Nagali Nagali Madhadalli Lyrics

in Anthintha Gandu Nanalla

Video:

LYRIC

-
ನಗಲಿ ನಗಲಿ ಮದದಲ್ಲಿ ಅಹಂಕಾರದ ಅಮಲಲ್ಲಿ
ಬಿಡದ ಛಲದ ಉರಿಬೆಂಕಿ ಕಿಡಿಕಾರಲಿ ಎದೆಯಲ್ಲಿ
ನಗುವ ಜನರು ಅಳುವ ದಿನವು
ಸನಿಹ ಇಹುದು ತ್ವರೆಯೆಬಹುದು
ಅನುಮಾನ ಬಿಡು ಹೊಸಹೆಜ್ಜೆ ಇಡು
ನೀ ಸೇಡಿನ ಬಾಣಕೊಡು  
 
ನಗಲಿ ನಗಲಿ ಮದದಲ್ಲಿ ಅಹಂಕಾರದ ಅಮಲಲ್ಲಿ
ಬಿಡದ ಛಲದ ಉರಿಬೆಂಕಿ ಕಿಡಿಕಾರಲಿ ಎದೆಯಲ್ಲಿ
ನಗುವ ಜನರು ಅಳುವ ದಿನವು
ಸನಿಹ ಇಹುದು ತ್ವರೆಯೆಬಹುದು
ಅನುಮಾನ ಬಿಡು ಹೊಸಹೆಜ್ಜೆ ಇಡು
ನೀ ಸೇಡಿನ ಬಾಣಕೊಡು  
 
ನೀತಿಗೆ ಸಂಕಲೆ ತೊಡಿಸಿ ಸೆರೆಮಾಡುವ ವಂಚಕರು
ಬೆನ್ನಿಗೆ ಚೂರಿಯ ಹಾಕಿ ಕೊಲೆ ಮಾಡುವ ಘಾತುಕರು
ಅಧಿಕಾರ ಸೂತ್ರವಿದೆ ದುಷ್ಟರ ಕೈಯಲ್ಲಿ
ಸತ್ಯವದು ನಾಡುತ್ತಿದೆ ಮೋಸದ ಉರುಳಲ್ಲಿ
ಸ್ನೇಹಿತ ಆಗಿ ನೀ ಕಲಿಯು ಶಾಂತಿ ಪಥ ಬೇಡ
ದ್ರೋಹಕೆ ಆಗು ನೀ ಕಲಿಯು ಕ್ರಾಂತಿಯ ರಥ ಹೂಡ
ವೈರಿಗಳ ಸದೆಬಡೆಯುತಲಿ
ಧರ್ಮ ಧ್ವಜ ನೀಹಾರಿಸು ಬಾ ವಿಜಯದ ತೇರಿನಲಿ
 
||ನಗಲಿ ನಗಲಿ ಮದದಲ್ಲಿ ಅಹಂಕಾರದ ಅಮಲಲ್ಲಿ
ಬಿಡದ ಛಲದ ಉರಿಬೆಂಕಿ ಕಿಡಿಕಾರಲಿ ಎದೆಯಲ್ಲಿ
ನಗುವ ಜನರು ಅಳುವ ದಿನವು
ಸನಿಹ ಇಹುದು ತ್ವರೆಯೆಬಹುದು
ಅನುಮಾನ ಬಿಡು ಹೊಸಹೆಜ್ಜೆ ಇಡು
ನೀ ಸೇಡಿನ ಬಾಣಕೊಡು||
 
||ನಗಲಿ ನಗಲಿ ಮದದಲ್ಲಿ ಅಹಂಕಾರದ ಅಮಲಲ್ಲಿ
ಬಿಡದ ಛಲದ ಉರಿಬೆಂಕಿ ಕಿಡಿಕಾರಲಿ ಎದೆಯಲ್ಲಿ||
 
ನ್ಯಾಯದೇವತೆ ಕಣ್ಣು ಕುರುಡಾಗಿದೆ ಕತ್ತಲಲಿ
ಶಾಂತಿಯ ನಾಡಿನ ಮಣ್ಣು ಅದು ಕೊಯ್ದಿದೆ ನೆತ್ತರಲಿ
ನಿನೊಳಗೆ ರೋಷವದು ಏಳಲಿ ಭುಗಿಲೆದ್ದು
ಹೊಮ್ಮಿರಲಿ ದ್ವೇಷವದು ಸರ್ರನೆ ಸಿಡಿದೆದ್ದು
ಧೈರ್ಯದಿ ನುಗ್ಗುತ ಆಗು ನೀ ನೂತನ ನೀತಿ ಪತಿ
ಅಂಜಿಕೆಯಿಲ್ಲದೆ ನೀಡು ಎಲ್ಲ ತಪ್ಪಿಗೆ ನೀ ಶಾಸ್ತಿ
ಬೆಂಕಿ ಹೊಳೆ ನೀ ಹರಿಸುತ ಬಾ
ಕಲ್ಕಿಯೊಳು ಅವತರಿಸುತ ಬಾ ಧರ್ಮವ ಸ್ಥಾಪಿಸಲು
 
||ನಗಲಿ ನಗಲಿ ಮದದಲ್ಲಿ ಅಹಂಕಾರದ ಅಮಲಲ್ಲಿ
ಬಿಡದ ಛಲದ ಉರಿಬೆಂಕಿ ಕಿಡಿಕಾರಲಿ ಎದೆಯಲ್ಲಿ
ನಗುವ ಜನರು ಅಳುವ ದಿನವು
ಸನಿಹ ಇಹುದು ತ್ವರೆಯೆಬಹುದು
ಅನುಮಾನ ಬಿಡು ಹೊಸಹೆಜ್ಜೆ ಇಡು
ನೀ ಸೇಡಿನ ಬಾಣಕೊಡು||

Nagali Nagali Madhadalli song lyrics from Kannada Movie Anthintha Gandu Nanalla starring Ambarish, Shankarnag, Nishanthi, Lyrics penned by R N Jayagopal Sung by S P Balasubrahmanyam, Chorus, Music Composed by Vijayanand, film is Directed by Srinivas and film is released on 1989