Devanu Thanda Ee Anubandha Lyrics

in Vasantha Lakshmi

Video:

LYRIC

ಜೋ ಜೋ ಜೋ ಜೋ ಜೋ
 
ದೇವನು ತಂದ ಈ ಅನುಬಂಧ
ತಂದಿದೆ ಮನಕೆ ಮಹದಾನಂದ
 
|| ದೇವನು ತಂದ ಈ ಅನುಬಂಧ
ತಂದಿದೆ ಮನಕೆ ಮಹದಾನಂದ….||
 
ಎಲ್ಲಿಯ ನೀನು ಎಲ್ಲಿಯ ನಾನು
ಕಾಣಲು ನಿನ್ನ ಕಾತುರವೇನು
ಹೃದಯದ ತುಂಬ ಹರುಷದ ಜೇನು
ಹೃದಯದ ತುಂಬ ಹರುಷದ ಜೇನು
ಆಸೆಯ ಕಡಲ ಹೊನ್ನಿನ ಮೀನು
 
|| ದೇವನು ತಂದ ಈ ಅನುಬಂಧ
ತಂದಿದೆ ಮನಕೆ ಮಹದಾನಂದ….||
 
ಹುಣ್ಣಿಮೆ ಬೆಳಕ ಸೆರೆಯಲಿ ಹಿಡಿದು
ಗೊಂಬೆಯ ಹಾಗೆ ಎರಕವ ಹೊಯ್ದು
ಜೀವವ ತುಂಬಿ ಕಾಣಿಕೆ ತಂದು
ಜೀವವ ತುಂಬಿ ಕಾಣಿಕೆ ತಂದು
ನೀಡಿದನೇನು ದೇವನು ಇಂದು
 
|| ದೇವನು ತಂದ ಈ ಅನುಬಂಧ
ತಂದಿದೆ ಮನಕೆ ಮಹದಾನಂದ….||
 
ಕಂಗಳ ತುಂಬಿ ಚಂದ್ರಿಕೆಯಾದೆ
ಮನವನು ತುಂಬಿ ನೀ ಮಿಂಚಾದೆ
ಮನೆಯನು ತುಂಬಿ ಹೊಂಬೆಳಕಾದೆ
ಮನೆಯನು ತುಂಬಿ ಹೊಂಬೆಳಕಾದೆ
ನಿನ್ನನ್ನು ಕಂಡು ಪರವಶಳಾದೆ
 
|| ದೇವನು ತಂದ ಈ ಅನುಬಂಧ
ತಂದಿದೆ ಮನಕೆ ಮಹದಾನಂದ
ಲಾಲಲಾ  ಲಾಲಲಾ
ಲಾಲಲಾ ಲಾಲಲಾ…..||

Devanu Thanda Ee Anubandha song lyrics from Kannada Movie Vasantha Lakshmi starring Srinath, Aarathi, Vishnuvardhan, Lyrics penned by Chi Udayashankar Sung by P Susheela, Music Composed by Vijaya Bhaskar, film is Directed by A V Sheshagiri Rao and film is released on 1978