-
ಬಿದ್ದಲ್ಲೇ ಬೇರೂರಿ ಗಗನಕ್ಕೆ ಕೈ ಎತ್ತಿ
ಹೂವಿಡುವ ಗಿಡ ಮರಕೆ ವಾಸ್ತುವೆಲ್ಲಿ
ಗುಡಿಸಲಿನ ಹೊಸಿಲಲ್ಲಿ ಬಡ ತಾಯ ಮಡಿಲಲ್ಲಿ
ನಸು ನಗುವ ಮಗು ಮನಕ್ಕೆ ವಾಸ್ತುವೆಲ್ಲಿ
ಮನಸೆಂಬ ಭೂಪಟದಿ ಗಡಿರೇಖೆ ಇಲ್ಲ
ಮನಸೆಂಬ ಮನೆಯಲ್ಲಿ ಗೋಡೆ ಇಲ್ಲ
ಹರಿವ ನೀರಿನ ಹಾಗೆ ಬದುಕು ಚಲಿಸಿರುವಾಗ
ಆಣೆಕಟ್ಟೆಯ ಮಾತು ಆಡಬೇಕೆ
ಬೀಸೊ ಗಾಳಿಯ ಅಲೆಗೆ ವಾಸ್ತುವೇಕೆ
||ಬಿದ್ದಲ್ಲೇ ಬೇರೂರಿ ಗಗನಕ್ಕೆ ಕೈ ಎತ್ತಿ
ಹೂವಿಡುವ ಗಿಡ ಮರಕೆ ವಾಸ್ತುವೆಲ್ಲಿ||
ಎಂತದೇ ಇರುಳನ್ನು ದಾಟಬಹುದು
ಹಚ್ಚಿಟ್ಟ ಕಂದೀಲು ಕೈಲಿದ್ದಾರೆ
ಹಣೆಬರಹ ಕೈಯಾರೆ ಬರೆಯಬಹುದು
ಎದೆಯಲ್ಲಿ ಅಕ್ಷರವ ಬಿತ್ತಿದ್ದರೆ
ಗಾಯ ಮಾಯಿಸುವಂತ ಬಿಸಿಲು ಬಂದಿರುವಾಗ
ಕಿಟಿಕಿ ಬಾಗಿಲುಗಳನು ಮುಚ್ಚಬೇಕೆ
ಹಕ್ಕಿ ಗೂಡಿನ ಉಲಿಗು ವಾಸ್ತುವೇಕೆ
||ಬಿದ್ದಲ್ಲೇ ಬೇರೂರಿ ಗಗನಕ್ಕೆ ಕೈ ಎತ್ತಿ
ಹೂವಿಡುವ ಗಿಡ ಮರಕೆ ವಾಸ್ತುವೆಲ್ಲಿ||
ಆತ್ಮೀಯವಾದಂತ ಸಂಭಂಧವೇ
ನಿಜವಾಗಿ ಮನೆಗಳ ವಿನ್ಯಾಸವು
ವಸ್ತುಗಳಿಗಿಂತ ವ್ಯಕ್ತಿಗಳನು
ಹಚ್ಚಿಕೊಂಡರೆ ಮಾತ್ರ ಸಂತೋಷವು
ತುತ್ತು ಕಾಣದ ಬಳಗ ಸುತ್ತ ನಿಂತಿರುವಾಗ
ಗತ್ತು ಶ್ರೀಮಂತಿಕೆಯ ಲೋಭವೇಕೆ
ಅಮ್ಮ ಹಚ್ಚಿದ ಒಲೆಗು ವಾಸ್ತು ಬೇಕೆ
||ಬಿದ್ದಲ್ಲೇ ಬೇರೂರಿ ಗಗನಕ್ಕೆ ಕೈ ಎತ್ತಿ
ಹೂವಿಡುವ ಗಿಡ ಮರಕೆ ವಾಸ್ತುವೆಲ್ಲಿ
ಗುಡಿಸಲಿನ ಹೊಸಿಲಲ್ಲಿ ಬಡ ತಾಯ ಮಡಿಲಲ್ಲಿ
ನಸು ನಗುವ ಮಗು ಮನಕ್ಕೆ ವಾಸ್ತುವೆಲ್ಲಿ||
-
ಬಿದ್ದಲ್ಲೇ ಬೇರೂರಿ ಗಗನಕ್ಕೆ ಕೈ ಎತ್ತಿ
ಹೂವಿಡುವ ಗಿಡ ಮರಕೆ ವಾಸ್ತುವೆಲ್ಲಿ
ಗುಡಿಸಲಿನ ಹೊಸಿಲಲ್ಲಿ ಬಡ ತಾಯ ಮಡಿಲಲ್ಲಿ
ನಸು ನಗುವ ಮಗು ಮನಕ್ಕೆ ವಾಸ್ತುವೆಲ್ಲಿ
