Chandirana Hididu Lyrics

in Vaali

LYRIC

ಚಂದಿರನ ಹಿಡಿದು ಮಂಚದಲಿ ಕಟ್ಟಿಡು
ಮುಗಿಲನು ತಂದು ಮೆತ್ತೆಯ ಮಾಡಿಡು
ಚಂದಿರನ ಹಿಡಿದೆ ಮಂಚದಲಿ ಕಟ್ಟಿದೆ
ಮುಗಿಲನು ಎಳೆದೆ ಮತ್ತೆಯ ಮಾಡಿದೆ
ಉರಿಯೊ ಸೂರ್ಯನ ಕಡಲಲಿ ಬಚ್ಚಿಡು
ಇರುಳ ನೀ ಉಳಿಸಲು ಭೂಮಿಗೆ ಹೇಳಿರು
ಉರಿಯೊ ಸೂರ್ಯನ ಕಡಲಲಿ ಮುಚ್ಚಿದೆ
ಇರುಳನೆ ಉಳಿಸಲು ಧರಣಿಗೆ ಹೇಳಿದೆ
ಇಂದು ಮೊದಲಿರುಳು
ಇಂದು ಮೊದಲಿರುಳು ನಮ್ಮ ಯೌವ್ವನವು ನಗಲು
ಇಂದು ಮೊದಲಿರುಳು ನಮ್ಮ ಯೌವ್ವನವು ನಗಲು
ಪ್ರೇಮವೋ ಕಾಮವೋ ಮಾಯವೋ ಕಾಣೆ
 
ಅಂದ ಮೈ ಅಂದ ಇದು ಕಾಡುವ ಕಾಮನಬಿಲ್ಲು
ಬಾಣನ ಹೂಡೋಕೆ ಬಂದಾನೊ ಈ ಮದನ
ಚೋರ ನನ್ನ ಜೋರ ತುಂಟಾಟಕೆ ನೀನೆ ಮೊದಲು
ರತಿ ಮನ್ಮಥರು ಕಂಡಿಲ್ಲ ಮಿಲನ
ನನ್ನ ನಡುವನು ನೇವರಿಸು ನನ್ನ ಒಳಗೆ ಅವರಿಸು
ಎದೆ ಕಂಪಿಸಿ ಕಂಪಿಸಿ ಚುಂಬಿಸಿ ಸ್ವೀಕರಿಸು
ಸ್ಪರ್ಶವೋ ಹರ್ಷವೋ ಪ್ರೇಮ ವರ್ಷವೋ ಕಾಣೆ
 
ಸಹಿಸು ನನ್ನ ದಹಿಸು ನಿನ್ನ ಬೆಚ್ಚಿನ ಬಾಹುಗಳಲ್ಲಿ
ಪ್ರಣಯದ ಪಂದ್ಯದಲಿ ಬೆವರೆ ಪನ್ನೀರು
ಹೇಳಿ ಕಳಿಸು ಬೇಗ ತಿಳಿಸು ಹೇಗೆ ನನ್ನಲಿ ನಿನ ಬಂಧಿಸಲಿ
ಒಂದೊಂದು ಅಂಗ ಒಂದೊಂದು ಹೂ ತೇರು
ಕಂಪನಕ ಕೊನೆ ಇಲ್ಲ ಕೊಸರಾಟಕ ದಣಿವಿಲ್ಲ
ಇದು ಇಂದ್ರನು ಕಾಣದ ರೋಮಾಂಚನವಮ್ಮಾ
ಧರ್ಮವೋ ಮರ್ಮವೋ ಅತಿ ರೋಮವೋ ಕಾಣೆ
 
||ಚಂದಿರನ ಹಿಡಿದು ಮಂಚದಲಿ ಕಟ್ಟಿಡು
ಮುಗಿಲನು ತಂದು ಮೆತ್ತೆಯ ಮಾಡಿಡು
ಚಂದಿರನ ಹಿಡಿದೆ ಮಂಚದಲಿ ಕಟ್ಟಿದೆ
ಮುಗಿಲನು ಎಳೆದೆ ಮತ್ತೆಯ ಮಾಡಿದೆ
ಉರಿಯೊ ಸೂರ್ಯನ ಕಡಲಲಿ ಬಚ್ಚಿಡು
ಇರುಳ ನೀ ಉಳಿಸಲು ಭೂಮಿಗೆ ಹೇಳಿರು
ಉರಿಯೊ ಸೂರ್ಯನ ಕಡಲಲಿ ಮುಚ್ಚಿದೆ
ಇರುಳನೆ ಉಳಿಸಲು ಧರಣಿಗೆ ಹೇಳಿದೆ
ಇಂದು ಮೊದಲಿರುಳು
ಇಂದು ಮೊದಲಿರುಳು ನಮ್ಮ ಯೌವ್ವನವು ನಗಲು
ಇಂದು ಮೊದಲಿರುಳು ನಮ್ಮ ಯೌವ್ವನವು ನಗಲು
ಪ್ರೇಮವೋ ಕಾಮವೋ ಮಾಯವೋ ಕಾಣೆ
ಪ್ರೇಮವೋ ಕಾಮವೋ ಮಾಯವೋ ಕಾಣೆ||

Chandirana Hididu song lyrics from Kannada Movie Vaali starring Sudeep, Poonam, Divyashree, Lyrics penned by K Kalyan Sung by Unni Krishnan, Anuradha Sriram, Music Composed by Rajesh Ramanath, film is Directed by S Mahendar and film is released on 2001