Karuneya Illada Lyrics

ಕರುಣೆ ಇಲ್ಲದ Lyrics

in Asura

in ಅಸುರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಾರುಣ್ಯ ತುಂಬಿದ ಧಾರುಣಿ ಕಂಡೆ
ಶಾಂತಿಯ ಸಾರುವ ಬಾನನು ಕಂಡೆ
ಉಸಿರನು ಕಾಯುವ ಗಾಳಿಯ ಕಂಡೆ
ಬಾಳನು ಬೆಳಗುವ ಜ್ಯೋತಿಯ ಕಂಡೆ
ಕಾರುಣ್ಯ ತುಂಬಿದ ಧಾರುಣಿ ಕಂಡೆ
ಶಾಂತಿಯ ಸಾರುವ ಬಾನನು ಕಂಡೆ
ಉಸಿರನು ಕಾಯುವ ಗಾಳಿಯ ಕಂಡೆ
ಪಾಪವ ತೊಳೆಯುವ ಗಂಗೆಯ ಕಂಡೆ..ಛೀ…
 
ಕರುಣೆ ಇಲ್ಲದ ಧರಣಿಯ ಕಂಡೆ
ಕೆಂಡವ ಕಾರುವ ಗಗನವ ಕಂಡೆ
ವಿಷವನು ತೂರುವ ಗಾಳಿಯ ಕಂಡೆ
ಎದೆಯನು ಉರಿಸೊ ಬೆಂಕಿಯ ಕಂಡೆ
ಸುಳಿಯಲಿ ಮುಳುಗಿಸೊ ನೀರನು ಕಂಡೆ 
ಬೊಗಸೆಯ ನೀರಲು ಸುಳಿಯನು ಕಂಡೆ
ಹೂವಿನ ಎದೆಯೆಲಿ ಮುಳ್ಳನು ಕಂಡೆ
ಹಿಮದಲಿ ಜ್ವಾಲಮುಖಿಯನು ಕಂಡೆ
ರೆಕ್ಕೆಯ ಬಿಚ್ಚದ ಹಕ್ಕಿಯ ಕಂಡೆ
ಹಾಡಲು ಬಾರದ ಕೋಗಿಲೆ ಕಂಡೆ
ಮುತ್ತೆ ಇಲ್ಲದ ಕಡಲನು ಕಂಡೆ
ಗಂಧವ ಚೆಲ್ಲದ ಹೂಗಳ ಕಂಡೆ
ಜೇನನು ಹೀರದ ದುಂಬಿಯ ಕಂಡೆ
ದಿನಗಳ ನುಂಗುವ ಕ್ಷಣಗಳ ಕಂಡೆ
ದಿಕ್ಕುಗಳಿಲ್ಲದ ದಾರಿಯ ಕಂಡೆ
ದಾರಿಗಳಿಲ್ಲದ ದಿಕ್ಕನು ಕಂಡೆ
ಮೋಡದ ಹನಿಯಲು ಬೆವರನು ಕಂಡೆ
ಗಾಳಿಯ ಎದೆಯಲು ನಡುಕವ ಕಂಡೆ
ಮಳೆಯಬಿಲ್ಲಲು ಕೊಳೆಯನು ಕಂಡೆ
ಇಬ್ಬನಿ ಕಣ್ಣಲು ಕಂಬನಿ ಕಂಡೆ
ಗರ್ಭದ ಒಳಗು ಅಳುವನು ಕಂಡೆ
ಕೆಚ್ಚಲ ಹಾಲಲು ವಿಷವನು ಕಂಡೆ
ಕಬ್ಬಿನ ಎದೆಯಲಿ ಬೇವನು ಕಂಡೆ
ನಗುವಿನ ಹೆಸರಲಿ ನೋವನು ಕಂಡೆ
ಸಂಬಂಧಗಳಲಿ ಬಂಧನ ಕಂಡೆ 
ಬಂಧನ ಬಿಡಿಸುವ ಕಂಪನ ಕಂಡೆ
ಜೀವನಕ್ಕೊಂದು ಯೌವ್ವನ ಕಂಡೆ 
ಯೌವ್ವನಕ್ಕೊಂದು ಜೀವನ ಕಂಡೆ
ಚಪ್ಪಾಳೆಗಳಲ್ಲು ಸಿಡಿಲನು ಕಂಡೆ
