Akkandhira Lyrics

ಅಕ್ಕಂದಿರ Lyrics

in Agni Panjara

in ಅಗ್ನಿ ಪಂಜರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಕ್ಕಂದಿರ ತಂಗೀರ ಸೋದರಿಯ ಮೊರೆಯ ಕೇಳಿರಿ
ಸೋದರಿಯ ಮೊರೆಯ ಕೇಳಿರಿ
ಕುಂಕುಮದ ಭಾಗ್ಯವನು ಕರುಣೆಯಲಿ ನೀವು ನೀಡಿರಿ
ಕರುಣೆಯಲಿ ನೀವು ನೀಡಿರಿ
ವಿಧಿ ಜೊತೆ ನಡೆಸಿಹೆ ನಾನು ಯುದ್ಧವ
ಕರಿಮಣಿ ಕರುಣಿಸಿ ಉಳಿಸಿ ಜೀವವ
ವಿಧಿ ಜೊತೆ ನಡೆಸಿಹೆ ನಾನು ಯುದ್ಧವ
ಕರಿಮಣಿ ಕರುಣಿಸಿ ಉಳಿಸಿ ಜೀವವ
ಅಕ್ಕಂದಿರ ತಂಗೀರ ಸೋದರಿಯ ಮೊರೆಯ ಕೇಳಿರಿ
ಸೋದರಿಯ ಮೊರೆಯ ಕೇಳಿರಿ
 
ಇರುಳು ಬಳಿಕ ಮುಂಜಾನೆಯು ಬರುವುದೆಂಬರು
ಮುಂಜಾನೆಯ ಆಸೆ ತೋರಿ ಇರುಳು ಮುಸುಕಿತು
ಕಣ್ಣೀರಿನ ಕಡಲ ಮೇಲೆ ನಾನು ತೇಲಿದೆ
ತೀರ ಹುಡುಕೊ ಸಮಯದಲ್ಲಿ ನೌಕೆ ಮುಳುಗಿದೆ
ಕಾಪಾಡುವ ದೈವ ಅದೆ ಆಟವಾಡಿದೆ
ಕಷ್ಟ ನೀಡಿ ಮನುಜರಿಗೆ ತಾನು ನಕ್ಕಿದೆ
ಭರವಸೆಯು ಮನಸ್ಸಿನಿಂದ ದೂರವಾಗಿದೆ
 
||ಅಕ್ಕಂದಿರ ತಂಗೀರ ಸೋದರಿಯ ಮೊರೆಯ ಕೇಳಿರಿ
ಸೋದರಿಯ ಮೊರೆಯ ಕೇಳಿರಿ||
 
ಮಮತೆ ಸ್ನೇಹ ಆಲಯವು ಹೆಣ್ಣ ಹೃದಯವು
ಪರರ ನೋವ ಕಂಡು ಅವರ ಮನಸ್ಸು ತಾಳವು
ಈ ಹೆಣ್ಣಿನ ಸಂಕಟವ ನೀಗ ಬನ್ನಿರಿ
ಸಂಜೀವಿನಿ ನಿಮ್ಮ ಕೊರಳಮಣಿಯೆ ನೋಡಿರಿ
ಸೆರಗನೊಡ್ಡಿ ಬೇಡಿಹೆನು ತಾಳಿಯ ಭಿಕ್ಷೆ
ಹೆಣ್ಣೆ ಹೆಣ್ಣ ಸಲಹದಿರೆ ಇಲ್ಲವೊ ರಕ್ಷೆ
ಅವರ ಜೀವ ನಿಮ್ಮ ಕೈಲಿ ನೀಡಿ ಮಣಿಯನು
 
ಜಯ ಶಿವಶಂಕರಿ ಜಯ ಅಭಯಂಕರಿ
ಸಲಹಲು ನೀ ಬಾರೆ
ಜಯ ಶ್ರೀಲಕ್ಷ್ಮಿ ಜಯ ವರಲಕ್ಷ್ಮಿ ಅರಿಶಿನ ನೀ ತಾರೆ
ಜಯ ಶ್ರೀ ಗೌರಿ ಜಯ ಮಾಹೇಶ್ವರಿ ಪೊರೆಯೆ ಪತಿಯನ್ನು
ರಾಘವೇಂದ್ರರೆ ಆಶ್ರಯ ನೀಡಿ ನೀವು ನಂಗಿನ್ನು
ಶಾಂಭವಿ ಣಿ ತಾಯೆ ರಕ್ಷಿಸು ಮಹಾಮಾಯೆ
ಸಲಹೊ ಶುಭಕಾಯೆ ಶಂಕರಿ ಓ ತಾಯೆ
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ

