Bare Nanna Lyrics

in Aadarsha

Video:

LYRIC

-
ಹೇ..ಲಲಲಲಲಲಲಲಾಲಾಲಾಲರಲಾಲ
ಹೇ..ಲಲಲಲಲಲಲಲಾಲಾಲಾಲರಲಾಲ

ಬಾರೇ ನನ್ನ ರಾಜಕುಮಾರಿ
ನೀರೇ ನನ್ನ ಪ್ರೇಮದ ಕೋರಿ

ಮಾರ.. ನನ್ನ ರಾಜಕುಮಾರ
ಬಾರಾ ನಿನಗೇ ಹಾಕುವೆ ಹಾರ
ಹೂವಿನ ನೋಟದಿ ಕೊಲ್ಲುವ ಬಾಣವೂ
ನುಂಗುವ ನೋಟವೇ ಹೂವಿನ ಬಾಣವೂ
ಪರವಶಗೊಳಿಸುವ ಪ್ರಕೃತಿಯ ಮಡಿಲಲಿ
ಈ ದಿನ ತನುಮನ ನಲಿಯಲೀ ..

||ಬಾರೇ ನನ್ನ ರಾಜಕುಮಾರಿ
ಮಾರ.. ನನ್ನ ರಾಜಕುಮಾರ||

ಪ್ರಣಯ ಗಂಗೆಯಲಿ ಮುಳುಗಿ ತೇಲುತಲಿ
ಮದನ ಮಂದಿರವ ಸೇರೋಣ
ಪ್ರಣಯ ಗಂಗೆಯಲಿ ಮುಳುಗಿ ತೇಲುತಲಿ
ಮದನ ಮಂದಿರವ ಸೇರೋಣ

ಮಧುರ ಸಂಗಮದ ರಾಗ ಭಾವದಲೀ
ಸುಖದ ಸುಧಾರಸ ಹೀರೋಣ
ಪರವಶಗೊಳಿಸುವ ಪ್ರಕೃತಿಯ ಮಡಿಲಲಿ
ಈ ದಿನ ತನುಮನ ನಲಿಯಲೀ ..

||ಬಾರೇ ನನ್ನ ರಾಜಕುಮಾರಿ
ಮಾರ.. ನನ್ನ ರಾಜಕುಮಾರ||

ನಮ್ಮ ನಡುವಿನ ದೂರ ಮರೆಯಲೀ
ಸ್ವರ್ಗ ಸೌಖ್ಯದ ದ್ವಾರ ತೆರೆಯಲೀ .
ದೇಹ ಮೋಹದ ದಾಹ ತೀರಲಿ
ಸಿಹಿಯ ಬಯಕೆಯ ಬೆಂಕಿ ಆರಲೀ..
ಎರಡೂ ತನುಗಳ ಬೆಸುಗೆಯಲ್ಲಿ
ವಿರಹ ತಾಪವೂ ಇರುವುದೇಲ್ಲಿ
ಎರಡೂ ತನುಗಳ ಬೆಸುಗೆಯಲ್ಲಿ
ವಿರಹ ತಾಪವೂ ಇರುವುದೇಲ್ಲಿ
ನಡೆವ ಪ್ರೇಮದ ಕ್ರೀಡೆಯಲ್ಲಿ
ನಮಗೇ ಸಮಯ ತಿಳಿಯುವುದೆಲ್ಲಿ
ಪರವಶಗೊಳಿಸುವ ಪ್ರಕೃತಿಯ ಮಡಿಲಲಿ
ಈ ದಿನ ತನುಮನ ನಲಿಯಲೀ ..

ಅಹ್ಹಹ್ಹ...  ಅಹ್ಹಹ್ಹ...  ಆಆ....
ಲಾಲಲಲಲಲ..  ಹುಂಹೂಂ..  ಹುಂಹೂಂ..
 

Bare Nanna song lyrics from Kannada Movie Aadarsha starring Srinivasamurthy, Vijay, Mysore Lokesh, Lyrics penned by R N Jayagopal Sung by P Susheela, Jayachandran, Music Composed by M Ranga Rao, film is Directed by D N Ramaswamy and film is released on 1983