Thumbali Lyrics

ತುಂಬಲಿ Lyrics

in Athi Aparoopa

in ಅತಿ ಅಪರೂಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತುಂಬಲಿ ಬೊಗಸೆಯು ತುಂಬಲಿ
ಮನಸ್ಸಲಿ ಆಸೆಯು ತುಂಬಲಿ
ಸಂತಸಧಾರೆಯು ಚಿಮ್ಮಲಿ
ಹನಿ ಹನಿ ಸೂರ್ಯನು ಹೊಮ್ಮಲಿ
ಓಡುವ ಕ್ಷಣದ ಬಿಂದುಗಳನ್ನು ಜೋಡಿಸಿಕೊಂಡೆ
ಬಿಡಿಸುವೆನು ನನ್ನಯ ಬಾಳಿನ ರಂಗೋಲಿ
ತುಂಬಲಿ ಕಂಗಳು ತುಂಬಲಿ
ಚಿಲಿಪಿಲಿ ಬಿಂಬವು ತುಂಬಲಿ
ಬಾನಲಿ ಗರಿಗಳು ಚಿಮ್ಮಲಿ
ಹೂವಿನ ದನಿಗಳು ಹೊಮ್ಮಲಿ
ನನ್ನಲಿ ನೂರು ಹಂಬಲವನ್ನು ಕೋರಿಸಿಕೊಂಡೆ
ಜೀಕುವೆ ನನ್ನಯ ಜೀವದ ಜೋಕಾಲಿ
 
ಚಂದಿರನ ಮೊರೆಯ ಕಲೆಯ ಅಳಿಸುತ ಕೈಯ್ಯಿಂದಲೇ
ಮಲ್ಲಿಗೆಗೆ ಬಣ್ಣವ ಬಳಿಯುತ ನಾ ಕಣ್ಣಿಂದಲೇ
ಬೇಕಾದರೆ ಚೆಲ್ಲದೆ ನಕ್ಷತ್ರವ ಬಾಚುತ
ಸೂರ್ಯನ ತಂಪಿನ ಕನ್ನಡಕವ ನೀಡುತ
ಆಳಲೆಬೇಕು ನಾ ಈ ಲೋಕವ ಬರಿಗೈಯ್ಯಲೇ
 
||ತುಂಬಲಿ ಬೊಗಸೆಯು ತುಂಬಲಿ
ಮನಸ್ಸಲಿ ಆಸೆಯು ತುಂಬಲಿ
ಸಂತಸಧಾರೆಯು ಚಿಮ್ಮಲಿ
ಹನಿ ಹನಿ ಸೂರ್ಯನು ಹೊಮ್ಮಲಿ
ಓಡುವ ಕ್ಷಣದ ಬಿಂದುಗಳನ್ನು ಜೋಡಿಸಿಕೊಂಡೆ
ಬಿಡಿಸುವೆನು ನನ್ನಯ ಬಾಳಿನ ರಂಗೋಲಿ||
 
ಮೋಡಗಳ ಮನೆಯಲಿ ಸಂಸಾರವ ನಾ ಹೂಡುತ
ಮೀನುಗಳ ಮಿಂಚುವ ಸಂಭಾಷಣೆ ನಾ ಕೇಳುತ
ಹಾರಾಡುವ ಚಿಟ್ಟೆಯ ಓ ಹೂವಿಗೆ ಕಟ್ಟುತ
ಬೆಳದಿಂಗಳ ಹಾಲಿಗೆ ಮಳೆಹನಿಯ ಬೆರೆಸುತ
ಕುಣಿಸಲೆಬೇಕು ನಾ ಈ ಕಾಲವ ಕಣ್ಣಲಿ
 
||ತುಂಬಲಿ ಬೊಗಸೆಯು ತುಂಬಲಿ
ಮನಸ್ಸಲಿ ಆಸೆಯು ತುಂಬಲಿ
ಸಂತಸಧಾರೆಯು ಚಿಮ್ಮಲಿ
ಹನಿ ಹನಿ ಸೂರ್ಯನು ಹೊಮ್ಮಲಿ
ಓಡುವ ಕ್ಷಣದ ಬಿಂದುಗಳನ್ನು ಜೋಡಿಸಿಕೊಂಡೆ
ಬಿಡಿಸುವೆನು ನನ್ನಯ ಬಾಳಿನ ರಂಗೋಲಿ||

