Kannada Kannada Lyrics

in Trigger

LYRIC

ಸುಂದರಕ್ಕಿಂತ ಸುಂದರವಾದ
ಕನ್ನಡ ನಾಡು ನಮ್ಮ ನಾಡು
ಮಾಧುರ್ಯಕ್ಕಿಂತ ಮಾಧುರ್ಯವಾದ
ಕನ್ನಡ ಭಾಷೆ ಕೇಳಿ ನೋಡು….
ಕನ್ನಡ ಕನ್ನಡ ಕನ್ನಡ ಕನ್ನಡ
ಸುಂದರಕ್ಕಿಂತ ಸುಂದರವಾದ
ಕನ್ನಡನಾಡು ನಮ್ಮ ನಾಡು…..
 
ಕಾಡಿನ ಹಸಿರೇ ಸೀರೆಯ ಸೆರಗು
ಜೋಗದ ನೆರಿಗೆ ಪಾದದವರೆಗು
ಮುಂಜಾನೆ ಮಂಜೆಲ್ಲ ಮುತ್ತಿನ ಸರವು
ಹೇಳೋಕೆ ಪದವಿಲ್ಲ ಕನ್ನಡ ಚೆಲುವು
ಸ್ವರ್ಗನೇ ನಮ್ಮ ನಾಡು
ಕನ್ನಡ ಉಸಿರಾಗಲಿ
ಕನ್ನಡ ಬದುಕಾಗಲಿ
 
ಕಸ್ತೂರಿ ತಿಲಕ ತಾಯಿಯ ಹಣೆಗೆ
ಪಂಪನ ಕವಿತೆ ಹೂಗಳು ಮುಡಿಗೆ
ನವಿಲು ಗರಿಯೇ ಕನ್ನಡತಿ ಜುಮುಕಿ
ಕನ್ನಡದ ಅಭಿಮಾನ ಎದೆ ತುಂಬಿ ತುಳುಕಿ
ಬಂಗಾರ ನಮ್ಮ ನಾಡು…..
ಕನ್ನಡ ದನಿಯಾಗಲಿ
ಕನ್ನಡ ಗೆಲುವಾಗಲಿ
 
||ಸುಂದರಕ್ಕಿಂತ ಸುಂದರವಾದ
ಕನ್ನಡನಾಡು ನಮ್ಮ ನಾಡು
ಮಾಧುರ್ಯಕ್ಕಿಂತ ಮಾಧುರ್ಯವಾದ
ಕನ್ನಡ ಭಾಷೆ ಕೇಳಿ ನೋಡು…
ಕನ್ನಡ ಕನ್ನಡ ಕಸ್ತೂರಿ ಕನ್ನಡ||