Sampige Marada Hasirele Lyrics

ಸಂಪಿಗೆ ಮರದ ಹಸಿರೆಲೆ Lyrics

in Upasane

in ಉಪಾಸನೆ

Video:
ಸಂಗೀತ ವೀಡಿಯೊ:

LYRIC

ಸಂಪಿಗೆ ಮರದ ಹಸಿರೆಲೆ
ನಡುವೆ ಕೋಗಿಲೆ ಹಾಡಿತ್ತು
ಸಂಪಿಗೆ ಮರದ ಹಸಿರೆಲೆ
ನಡುವೆ ಕೋಗಿಲೆ ಹಾಡಿತ್ತು
ಚಿಕ್ಕವ್ವ....ಚಿಕ್ಕವ್ವ.....
ಎನ್ನುತ ತನ್ನಯ ಗೆಳೆಯರ ಕರೆದಿತ್ತು
ಅದ ಕೇಳಿ ನಾ ಮೈ ಮರೆತೆ
ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ
 
ದೂರದ ಗುಡಿಯಲಿ ಪೂಜೆಯ ವೇಳೆಗೆ
ಘಂಟೆಯು ಮೊಳಗಿತ್ತು
ದೂರದ ಗುಡಿಯಲಿ ಪೂಜೆಯ ವೇಳೆಗೆ
ಘಂಟೆಯು ಮೊಳಗಿತ್ತು
ಟಣ್ ಡಣ್ ಟಣ್ ಡಣ್
ಎನ್ನುತ ಸೇವೆಗೆ ಎಲ್ಲರ ಕರೆದಿತ್ತು
ಅದಕೇಳಿ ನಾ ಮೈಮರೆತೆ
ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ
ನಾ ಹಾಡಿದೆ ಈ ಕವಿತೆ
 
ಹರಿಯುವ ನದಿಯ ನೋಡುತ ನಿಂತೆ
ಅಲೆಗಳು ಕುಣಿದಿತ್ತು
ಹರಿಯುವ ನದಿಯ ನೋಡುತ ನಿಂತೆ
ಅಲೆಗಳು ಕುಣಿದಿತ್ತು
ಕಲ ಕಲ ಕಲ ಕಲ......
ಮಂಜುಳನಾದವು ಕಿವಿಗಳ ತುಂಬಿತ್ತು
ಅದಕೇಳಿ ನಾ ಮೈ ಮರೆತೆ ಸ್ವರವೊಂದು
ಆಗಲೆ ಕಲಿತೆ
ಹಾಡಿದೆ ಈ ಕವಿತೆ
ನಾ ಹಾಡಿದೆ ಈ ಕವಿತೆ

ಸಂಪಿಗೆ ಮರದ ಹಸಿರೆಲೆ
ನಡುವೆ ಕೋಗಿಲೆ ಹಾಡಿತ್ತು
ಸಂಪಿಗೆ ಮರದ ಹಸಿರೆಲೆ
ನಡುವೆ ಕೋಗಿಲೆ ಹಾಡಿತ್ತು
ಚಿಕ್ಕವ್ವ....ಚಿಕ್ಕವ್ವ.....
ಎನ್ನುತ ತನ್ನಯ ಗೆಳೆಯರ ಕರೆದಿತ್ತು
ಅದ ಕೇಳಿ ನಾ ಮೈ ಮರೆತೆ
ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ
 
ದೂರದ ಗುಡಿಯಲಿ ಪೂಜೆಯ ವೇಳೆಗೆ
ಘಂಟೆಯು ಮೊಳಗಿತ್ತು
ದೂರದ ಗುಡಿಯಲಿ ಪೂಜೆಯ ವೇಳೆಗೆ
ಘಂಟೆಯು ಮೊಳಗಿತ್ತು
ಟಣ್ ಡಣ್ ಟಣ್ ಡಣ್
ಎನ್ನುತ ಸೇವೆಗೆ ಎಲ್ಲರ ಕರೆದಿತ್ತು
ಅದಕೇಳಿ ನಾ ಮೈಮರೆತೆ
ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ
ನಾ ಹಾಡಿದೆ ಈ ಕವಿತೆ
 
ಹರಿಯುವ ನದಿಯ ನೋಡುತ ನಿಂತೆ
ಅಲೆಗಳು ಕುಣಿದಿತ್ತು
ಹರಿಯುವ ನದಿಯ ನೋಡುತ ನಿಂತೆ
ಅಲೆಗಳು ಕುಣಿದಿತ್ತು
ಕಲ ಕಲ ಕಲ ಕಲ......
ಮಂಜುಳನಾದವು ಕಿವಿಗಳ ತುಂಬಿತ್ತು
ಅದಕೇಳಿ ನಾ ಮೈ ಮರೆತೆ ಸ್ವರವೊಂದು
ಆಗಲೆ ಕಲಿತೆ
ಹಾಡಿದೆ ಈ ಕವಿತೆ
ನಾ ಹಾಡಿದೆ ಈ ಕವಿತೆ

Sampige Marada Hasirele song lyrics from Kannada Movie Upasane starring Aarathi, Leelavathi, Adavani Lakshmidevi, Lyrics penned by R N Jayagopal Sung by B K Sumitra, Music Composed by Vijaya Bhaskar, film is Directed by S R Puttanna Kanagal and film is released on 1974
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