-
ಅಕ್ಕಂದಿರ ತಂಗೀರ ಸೋದರಿಯ ಮೊರೆಯ ಕೇಳಿರಿ
ಸೋದರಿಯ ಮೊರೆಯ ಕೇಳಿರಿ
ಕುಂಕುಮದ ಭಾಗ್ಯವನು ಕರುಣೆಯಲಿ ನೀವು ನೀಡಿರಿ
ಕರುಣೆಯಲಿ ನೀವು ನೀಡಿರಿ
ವಿಧಿ ಜೊತೆ ನಡೆಸಿಹೆ ನಾನು ಯುದ್ಧವ
ಕರಿಮಣಿ ಕರುಣಿಸಿ ಉಳಿಸಿ ಜೀವವ
ವಿಧಿ ಜೊತೆ ನಡೆಸಿಹೆ ನಾನು ಯುದ್ಧವ
ಕರಿಮಣಿ ಕರುಣಿಸಿ ಉಳಿಸಿ ಜೀವವ
ಅಕ್ಕಂದಿರ ತಂಗೀರ ಸೋದರಿಯ ಮೊರೆಯ ಕೇಳಿರಿ
ಸೋದರಿಯ ಮೊರೆಯ ಕೇಳಿರಿ
 
ಇರುಳು ಬಳಿಕ ಮುಂಜಾನೆಯು ಬರುವುದೆಂಬರು
ಮುಂಜಾನೆಯ ಆಸೆ ತೋರಿ ಇರುಳು ಮುಸುಕಿತು
ಕಣ್ಣೀರಿನ ಕಡಲ ಮೇಲೆ ನಾನು ತೇಲಿದೆ
ತೀರ ಹುಡುಕೊ ಸಮಯದಲ್ಲಿ ನೌಕೆ ಮುಳುಗಿದೆ
ಕಾಪಾಡುವ ದೈವ ಅದೆ ಆಟವಾಡಿದೆ
ಕಷ್ಟ ನೀಡಿ ಮನುಜರಿಗೆ ತಾನು ನಕ್ಕಿದೆ
ಭರವಸೆಯು ಮನಸ್ಸಿನಿಂದ ದೂರವಾಗಿದೆ
 
||ಅಕ್ಕಂದಿರ ತಂಗೀರ ಸೋದರಿಯ ಮೊರೆಯ ಕೇಳಿರಿ
ಸೋದರಿಯ ಮೊರೆಯ ಕೇಳಿರಿ||
 
ಮಮತೆ ಸ್ನೇಹ ಆಲಯವು ಹೆಣ್ಣ ಹೃದಯವು
ಪರರ ನೋವ ಕಂಡು ಅವರ ಮನಸ್ಸು ತಾಳವು
ಈ ಹೆಣ್ಣಿನ ಸಂಕಟವ ನೀಗ ಬನ್ನಿರಿ
ಸಂಜೀವಿನಿ ನಿಮ್ಮ ಕೊರಳಮಣಿಯೆ ನೋಡಿರಿ
ಸೆರಗನೊಡ್ಡಿ ಬೇಡಿಹೆನು ತಾಳಿಯ ಭಿಕ್ಷೆ
ಹೆಣ್ಣೆ ಹೆಣ್ಣ ಸಲಹದಿರೆ ಇಲ್ಲವೊ ರಕ್ಷೆ
ಅವರ ಜೀವ ನಿಮ್ಮ ಕೈಲಿ ನೀಡಿ ಮಣಿಯನು
 
ಜಯ ಶಿವಶಂಕರಿ ಜಯ ಅಭಯಂಕರಿ
ಸಲಹಲು ನೀ ಬಾರೆ
ಜಯ ಶ್ರೀಲಕ್ಷ್ಮಿ ಜಯ ವರಲಕ್ಷ್ಮಿ ಅರಿಶಿನ ನೀ ತಾರೆ
ಜಯ ಶ್ರೀ ಗೌರಿ ಜಯ ಮಾಹೇಶ್ವರಿ ಪೊರೆಯೆ ಪತಿಯನ್ನು
ರಾಘವೇಂದ್ರರೆ ಆಶ್ರಯ ನೀಡಿ ನೀವು ನಂಗಿನ್ನು
ಶಾಂಭವಿ ಣಿ ತಾಯೆ ರಕ್ಷಿಸು ಮಹಾಮಾಯೆ
ಸಲಹೊ ಶುಭಕಾಯೆ ಶಂಕರಿ ಓ ತಾಯೆ
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ

Akkandhira song lyrics from Kannada Movie Agni Panjara starring Devaraj, Vinaya Prasad, Keerthiraj, Lyrics penned by R N Jayagopal Sung by B R Chaya, Music Composed by , film is Directed by Srinivas and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