ಬೆವರಿಳಿಸುವ ಬೆಳದಿಂಗಳ ಕಂಡೆ
ಅವುಡುಗಚ್ಚುವ ನಿದ್ರೆಯ ಕಂಡೆ
ಪಲ್ಲವಿ ಇರದ ಚರಣವ ಕಂಡೆ
ಗಂಡೆದೆಯಲ್ಲು ಗ್ರಹಣವ ಕಂಡೆ
ಸ್ವತಂತ್ರವಿಲ್ಲದ ಗಾಳಿಯ ಕಂಡೆ
ಬಾನೆ ಇಲ್ಲದ ಬಾನಾಡಿ ಕಂಡೆ
ಜಾತಕ ವಿಲ್ಲದ ಕನಸನು ಕಂಡೆ
ಜ್ಞಾಪಕ ವಿಲ್ಲದ ನೆನಪನು ಕಂಡೆ
ತೂಕವೆ ಇಲ್ಲದ ಮಾತನು ಕಂಡೆ
ಸಿಡಿಲೆರೆಯುವ ಬಿರುಮೌನವ ಕಂಡೆ
ಚೆಲುವಿನ ಮುಖದಲಿ ಕುರೂಪ ಕಂಡೆ
ಒಲವಿನ ವ್ಯಾಘ್ರ ಸ್ವರೂಪ ಕಂಡೆ
ರುಚಿಗಳೆ ಇಲ್ಲದ ಊಟವ ಕಂಡೆ
ಅಭಿರುಚಿ ಕಾಣದ ಪಾಠವ ಕಂಡೆ
ಅಳುವ ವಯಸ್ಸಲಿ ಆಸೆಯ ಕಂಡೆ
ಆಡೋ ವಯಸ್ಸಲಿ  ಅವನತಿ  ಕಂಡೆ
ಕಲಿಯೋ ವಯಸ್ಸಲಿ ಬಲಿಯನು ಕಂಡೆ
ಒಂಟಿತನದಲಿ ಗಾಯವ ಕಂಡೆ
ಜಂಟಿತನದಲಿ ಮಾಯಾವ ಕಂಡೆ
ನವಿಲು ಕಾಣದ ಗರಿಯನು ಕಂಡೆ
ಗುರುವೇ ಇಲ್ಲದ ಗುರಿಯನು ಕಂಡೆ
ಸೂರ್ಯನ ಕಣ್ಣಲಿ ತೇವವ ಕಂಡೆ
ಇರುಳಲಿ ಬೆಳಗಿನ ಜಾವವ ಕಂಡೆ
ರಾಜರು ಕಟ್ಟಿದ ಕೋಶವ ಕಂಡೆ
ಕೋಶವ ಮುರಿಯೊ ಶಾಸನ ಕಂಡೆ
ದಾಸರು ಕಾಣದ ಪದವನು ಕಂಡೆ
ಬಡತನಕಕಿಂತಲುಲೂ ಬಡತನ ಕಂಡೆ
ಧರ್ಮರಾಯನಲು ಸುಳ್ಳನು ಕಂಡೆ
ಆಂಜನೇಯನಲು ಅಹಂ ಕಂಡೆ
ತಾಯಿ ಮಾತಲು ತಪ್ಪನು ಕಂಡೆ
ಭುವನೇಶ್ವರಿಯಲು ಬೇಧವ ಕಂಡೆ
ನೆತ್ತರು ತುಂಬಿದ ಅನ್ನವ ಕಂಡೆ
ಹುಟ್ಟು ಸಾವಿನ ನಂಟನು ಕಂಡೆ
ಧಗೆಯಲಿ ಚಿಗುರಿನ ಸ್ಪರ್ಶ ಕಂಡೆ
ಹಗೆಯಲ್ಲಿ ಸಲ್ಲದ ಹರ್ಷ ಕಂಡೆ
ಸಹಿಸುವ ಆಸರೆಯೊಂದು ಕಂಡೆ
ದಹಿಸುವ ಧಮನಿಗಳನ್ನು ಕಂಡೆ
ಸ್ನೇಹದ ಕೋಟಿ ಪವಾಡ ಕಂಡೆ
ದ್ರೋಹದ ಹೊಸ ಮುಖವಾಡ ಕಂಡೆ
ಇಳಿಸಲು ಆಗದ ಹೊರೆಯನು ಕಂಡೆ
ಹಣೆ ಬರಹಕೆ ಪ್ರತಿ ಹೊಣೆಯನು ಕಂಡೆ
ಛಲದ ಮನಸ್ಸಿಗೆ ಚಾವಡಿ ಕಂಡೆ
