Anna Andre Nammanna Lyrics

in Anna Andre Nammanna

LYRIC

-
ಅಣ್ಣ ಅಂದ್ರೆ ನಮ್ಮಣ್ಣ ಎನ್ನುವ ಈ ತಂಗ್ಯವ್ವ
ತಂಗಿ ಅಂದ್ರೆ ನನ್‌ ತಂಗಿ ಎನ್ನುವ ಈ ಅಣ್ಣಯ್ಯ
ಒಂದೇ ಬಳ್ಳಿಯ ಹೂಗಳನ್ನು ವಿಧಿಯು ದೂರ ಮಾಡಿತಲ್ಲ
ಒಂದೇ ಬಳ್ಳಿಯ ಹೂಗಳನ್ನು ವಿಧಿಯು ದೂರ ಮಾಡಿತಲ್ಲ
ಅಣ್ಣ ಅಂದ್ರೆ ನಮ್ಮಣ್ಣ ಎನ್ನುವ ಈ ತಂಗ್ಯವ್ವ
 
ಒಂದೇ ತಾಯಿಯ ಹಾಲನುಂಡ ಅಣ್ಣ ತಂಗಿಯು ದೂರವಾಗಿ
ಎದುರು ಬದುರು ಬಂದರೂನು ಗುರುತು ಸಿಗದೆ ನರಳುತ್ತಾರೆ
ಸೇರೊ ಆಸೆ ಮೂಡಿದಾಗ ದಾರಿ ಬೇರೆ ಆದಗಲ್ಲ
 
||ಅಣ್ಣ ಅಂದ್ರೆ ನಮ್ಮಣ್ಣ ಎನ್ನುವ ಈ ತಂಗ್ಯವ್ವ
ತಂಗಿ ಅಂದ್ರೆ ನನ್‌ ತಂಗಿ ಎನ್ನುವ ಈ ಅಣ್ಣಯ್ಯ||
 
ಕಂಗಳ ಮುಂದೆ ಗೊಂಬೆಯೊಂದೆ ಆಸೆಗಳೆಲ್ಲ ಹಿಂದೆ ಹಿಂದೆ
ತಂಗಿಯಾಡಿದ ತುಂಟ ಆಟ ಅಣ್ಣನ ದಿನವು ಕಾಡಿಹುದೆ
ಎಲ್ಲೆ ಇರಲಿ ಹೇಗೆ ಇರಲಿ ಸೇರೊ ಆಸೆ ಮೂಡಿದೆ
 
||ಅಣ್ಣ ಅಂದ್ರೆ ನಮ್ಮಣ್ಣ ಎನ್ನುವ ಈ ತಂಗ್ಯವ್ವ
ತಂಗಿ ಅಂದ್ರೆ ನನ್‌ ತಂಗಿ ಎನ್ನುವ ಈ ಅಣ್ಣಯ್ಯ
ಒಂದೇ ಬಳ್ಳಿಯ ಹೂಗಳನ್ನು ವಿಧಿಯು ದೂರ ಮಾಡಿತಲ್ಲ
ಒಂದೇ ಬಳ್ಳಿಯ ಹೂಗಳನ್ನು ವಿಧಿಯು ದೂರ ಮಾಡಿತಲ್ಲ||
 
||ಅಣ್ಣ ಅಂದ್ರೆ ನಮ್ಮಣ್ಣ ಎನ್ನುವ ಈ ತಂಗ್ಯವ್ವ||
 

Anna Andre Nammanna song lyrics from Kannada Movie Anna Andre Nammanna starring Jaggesh, Kusuma, Usha, Lyrics penned bySung by Ramesh Chandra, Music Composed by V Manohar, film is Directed by J Balaram and film is released on 1997