ಲಕ್ಕಿರುವಾಗ
ಕದ್ದು ನೋಡುವೇ ಏಕೇ.....||

Kaddu Noduve Eke song lyrics from Kannada Movie Bandhavya starring K S Ashwath, Rajesh, Gangadhar, Lyrics penned by Yoganarasimha Sung by S Janaki, Music Composed by R Rathna, film is Directed by Rathnakar-Madhu and film is released on 1972