ಮನಸ್ಸ ಕುಗ್ಗಿಸೊ ಲೇವಡಿ ಕಂಡೆ
ಸೋಲುಗಳಲ್ಲೆ ಗೆಲುವನು ಕಂಡೆ
ಗೆಲುವಲೆ ಸೋಲಿನ ರುಚಿಯನು ಕಂಡೆ
ಕಂಗಳ ಬಿರಿಯುವ ಕನ್ನಡಿ ಕಂಡೆ
ಬದುಕನೆ ಕಲುಕುವ ಮುನ್ನುಡಿ ಕಂಡೆ
ಇಳಿಜಾರಿನಲಿ ದಿಣ್ಣೆಯ ಕಂಡೆ
ದಿಣ್ಣೆಯಲಿ ಇಳಿಜಾರನು ಕಂಡೆ
ಹೆಣವನ ದಾರಿಯ ವೇಗವ ಕಂಡೆ
ಮೂಗನ ಎದೆಯಲು ರಾಗವ ಕಂಡೆ
ಮೂರ್ಖನ ಕೈಯಲ್ಲಿ ಮಾರ್ಗವ ಕಂಡೆ
ಕಾಲದ ಕೈಯಲ್ಲಿ ಖಡ್ಗವ ಕಂಡೆ
ಜೊತೆಯಲಿ ಬಾಳುವ ಕಥೆಗಳ ಕಂಡೆ
ಕಥೆಯಾಗಿರುವ ಜೊತೆಯ ಕಂಡೆ
ಜೀವನದುದ್ದಕು ನೋವನೆ ಕಂಡೆ
ಆದರು ಪ್ರೀತಿಯು ಕಾಣಲಿಲ್ಲ
ಭಯಸಿದ್ದೊಂದು ಸಿಗಲಿಲ್ಲ
ಸತ್ತು ಬದುಕೋ ಬದುಕೇಕಿನ್ನು
ಪ್ರೀತಿಸೊ ಮರಣ ಮರಣ ಕಂಡೇ... ಹೇ….

ಕಾರುಣ್ಯ ತುಂಬಿದ ಧಾರುಣಿ ಕಂಡೆ
ಶಾಂತಿಯ ಸಾರುವ ಬಾನನು ಕಂಡೆ
ಉಸಿರನು ಕಾಯುವ ಗಾಳಿಯ ಕಂಡೆ
ಬಾಳನು ಬೆಳಗುವ ಜ್ಯೋತಿಯ ಕಂಡೆ
ಕಾರುಣ್ಯ ತುಂಬಿದ ಧಾರುಣಿ ಕಂಡೆ
ಶಾಂತಿಯ ಸಾರುವ ಬಾನನು ಕಂಡೆ
ಉಸಿರನು ಕಾಯುವ ಗಾಳಿಯ ಕಂಡೆ
ಪಾಪವ ತೊಳೆಯುವ ಗಂಗೆಯ ಕಂಡೆ..ಛೀ…
 
ಕರುಣೆ ಇಲ್ಲದ ಧರಣಿಯ ಕಂಡೆ
ಕೆಂಡವ ಕಾರುವ ಗಗನವ ಕಂಡೆ
ವಿಷವನು ತೂರುವ ಗಾಳಿಯ ಕಂಡೆ
ಎದೆಯನು ಉರಿಸೊ ಬೆಂಕಿಯ ಕಂಡೆ
ಸುಳಿಯಲಿ ಮುಳುಗಿಸೊ ನೀರನು ಕಂಡೆ 
ಬೊಗಸೆಯ ನೀರಲು ಸುಳಿಯನು ಕಂಡೆ
ಹೂವಿನ ಎದೆಯೆಲಿ ಮುಳ್ಳನು ಕಂಡೆ
ಹಿಮದಲಿ ಜ್ವಾಲಮುಖಿಯನು ಕಂಡೆ
ರೆಕ್ಕೆಯ ಬಿಚ್ಚದ ಹಕ್ಕಿಯ ಕಂಡೆ
ಹಾಡಲು ಬಾರದ ಕೋಗಿಲೆ ಕಂಡೆ
ಮುತ್ತೆ ಇಲ್ಲದ ಕಡಲನು ಕಂಡೆ
ಗಂಧವ ಚೆಲ್ಲದ ಹೂಗಳ ಕಂಡೆ
ಜೇನನು ಹೀರದ ದುಂಬಿಯ ಕಂಡೆ
ದಿನಗಳ ನುಂಗುವ ಕ್ಷಣಗಳ ಕಂಡೆ
ದಿಕ್ಕುಗಳಿಲ್ಲದ ದಾರಿಯ ಕಂಡೆ
ದಾರಿಗಳಿಲ್ಲದ ದಿಕ್ಕನು ಕಂಡೆ
