Pathra Bareyala Lyrics

in Aramane

Video:

LYRIC

ಪತ್ರ ಬರೆಯಲ... ಇಲ್ಲ ಚಿತ್ರ ಬಿಡಿಸಲ....
ಹೇಗೆ ಹೇಳಲಿ ನನ್ನ ಮನದ ಹಂಬಲ
ಮಾತನಾಡಲ... ಇಲ್ಲ ಹಾಡು ಹಾಡಲ.....
ಹೇಗೆ ತಿಳಿಸಲಿ ನನ್ನ ಎದೆಯ ತಳಮಳ 
ಪತ್ರ ಬರೆಯಲ..

ಬೊಗಸೇಲಿ ಹಿಡಿದು ನಿನ್ನ ಮುದ್ದಾದ ಮೊಗವನ್ನ
ನೋಡುತ್ತ ಹಾಗೆ ನಿನ್ನ ಕಣ್ಣಲ್ಲೆ ಕರಗೊ ಆಸೆ
ಮಗುವಾಗಿ ಸುಮ್ಮನೆ ನಿನ್ನ ಮಡಿಲಲ್ಲಿ ಮಲಗಿಸೊ ಮುನ್ನ
ಬೆಚ್ಚಗೆ ಎದೆಯಲ್ಲಿ ನಾ ಬಚ್ಚಿ ಕೂರುವಾಸೆ
ನಗುವಾಗಲ ನೆರಳಾಗಲ ಉಸಿರಾಗಲ....
ಐ ಲವ್ ಯು ಲವ್ ಯು ಲವ್ ಯು ಗೆಳೆಯ..
 
||ಪತ್ರ ಬರೆಯಲ... ಇಲ್ಲ ಚಿತ್ರ ಬಿಡಿಸಲ....
ಹೇಗೆ ಹೇಳಲಿ ನನ್ನ ಮನದ ಹಂಬಲ||
||ಪತ್ರ ಬರೆಯಲ... ||

ನುಣುಪಾದ ಪಾದಗಳನ್ನ ನೆಲವನ್ನು ಸೋಕುವ ಮುನ್ನ
ಅಂಗೈಯ ಚಾಚಿ ನಿನ್ನ ನಾ ನಡೆಸುವಾಸೆ
ಜೊತೆಯಾಗಿ ಇದ್ದರೆ ನಾವು ಒಂದೊಮ್ಮೆ ಬಂದರು ಸಾವು
ನಗುನಗುತ ಅಲ್ಲೇ ಅದನು ಸ್ವೀಕರಿಸುವಾಸೆ
ಯುಗದಾಚೆಗು ಜಗದಾಚೆಗು ಜೊತೆಯಾಗಿರೂ
ಐ ಲವ್ ಯು ಲವ್ ಯು ಲವ್ ಯು ಗೆಳೆಯ..
 
||ಪತ್ರ ಬರೆಯಲ... ಇಲ್ಲ ಚಿತ್ರ ಬಿಡಿಸಲ....
ಹೇಗೆ ಹೇಳಲಿ ನನ್ನ ಮನದ ಹಂಬಲ
ಮಾತನಾಡಲ... ಇಲ್ಲ ಹಾಡು ಹಾಡಲ.....
ಹೇಗೆ ತಿಳಿಸಲಿ ನನ್ನ ಎದೆಯ ತಳಮಳ  ||
 
||ಪತ್ರ ಬರೆಯಲ..||

Pathra Bareyala song lyrics from Kannada Movie Aramane starring Ganesh, Ananthnag, Sumithra, Lyrics penned by Kaviraj Sung by Karthik, Shwetha, Music Composed by Gurukiran, film is Directed by Nagshekar and film is released on 2008