-
ಉಸಿರೆ ಆಡದೆ ಕುಳಿತರೆ ಬದುಕಲು ಸಾಧ್ಯವೇ
ಪ್ರೀತಿ ನೀಡಲು ಮರೆತರೆ ಬದುಕಿದು ವ್ಯರ್ಥವೆ
ಯಾರಾದರೇನು ನೀ ಪ್ರೀತಿಸು ಕೂಗಿಟ್ಟರೆ ಕೈ ಜೋಡಿಸು
ತ್ಯಾಗವಿಲ್ಲಿ ಜೀವನ
ನಿನ್ನೆ ಮರೆತರೆ ಸಿಕ್ಕದು ಅರ್ಥವು ಬಾಳಿಗೆ
ಏಣಿ ಇದ್ದರು ಕೊನೆಯಲ್ಲಿ ಹೋಗುವೆ ಎಲ್ಲಿಗೆ
ಹೃದಯದಿಂದ ಮೂಡುವ ಪ್ರೀತಿ ಅಲೆಯು ಹರಿಯಲಿ
ಸ್ನೇಹದಿಂದ ಸಾಗುವ ಮನದ ಒಳಗೆ ಬೆಳಕು ಚೆಲ್ಲಿ
ಕಣ್ಣರಸಿ ಕೇಳುವುದೆ ಪ್ರೀತಿ ನೋವಲ್ಲು ನಗಿಸುವುದೆ ಪ್ರೀತಿ
ಸತ್ತರು ಸಾಯದು ಈ ಪ್ರೀತಿ ತಾಯ್ಮಡಿಲ ಪ್ರೀತಿ
ಪ್ರಾಣವು ದೈವಿಕ ದೇಹಕೆ ನಾವಿಕ
ದೇವರ ಸೇವಕ ಆದರೆ ಸಾರ್ಥಕ
ನಿನ್ನೆ ಮರೆತರೆ ಸಿಕ್ಕದು ಅರ್ಥವು ಬಾಳಿಗೆ
ಎಷ್ಟೇ ಇದ್ದರು ಕೊನೆಯಲ್ಲಿ ಹೋಗುವೆ ಮಣ್ಣಿಗೆ
ಸ್ವಾರ್ಥ ಎಂಬ ಸುಳಿಯಲಿ ಪ್ರೀತಿ ಎಂದು ಬದುಕದು
ಹೃದಯದಲ್ಲಿ ನಂಬಿಕೆ ಬೇಕೆ ಬೇಕು ಸಾಗುತಿರಲು
ಮಳೆಯನ್ನು ಮುದ್ದಿಸಲು ಸಿಡಿಲು
ನದಿಯನ್ನು ಮುಟ್ಟಿತು ಹನಿ ಒಡಲು
ಕೈ ಬೀಸಿ ಕರೆಯುವುದು ಕಡಲು
ಇದೇ ಪ್ರೀತಿಯ ಹೊನಲು
ಸ್ನೇಹವು ಮೋಹಕ ಕರುಣೆಯ ನಾಯಕ
ಎದೆಬಡಿತವು ಭಾವುಕ ನವಭಾವದ ಮಾಪಕ
ಕೇಳು ನಿನ್ನನೆ ಮೆಲ್ಲನೆ ಪ್ರೀತಿಯು ಎಲ್ಲಿದೆ
ಪ್ರಾಣ ಹೋಗುವ ಮುನ್ನವೆ ಹುಡುಕಿಕೊ ಎಂದಿದೆ…..
-
ಉಸಿರೆ ಆಡದೆ ಕುಳಿತರೆ ಬದುಕಲು ಸಾಧ್ಯವೇ
ಪ್ರೀತಿ ನೀಡಲು ಮರೆತರೆ ಬದುಕಿದು ವ್ಯರ್ಥವೆ
ಯಾರಾದರೇನು ನೀ ಪ್ರೀತಿಸು ಕೂಗಿಟ್ಟರೆ ಕೈ ಜೋಡಿಸು
ತ್ಯಾಗವಿಲ್ಲಿ ಜೀವನ
ನಿನ್ನೆ ಮರೆತರೆ ಸಿಕ್ಕದು ಅರ್ಥವು ಬಾಳಿಗೆ
ಏಣಿ ಇದ್ದರು ಕೊನೆಯಲ್ಲಿ ಹೋಗುವೆ ಎಲ್ಲಿಗೆ
ಹೃದಯದಿಂದ ಮೂಡುವ ಪ್ರೀತಿ ಅಲೆಯು ಹರಿಯಲಿ
ಸ್ನೇಹದಿಂದ ಸಾಗುವ ಮನದ ಒಳಗೆ ಬೆಳಕು ಚೆಲ್ಲಿ
ಕಣ್ಣರಸಿ ಕೇಳುವುದೆ ಪ್ರೀತಿ ನೋವಲ್ಲು ನಗಿಸುವುದೆ ಪ್ರೀತಿ
ಸತ್ತರು ಸಾಯದು ಈ ಪ್ರೀತಿ ತಾಯ್ಮಡಿಲ ಪ್ರೀತಿ
ಪ್ರಾಣವು ದೈವಿಕ ದೇಹಕೆ ನಾವಿಕ
ದೇವರ ಸೇವಕ ಆದರೆ ಸಾರ್ಥಕ
ನಿನ್ನೆ ಮರೆತರೆ ಸಿಕ್ಕದು ಅರ್ಥವು ಬಾಳಿಗೆ
ಎಷ್ಟೇ ಇದ್ದರು ಕೊನೆಯಲ್ಲಿ ಹೋಗುವೆ ಮಣ್ಣಿಗೆ
ಸ್ವಾರ್ಥ ಎಂಬ ಸುಳಿಯಲಿ ಪ್ರೀತಿ ಎಂದು ಬದುಕದು
ಹೃದಯದಲ್ಲಿ ನಂಬಿಕೆ ಬೇಕೆ ಬೇಕು ಸಾಗುತಿರಲು
ಮಳೆಯನ್ನು ಮುದ್ದಿಸಲು ಸಿಡಿಲು
ನದಿಯನ್ನು ಮುಟ್ಟಿತು ಹನಿ ಒಡಲು
ಕೈ ಬೀಸಿ ಕರೆಯುವುದು ಕಡಲು
ಇದೇ ಪ್ರೀತಿಯ ಹೊನಲು
ಸ್ನೇಹವು ಮೋಹಕ ಕರುಣೆಯ ನಾಯಕ
ಎದೆಬಡಿತವು ಭಾವುಕ ನವಭಾವದ ಮಾಪಕ
ಕೇಳು ನಿನ್ನನೆ ಮೆಲ್ಲನೆ ಪ್ರೀತಿಯು ಎಲ್ಲಿದೆ
ಪ್ರಾಣ ಹೋಗುವ ಮುನ್ನವೆ ಹುಡುಕಿಕೊ ಎಂದಿದೆ…..