ಮೋಡದ ಹನಿಯಲು ಬೆವರನು ಕಂಡೆ
ಗಾಳಿಯ ಎದೆಯಲು ನಡುಕವ ಕಂಡೆ
ಮಳೆಯಬಿಲ್ಲಲು ಕೊಳೆಯನು ಕಂಡೆ
ಇಬ್ಬನಿ ಕಣ್ಣಲು ಕಂಬನಿ ಕಂಡೆ
ಗರ್ಭದ ಒಳಗು ಅಳುವನು ಕಂಡೆ
ಕೆಚ್ಚಲ ಹಾಲಲು ವಿಷವನು ಕಂಡೆ
ಕಬ್ಬಿನ ಎದೆಯಲಿ ಬೇವನು ಕಂಡೆ
ನಗುವಿನ ಹೆಸರಲಿ ನೋವನು ಕಂಡೆ
ಸಂಬಂಧಗಳಲಿ ಬಂಧನ ಕಂಡೆ 
ಬಂಧನ ಬಿಡಿಸುವ ಕಂಪನ ಕಂಡೆ
ಜೀವನಕ್ಕೊಂದು ಯೌವ್ವನ ಕಂಡೆ 
ಯೌವ್ವನಕ್ಕೊಂದು ಜೀವನ ಕಂಡೆ
ಚಪ್ಪಾಳೆಗಳಲ್ಲು ಸಿಡಿಲನು ಕಂಡೆ
ಬೆವರಿಳಿಸುವ ಬೆಳದಿಂಗಳ ಕಂಡೆ
ಅವುಡುಗಚ್ಚುವ ನಿದ್ರೆಯ ಕಂಡೆ
ಪಲ್ಲವಿ ಇರದ ಚರಣವ ಕಂಡೆ
ಗಂಡೆದೆಯಲ್ಲು ಗ್ರಹಣವ ಕಂಡೆ
ಸ್ವತಂತ್ರವಿಲ್ಲದ ಗಾಳಿಯ ಕಂಡೆ
ಬಾನೆ ಇಲ್ಲದ ಬಾನಾಡಿ ಕಂಡೆ
ಜಾತಕ ವಿಲ್ಲದ ಕನಸನು ಕಂಡೆ
ಜ್ಞಾಪಕ ವಿಲ್ಲದ ನೆನಪನು ಕಂಡೆ
ತೂಕವೆ ಇಲ್ಲದ ಮಾತನು ಕಂಡೆ
ಸಿಡಿಲೆರೆಯುವ ಬಿರುಮೌನವ ಕಂಡೆ
ಚೆಲುವಿನ ಮುಖದಲಿ ಕುರೂಪ ಕಂಡೆ
ಒಲವಿನ ವ್ಯಾಘ್ರ ಸ್ವರೂಪ ಕಂಡೆ
ರುಚಿಗಳೆ ಇಲ್ಲದ ಊಟವ ಕಂಡೆ
ಅಭಿರುಚಿ ಕಾಣದ ಪಾಠವ ಕಂಡೆ
ಅಳುವ ವಯಸ್ಸಲಿ ಆಸೆಯ ಕಂಡೆ
ಆಡೋ ವಯಸ್ಸಲಿ  ಅವನತಿ  ಕಂಡೆ
ಕಲಿಯೋ ವಯಸ್ಸಲಿ ಬಲಿಯನು ಕಂಡೆ
ಒಂಟಿತನದಲಿ ಗಾಯವ ಕಂಡೆ
ಜಂಟಿತನದಲಿ ಮಾಯಾವ ಕಂಡೆ
ನವಿಲು ಕಾಣದ ಗರಿಯನು ಕಂಡೆ
ಗುರುವೇ ಇಲ್ಲದ ಗುರಿಯನು ಕಂಡೆ
ಸೂರ್ಯನ ಕಣ್ಣಲಿ ತೇವವ ಕಂಡೆ
ಇರುಳಲಿ ಬೆಳಗಿನ ಜಾವವ ಕಂಡೆ
ರಾಜರು ಕಟ್ಟಿದ ಕೋಶವ ಕಂಡೆ
ಕೋಶವ ಮುರಿಯೊ ಶಾಸನ ಕಂಡೆ
ದಾಸರು ಕಾಣದ ಪದವನು ಕಂಡೆ
ಬಡತನಕಕಿಂತಲುಲೂ ಬಡತನ ಕಂಡೆ
ಧರ್ಮರಾಯನಲು ಸುಳ್ಳನು ಕಂಡೆ
ಆಂಜನೇಯನಲು ಅಹಂ ಕಂಡೆ