ಮನಸೆಂಬ ಭೂಪಟದಿ ಗಡಿರೇಖೆ ಇಲ್ಲ
ಮನಸೆಂಬ ಮನೆಯಲ್ಲಿ ಗೋಡೆ ಇಲ್ಲ
ಹರಿವ ನೀರಿನ ಹಾಗೆ ಬದುಕು ಚಲಿಸಿರುವಾಗ
ಆಣೆಕಟ್ಟೆಯ ಮಾತು ಆಡಬೇಕೆ
ಬೀಸೊ ಗಾಳಿಯ ಅಲೆಗೆ ವಾಸ್ತುವೇಕೆ
||ಬಿದ್ದಲ್ಲೇ ಬೇರೂರಿ ಗಗನಕ್ಕೆ ಕೈ ಎತ್ತಿ
ಹೂವಿಡುವ ಗಿಡ ಮರಕೆ ವಾಸ್ತುವೆಲ್ಲಿ||
ಎಂತದೇ ಇರುಳನ್ನು ದಾಟಬಹುದು
ಹಚ್ಚಿಟ್ಟ ಕಂದೀಲು ಕೈಲಿದ್ದಾರೆ
ಹಣೆಬರಹ ಕೈಯಾರೆ ಬರೆಯಬಹುದು
ಎದೆಯಲ್ಲಿ ಅಕ್ಷರವ ಬಿತ್ತಿದ್ದರೆ
ಗಾಯ ಮಾಯಿಸುವಂತ ಬಿಸಿಲು ಬಂದಿರುವಾಗ
ಕಿಟಿಕಿ ಬಾಗಿಲುಗಳನು ಮುಚ್ಚಬೇಕೆ
ಹಕ್ಕಿ ಗೂಡಿನ ಉಲಿಗು ವಾಸ್ತುವೇಕೆ
||ಬಿದ್ದಲ್ಲೇ ಬೇರೂರಿ ಗಗನಕ್ಕೆ ಕೈ ಎತ್ತಿ
ಹೂವಿಡುವ ಗಿಡ ಮರಕೆ ವಾಸ್ತುವೆಲ್ಲಿ||
ಆತ್ಮೀಯವಾದಂತ ಸಂಭಂಧವೇ
ನಿಜವಾಗಿ ಮನೆಗಳ ವಿನ್ಯಾಸವು
ವಸ್ತುಗಳಿಗಿಂತ ವ್ಯಕ್ತಿಗಳನು
ಹಚ್ಚಿಕೊಂಡರೆ ಮಾತ್ರ ಸಂತೋಷವು
ತುತ್ತು ಕಾಣದ ಬಳಗ ಸುತ್ತ ನಿಂತಿರುವಾಗ
ಗತ್ತು ಶ್ರೀಮಂತಿಕೆಯ ಲೋಭವೇಕೆ
ಅಮ್ಮ ಹಚ್ಚಿದ ಒಲೆಗು ವಾಸ್ತು ಬೇಕೆ
||ಬಿದ್ದಲ್ಲೇ ಬೇರೂರಿ ಗಗನಕ್ಕೆ ಕೈ ಎತ್ತಿ
ಹೂವಿಡುವ ಗಿಡ ಮರಕೆ ವಾಸ್ತುವೆಲ್ಲಿ
ಗುಡಿಸಲಿನ ಹೊಸಿಲಲ್ಲಿ ಬಡ ತಾಯ ಮಡಿಲಲ್ಲಿ
ನಸು ನಗುವ ಮಗು ಮನಕ್ಕೆ ವಾಸ್ತುವೆಲ್ಲಿ||
Biddalle Beroori song lyrics from Kannada Movie Vasthu Prakara starring Jaggesh, Rakshith Shetty, Ananthnag, Lyrics penned by Jayanth Kaikini Sung by Vijay Prakash, Music Composed by V Harikrishna, film is Directed by Yogaraj Bhat and film is released on 2015