Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೀವನದಿಗೆ ಬಲೆಯ ಬೀಸಿ ಹರಿವು ಹಿಡಿವ ನೀನು
ಕಡಲು ಮುಳುಗಿ ಕಣ್ಣಮುಚ್ಚುವ ಕಾಲವೆಂಬ ಮೀನು
ಹರಿವು ಬಂಧನ ಏನೆ ಇರಲಿ ನನ್ನೊಳ ಇರಿಸು ನನ್ನ
ನಾಲ್ಕು ದಿನದ ಗೋಳಿನ ಬಾಳು ಕಾಲ ಕೊರೆದ ಕನ್ನ
ಜೀವನದಿಗೆ ಬಲೆಯ ಬೀಸಿ ಹರಿವು ಹಿಡಿವ ನೀನು
ಕಡಲು ಮುಳುಗಿ ಕಣ್ಣಮುಚ್ಚುವ ಕಾಲವೆಂಬ ಮೀನು
 
ಒಳಗೆ ಮುಗಿಲು ರೆಕ್ಕೆ ಬಿಚ್ಚಿ ಹಾರುವಂತೆ ಗರುಡ
ಹೊರಗೆ ಬಯಲು ರೆಪ್ಪೆ ಮುಚ್ಚಿ ಕಾಣುವಂತೆ ಕುರುಡ
ಇದ್ದುದೇನು ಕಂಡುದೇನು ಎಲ್ಲ ಮಾಯ ಮಾಯ
ಕೊಟ್ಟುದೇನು ಕೊಂಬುದೇನು ಬಾಳು ಗೀಚೊ ಗಾಯ
ಮೌನವೀಣೆಗೆ ಭಿನ್ನ ಭೇದದ ಸದ್ದು ಹೊಲೆವ ಮರ್ಜಿ
ತೇಪೆ  ಇಟ್ಟನೊ ಜನುಮ ಜನುಮದ ಕೌದಿ ಹೊಲೆವ ದರ್ಜಿ
 
||ಜೀವನದಿಗೆ ಬಲೆಯ ಬೀಸಿ ಹರಿವು ಹಿಡಿವ ನೀನು
ಕಡಲು ಮುಳುಗಿ ಕಣ್ಣಮುಚ್ಚುವ ಕಾಲವೆಂಬ ಮೀನು||
 
ಯಾರಿಗಾರು ಯಾಕಾದರು ಎಲ್ಲ ಶೂನ್ಯ ಶೂನ್ಯ
ನೀನು ನಾನು ಆನು ತಾನು ಎಲ್ಲ ಅಳೆಯೊ ಪ್ರಳಯ
ಮಾಯದ ಗಾಯ ಗಾಯದ ಮಾಯ ಎಲ್ಲ ಅಳಿಸೊ ಪ್ರಳಯ
ಒಡಕು ಬಡಕು ಜಾತಿ ನೀತಿ ಎಲ್ಲ ನುಂಗೊ ಪ್ರಳಯ
ಎದೆಯ ಮಿಡಿತದ ತಂತಿ ಮೀಟುತ ಹಾಡುತಾನೊ ಸಲೀಮ
ಕಾಲಪಾಶದ ಕೈಬಲೆ ತೊಟ್ಟು ನಲಿಯುತಾನೆ ಗುಲಾಮ
 
||ಜೀವನದಿಗೆ ಬಲೆಯ ಬೀಸಿ ಹರಿವು ಹಿಡಿವ ನೀನು
ಕಡಲು ಮುಳುಗಿ ಕಣ್ಣಮುಚ್ಚುವ ಕಾಲವೆಂಬ ಮೀನು||

ಜೀವನದಿಗೆ ಬಲೆಯ ಬೀಸಿ ಹರಿವು ಹಿಡಿವ ನೀನು
ಕಡಲು ಮುಳುಗಿ ಕಣ್ಣಮುಚ್ಚುವ ಕಾಲವೆಂಬ ಮೀನು
ಹರಿವು ಬಂಧನ ಏನೆ ಇರಲಿ ನನ್ನೊಳ ಇರಿಸು ನನ್ನ
ನಾಲ್ಕು ದಿನದ ಗೋಳಿನ ಬಾಳು ಕಾಲ ಕೊರೆದ ಕನ್ನ
ಜೀವನದಿಗೆ ಬಲೆಯ ಬೀಸಿ ಹರಿವು ಹಿಡಿವ ನೀನು
ಕಡಲು ಮುಳುಗಿ ಕಣ್ಣಮುಚ್ಚುವ ಕಾಲವೆಂಬ ಮೀನು
 
ಒಳಗೆ ಮುಗಿಲು ರೆಕ್ಕೆ ಬಿಚ್ಚಿ ಹಾರುವಂತೆ ಗರುಡ
ಹೊರಗೆ ಬಯಲು ರೆಪ್ಪೆ ಮುಚ್ಚಿ ಕಾಣುವಂತೆ ಕುರುಡ
ಇದ್ದುದೇನು ಕಂಡುದೇನು ಎಲ್ಲ ಮಾಯ ಮಾಯ
ಕೊಟ್ಟುದೇನು ಕೊಂಬುದೇನು ಬಾಳು ಗೀಚೊ ಗಾಯ
ಮೌನವೀಣೆಗೆ ಭಿನ್ನ ಭೇದದ ಸದ್ದು ಹೊಲೆವ ಮರ್ಜಿ
ತೇಪೆ  ಇಟ್ಟನೊ ಜನುಮ ಜನುಮದ ಕೌದಿ ಹೊಲೆವ ದರ್ಜಿ
 
||ಜೀವನದಿಗೆ ಬಲೆಯ ಬೀಸಿ ಹರಿವು ಹಿಡಿವ ನೀನು
ಕಡಲು ಮುಳುಗಿ ಕಣ್ಣಮುಚ್ಚುವ ಕಾಲವೆಂಬ ಮೀನು||
 
ಯಾರಿಗಾರು ಯಾಕಾದರು ಎಲ್ಲ ಶೂನ್ಯ ಶೂನ್ಯ
ನೀನು ನಾನು ಆನು ತಾನು ಎಲ್ಲ ಅಳೆಯೊ ಪ್ರಳಯ
ಮಾಯದ ಗಾಯ ಗಾಯದ ಮಾಯ ಎಲ್ಲ ಅಳಿಸೊ ಪ್ರಳಯ
ಒಡಕು ಬಡಕು ಜಾತಿ ನೀತಿ ಎಲ್ಲ ನುಂಗೊ ಪ್ರಳಯ
ಎದೆಯ ಮಿಡಿತದ ತಂತಿ ಮೀಟುತ ಹಾಡುತಾನೊ ಸಲೀಮ
ಕಾಲಪಾಶದ ಕೈಬಲೆ ತೊಟ್ಟು ನಲಿಯುತಾನೆ ಗುಲಾಮ
 
||ಜೀವನದಿಗೆ ಬಲೆಯ ಬೀಸಿ ಹರಿವು ಹಿಡಿವ ನೀನು
ಕಡಲು ಮುಳುಗಿ ಕಣ್ಣಮುಚ್ಚುವ ಕಾಲವೆಂಬ ಮೀನು||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