ತಾಯಿ ಮಾತಲು ತಪ್ಪನು ಕಂಡೆ
ಭುವನೇಶ್ವರಿಯಲು ಬೇಧವ ಕಂಡೆ
ನೆತ್ತರು ತುಂಬಿದ ಅನ್ನವ ಕಂಡೆ
ಹುಟ್ಟು ಸಾವಿನ ನಂಟನು ಕಂಡೆ
ಧಗೆಯಲಿ ಚಿಗುರಿನ ಸ್ಪರ್ಶ ಕಂಡೆ
ಹಗೆಯಲ್ಲಿ ಸಲ್ಲದ ಹರ್ಷ ಕಂಡೆ
ಸಹಿಸುವ ಆಸರೆಯೊಂದು ಕಂಡೆ
ದಹಿಸುವ ಧಮನಿಗಳನ್ನು ಕಂಡೆ
ಸ್ನೇಹದ ಕೋಟಿ ಪವಾಡ ಕಂಡೆ
ದ್ರೋಹದ ಹೊಸ ಮುಖವಾಡ ಕಂಡೆ
ಇಳಿಸಲು ಆಗದ ಹೊರೆಯನು ಕಂಡೆ
ಹಣೆ ಬರಹಕೆ ಪ್ರತಿ ಹೊಣೆಯನು ಕಂಡೆ
ಛಲದ ಮನಸ್ಸಿಗೆ ಚಾವಡಿ ಕಂಡೆ
ಮನಸ್ಸ ಕುಗ್ಗಿಸೊ ಲೇವಡಿ ಕಂಡೆ
ಸೋಲುಗಳಲ್ಲೆ ಗೆಲುವನು ಕಂಡೆ
ಗೆಲುವಲೆ ಸೋಲಿನ ರುಚಿಯನು ಕಂಡೆ
ಕಂಗಳ ಬಿರಿಯುವ ಕನ್ನಡಿ ಕಂಡೆ
ಬದುಕನೆ ಕಲುಕುವ ಮುನ್ನುಡಿ ಕಂಡೆ
ಇಳಿಜಾರಿನಲಿ ದಿಣ್ಣೆಯ ಕಂಡೆ
ದಿಣ್ಣೆಯಲಿ ಇಳಿಜಾರನು ಕಂಡೆ
ಹೆಣವನ ದಾರಿಯ ವೇಗವ ಕಂಡೆ
ಮೂಗನ ಎದೆಯಲು ರಾಗವ ಕಂಡೆ
ಮೂರ್ಖನ ಕೈಯಲ್ಲಿ ಮಾರ್ಗವ ಕಂಡೆ
ಕಾಲದ ಕೈಯಲ್ಲಿ ಖಡ್ಗವ ಕಂಡೆ
ಜೊತೆಯಲಿ ಬಾಳುವ ಕಥೆಗಳ ಕಂಡೆ
ಕಥೆಯಾಗಿರುವ ಜೊತೆಯ ಕಂಡೆ
ಜೀವನದುದ್ದಕು ನೋವನೆ ಕಂಡೆ
ಆದರು ಪ್ರೀತಿಯು ಕಾಣಲಿಲ್ಲ
ಭಯಸಿದ್ದೊಂದು ಸಿಗಲಿಲ್ಲ
ಸತ್ತು ಬದುಕೋ ಬದುಕೇಕಿನ್ನು
ಪ್ರೀತಿಸೊ ಮರಣ ಮರಣ ಕಂಡೇ... ಹೇ….

Karuneya Illada song lyrics from Kannada Movie Asura starring Shivarajkumar, Damini, Raghuvaran, Lyrics penned by K Kalyan Sung by Rajesh Krishnan, Nanditha, Music Composed by Gurukiran, film is Directed by S Mahendar and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