Hrudaya Veene Midiye Thaane Lyrics

in Annapoorna

LYRIC

ಹೂಂಹೂಂ ...  ಆಆಆ....
ಹೃದಯವೀಣೆ ಮಿಡಿಯೆ ತಾನೆ
ಹೃದಯವೀಣೆ ಮಿಡಿಯೆ ತಾನೆ
ಕಾರಣ ನೀನೆ ಜಾಣೆ
ಕಾರಣ ನೀನೆ ಜಾಣೆ 

|| ಹೃದಯವೀಣೆ ಮಿಡಿಯೆ
ತಾನೆ ಕಾರಣ ನೀನೆ ಜಾಣೆ
ಕಾರಣ ನೀನೆ ಜಾಣೆ….|| 
 
ಬಿದುರಿನ ಕೊಳಲು ಗಾನದ ಹೊನಲು
ಹರಿಸದೇ ಕೃಷ್ಣನ ಕರ ಸೋಕಲು ...
ಬಿದುರಿನ ಕೊಳಲು ಗಾನದ ಹೊನಲು
ಹರಿಸದೇ ಕೃಷ್ಣನ ಕರ ಸೋಕಲು ...
ಚಂದ್ರನ ಕಾಣಲು ಮೊರೆಯದೆ ಕಡಲು
ತಿಂಗಳ ಬೆಳಕಿನ ರಾತ್ರಿಯೊಳು....

|| ಹೃದಯವೀಣೆ ಮಿಡಿಯೆ
ತಾನೆ ಕಾರಣ ನೀನೆ ಜಾಣೆ
ಕಾರಣ ನೀನೆ ಜಾಣೆ….|| 
 
ಚೈತ್ರ ಮಾಸದೊಳು ಮಾವು ಚಿಗುರಲು
ಕೋಗಿಲೆ ಹಾಡದೆ ಹರುಷದೊಳು... 
ಚೈತ್ರ ಮಾಸದೊಳು ಮಾವು ಚಿಗುರಲು
ಕೋಗಿಲೆ ಹಾಡದೆ ಹರುಷದೊಳು... 
ಹೂವು ಅರಳಲೂ ಕಂಪು ಚೆಲ್ಲಲು
ದುಂಬಿ ನಲಿಯದೆ ಗಾನದೋಳು

|| ಹೃದಯವೀಣೆ ಮಿಡಿಯೆ
ತಾನೆ ಕಾರಣ ನೀನೆ ಜಾಣೆ
ಕಾರಣ ನೀನೆ ಜಾಣೆ

ಹೃದಯವೀಣೆ ಮಿಡಿಯೆ
ತಾನೆ ಕಾರಣ ನೀನೆ ಜಾಣೆ
ಕಾರಣ ನೀನೆ ಜಾಣೆ…..||

Hrudaya Veene Midiye Thaane song lyrics from Kannada Movie Annapoorna starring K S Ashwath, M Pandari Bai, Dr Rajkumar, Lyrics penned by Chi Udayashankar Sung by P B Srinivas, Music Composed by Rajan-Nagendra, film is Directed by Aroor Pattabhi and film is released on 1964