ತುಂಬಲಿ ಬೊಗಸೆಯು ತುಂಬಲಿ
ಮನಸ್ಸಲಿ ಆಸೆಯು ತುಂಬಲಿ
ಸಂತಸಧಾರೆಯು ಚಿಮ್ಮಲಿ
ಹನಿ ಹನಿ ಸೂರ್ಯನು ಹೊಮ್ಮಲಿ
ಓಡುವ ಕ್ಷಣದ ಬಿಂದುಗಳನ್ನು ಜೋಡಿಸಿಕೊಂಡೆ
ಬಿಡಿಸುವೆನು ನನ್ನಯ ಬಾಳಿನ ರಂಗೋಲಿ
ತುಂಬಲಿ ಕಂಗಳು ತುಂಬಲಿ
ಚಿಲಿಪಿಲಿ ಬಿಂಬವು ತುಂಬಲಿ
ಬಾನಲಿ ಗರಿಗಳು ಚಿಮ್ಮಲಿ
ಹೂವಿನ ದನಿಗಳು ಹೊಮ್ಮಲಿ
ನನ್ನಲಿ ನೂರು ಹಂಬಲವನ್ನು ಕೋರಿಸಿಕೊಂಡೆ
ಜೀಕುವೆ ನನ್ನಯ ಜೀವದ ಜೋಕಾಲಿ
 
ಚಂದಿರನ ಮೊರೆಯ ಕಲೆಯ ಅಳಿಸುತ ಕೈಯ್ಯಿಂದಲೇ
ಮಲ್ಲಿಗೆಗೆ ಬಣ್ಣವ ಬಳಿಯುತ ನಾ ಕಣ್ಣಿಂದಲೇ
ಬೇಕಾದರೆ ಚೆಲ್ಲದೆ ನಕ್ಷತ್ರವ ಬಾಚುತ
ಸೂರ್ಯನ ತಂಪಿನ ಕನ್ನಡಕವ ನೀಡುತ
ಆಳಲೆಬೇಕು ನಾ ಈ ಲೋಕವ ಬರಿಗೈಯ್ಯಲೇ
 
||ತುಂಬಲಿ ಬೊಗಸೆಯು ತುಂಬಲಿ
ಮನಸ್ಸಲಿ ಆಸೆಯು ತುಂಬಲಿ
ಸಂತಸಧಾರೆಯು ಚಿಮ್ಮಲಿ
ಹನಿ ಹನಿ ಸೂರ್ಯನು ಹೊಮ್ಮಲಿ
ಓಡುವ ಕ್ಷಣದ ಬಿಂದುಗಳನ್ನು ಜೋಡಿಸಿಕೊಂಡೆ
ಬಿಡಿಸುವೆನು ನನ್ನಯ ಬಾಳಿನ ರಂಗೋಲಿ||
 
ಮೋಡಗಳ ಮನೆಯಲಿ ಸಂಸಾರವ ನಾ ಹೂಡುತ
ಮೀನುಗಳ ಮಿಂಚುವ ಸಂಭಾಷಣೆ ನಾ ಕೇಳುತ
ಹಾರಾಡುವ ಚಿಟ್ಟೆಯ ಓ ಹೂವಿಗೆ ಕಟ್ಟುತ
ಬೆಳದಿಂಗಳ ಹಾಲಿಗೆ ಮಳೆಹನಿಯ ಬೆರೆಸುತ
ಕುಣಿಸಲೆಬೇಕು ನಾ ಈ ಕಾಲವ ಕಣ್ಣಲಿ
 
||ತುಂಬಲಿ ಬೊಗಸೆಯು ತುಂಬಲಿ
ಮನಸ್ಸಲಿ ಆಸೆಯು ತುಂಬಲಿ
ಸಂತಸಧಾರೆಯು ಚಿಮ್ಮಲಿ
ಹನಿ ಹನಿ ಸೂರ್ಯನು ಹೊಮ್ಮಲಿ
ಓಡುವ ಕ್ಷಣದ ಬಿಂದುಗಳನ್ನು ಜೋಡಿಸಿಕೊಂಡೆ
ಬಿಡಿಸುವೆನು ನನ್ನಯ ಬಾಳಿನ ರಂಗೋಲಿ||

Thumbali song lyrics from Kannada Movie Athi Aparoopa starring Prem Kumar, Aindritha Ray, Ananthnag, Lyrics penned by Jayanth Kaikini Sung by Shreya Ghoshal, Music Composed by Mano Murthy, film is Directed by Dinesh Babu and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